ಜಬಲ್ಪುರ(ಮಧ್ಯ ಪ್ರದೇಶ): ಆಕ್ಸಿಜನ್ ಸಮಸ್ಯೆಯಿಂದ ನರಳುತ್ತಿದ್ದ ರೋಗಿಗಳ ಸಹಾಯಕ್ಕೆ ಪೊಲೀಸ್ವೋರ್ವರು ದೌಡಾಯಿಸಿ ಪ್ರಾಣ ಉಳಿಸಿದ ಘಟನೆ ನಗರದಲ್ಲಿ ಕಂಡು ಬಂದಿದೆ.
ಅರ್ಧ ಗಂಟೆ ಮಾತ್ರ ಆಕ್ಸಿಜನ್...
ಗೋಹಲ್ಪುರ ನಗರದ ನ್ಯೂಟೋಮ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ಉಂಟಾಗಿತ್ತು. ಕೇವಲ ಅರ್ಧ ಗಂಟೆ ಮಾತ್ರ ರೋಗಿಗಳಿಗೆ ಆಕ್ಸಿಜನ್ ಒದಗಿಸಬಹುದಾಗಿತ್ತು.
ಸಂಬಂಧಿಕರ ಆಕ್ರೋಶ..
ಆಕ್ಸಿಜನ್ ಸಮಸ್ಯೆಯಿಂದಾಗಿ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಅಸಹಾಯಕರಾದ ಸಿಬ್ಬಂದಿ..
ಕೇವಲ ಅರ್ಧ ಗಂಟೆಯಲ್ಲಿ ಆಕ್ಸಿಜನ್ ಪೂರೈಸಲು ಆಸ್ಪತ್ರೆಯ ಸಿಬ್ಬಂದಿ ಅಸಹಾಯಕರಾಗಿದ್ದರು. ಮುಂದೆ ಏನು ಮಾಡ್ಬೇಕೆಂಬ ಚಿಂತೆಯಲ್ಲಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಸಹಾಯಕ್ಕೆ ದೌಡಾಯಿಸಿದರು. ಅವರೇ ರವೀಂದ್ರ ಗೌತಮ್.
ಆಕ್ಸಿಜನ್ ಸಿಲಿಂಡರ್ ಹೊತ್ತು ವಾಹನಕ್ಕೆ ಹಾಕಿದ ಪೊಲೀಸ್...!
ಸಹಾಯಕ್ಕೆ ದೌಡಾಯಿಸಿದ ಪೊಲೀಸ್ ರವೀಂದ್ರ ಗೌತಮ್ ತಂಡ, ಆಕ್ಸಿಜನ್ ಘಟಕಕ್ಕೆ ತೆರಳಿ ವಾಹನದಲ್ಲಿ ಅವರೇ ಆಕ್ಸಿಜನ್ ಸಿಲಿಂಡರ್ಗಳನ್ನು ತುಂಬಿ ಆಸ್ಪತ್ರೆಗೆ ಪೂರೈಸಿದ್ದಾರೆ. ತಂದ ಆಕ್ಸಿಜನ್ನನ್ನು ಸರಿಯಾದ ಸಮಯಕ್ಕೆ ರೋಗಿಗಳಿಗೆ ನೀಡುವುದರ ಮೂಲಕ 22 ಜೀವಗಳನ್ನು ಉಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಪೊಲೀಸ್ ಅಧಿಕಾರಿ ಬರದೇ ಇದ್ದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂಬುದು ಸ್ಥಳೀಯರ ಮಾತಾಗಿದೆ. ಗೌತಮ್ ಅವರ ಈ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.