ಕೊಡೆರ್ಮ(ಜಾರ್ಖಂಡ್): ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಪ್ರಾಣದ ಹಂಗು ತೆರೆದು ಕಾನ್ಸ್ಟೇಬಲ್ ರಕ್ಷಿಸಿರುವ ಘಟನೆ ಕೊಡೆರ್ಮ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಿಹಾರದ ಫತೇಪುರ್ ನಿವಾಸಿಯಾದ ಬಜರಂಗಿ ಮಾಂಝಿ ಎಂದು ಗುರುತಿಸಲಾಗಿದೆ. ಈತ ರೈಲ್ವೆ ಹಳಿ ಬಳಿ ಹೋಗಿ ಎದುರಿನಿಂದ ಬರುತ್ತಿದ್ದ ರೈಲಿಗಾಗಿ ಕಾಯುತ್ತಿದ್ದನು. ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು.
ಇದನ್ನು ಗಮನಿಸಿದ ಪಪ್ಪು ಯಾದವ್ ಎಂಬ ಕಾನ್ಸ್ಟೇಬಲ್ಕೂಡಲೇ ಹಳಿಯ ಬಳಿ ಹೋಗಿ ಯುವಕನ್ನು ಪಕ್ಕಕ್ಕೆ ಎಳೆದು ರಕ್ಷಿಸಿದ್ದಾನೆ. ರೈಲು ಹೋಗುವವರಗೂ ಯುವಕನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಘಟನೆ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಕಾನ್ಸ್ಟೇಬಲ್ ಕೆಲಸಕ್ಕೆ ರೈಲ್ವೆ ಅಧಿಕಾರಿಗಳು ಸೇರಿದಂತೆ ನಿಲ್ದಾಣದಲ್ಲಿದ್ದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಓದಿ: ಆರು ಮದುವೆಯಾಗಿದ್ದ ಮಾಜಿ ಸಚಿವನನ್ನು ಜೈಲಿಗಟ್ಟಿದ 4ನೇ ಹೆಂಡತಿ : ಮೋದಿಗೆ ಥ್ಯಾಂಕ್ಸ್ ಹೇಳಿದ ನಗ್ಮಾ