ETV Bharat / bharat

ಹತ್ತು ವರ್ಷದಲ್ಲೇ ಬದಲಾದ ಮನ್ ಹಣೆಬರಹ: ಪಂಜಾಬ್​ ಸಿಎಂ ಗದ್ದುಗೆ ಏರಲಿದ್ದಾರೆ ಕಾಮಿಡಿಯನ್!

ಭಗವಂತ್‌ ಮನ್ 'ಜುಗ್ನು ಮಸ್ತ್ ಮಸ್ತ್' ಎಂಬ ಟಿವಿ ಶೋನಲ್ಲಿ ತಮ್ಮ ಹಾಸ್ಯದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ನಂತರ 2011ರಲ್ಲಿ ಪಂಜಾಬ್ ಪೀಪಲ್ಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ರಾಜಕೀಯಕ್ಕೆ ಬಂದ ಸರಿಯಾಗಿ ಹತ್ತು ವರ್ಷದಲ್ಲೇ ಈಗ ಪಂಜಾಬ್​ ಮುಖ್ಯಮಂತ್ರಿ ಗಾದಿಗೇರಲು ಮನ್​ ಸಿದ್ಧವಾಗಿದ್ದಾರೆ.

Bhagwant Mann
Bhagwant Mann
author img

By

Published : Mar 10, 2022, 8:33 PM IST

ದೇಶದ ಗಮನ ಸೆಳೆದಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಐದು ರಾಜ್ಯಗಳ ಪೈಕಿ ಪಂಜಾಬ್​ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಆಮ್​ ಆದ್ಮಿ ಪಕ್ಷ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಒಂದು ಕಾಲದ ಕಾಮಿಡಿಯನ್​ ಆಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮನ್ ಪಂಜಾಬ್​ ಅಧಿಕಾರದ ಚುಕ್ಕಾಣಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ಹೌದು, ಸದಾ ಹಳದಿ ಪಗಡಿಯಲ್ಲೇ ಮಿಂಚುವ 48 ವರ್ಷದ ಭಗವಂತ್‌ ಮನ್ ಒಂದು ಕಾಲದಲ್ಲಿ ಕಾಮಿಡಿಯನ್​​ ಆಗಿದ್ದರು. 1973ರಲ್ಲಿ ಸಂಗ್ರೂರಿನ ಸತೋಜ್ ಗ್ರಾಮದಲ್ಲಿ ಜನಿಸಿದ್ದ ಮನ್, ಹಾಸ್ಯನಟರಾಗಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 'ಜುಗ್ನು ಮಸ್ತ್ ಮಸ್ತ್' ಎಂಬ ಟಿವಿ ಶೋನಲ್ಲಿ ತಮ್ಮ ಹಾಸ್ಯದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ಅಲ್ಲದೇ, ಹಲವು ಹಾಸ್ಯ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದರು. ಹೀಗಿದ್ದ ಮನ್​ 2011ರಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪಂಜಾಬ್ ಪೀಪಲ್ಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಹೀಗೆ ರಾಜಕೀಯಕ್ಕೆ ಬಂದ ಸರಿಯಾಗಿ ಹತ್ತು ವರ್ಷದಲ್ಲೇ ಈಗ ಪಂಜಾಬ್​ ಮುಖ್ಯಮಂತ್ರಿ ಗಾದಿಗೆ ಏರಲು ಮನ್​ ಸಿದ್ಧವಾಗಿದ್ದಾರೆ.

ಸೋತು ಗೆದ್ದ ಭಗವಂತ್​: ರಾಜಕೀಯಕ್ಕೆ ಸೇರಿದ್ದ ಒಂದು ವರ್ಷದಲ್ಲೇ ಭಗವಂತ್​ ಮನ್​ ಚುನಾವಣೆಗೆ ನಿಂತು ಸೋತಿದ್ದರು. 2012ರಲ್ಲಿ ಅವರು ಲೆಹ್ರಗಾಗಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಅವರು, ಅಲ್ಲಿಂದ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದರು.

2014ರಲ್ಲಿ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಸುಖದೇವ್ ಸಿಂಗ್ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಪಂಜಾಬ್ ರಾಜಕೀಯದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡರು. ಎರಡೇ ಅವಧಿಗೂ ಆಯ್ಕೆಯಾಗಿ ಪ್ರಭಾವಿ ನಾಯಕರಾದರು. ಅಲ್ಲದೇ, ಪಂಜಾಬ್​ನಲ್ಲಿ ಆಪ್​ಗೆ ಗಟ್ಟಿ ನೆಲೆಯನ್ನೂ ತಂದು ಕೊಟ್ಟರು. ಅಲ್ಲದೇ, ಆಪ್​ನಲ್ಲಿ ಅರವಿಂದ್​ ಕೇಜ್ರಿವಾಲ್​ ಬಳಿಕ ಎರಡನೇ ಪ್ರಮುಖ ನಾಯಕನ ಮಟ್ಟಕ್ಕೆ ಬೆಳೆದರು.

ಇದನ್ನೂ ಓದಿ: ದೆಹಲಿ ನಂತರ ಪಂಜಾಬ್​ನಲ್ಲೂ 'ಆಪ್'ಗೆ ಪ್ರಚಂಡ ಗೆಲುವು​: ಸಿಖ್ಖರ 'ಮನ್'​ ಗೆದ್ದಿದ್ದೇಗೆ?

ಸಂಸತ್ತಿನಲ್ಲೂ ತಮ್ಮ ಭಾಷಣದ ಮೂಲಕ ಗಮನ ಸೆಳೆಯುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ಯಾವಾಗಲೂ 'ಇಂಕ್ವಿಲಾಬ್ ಜಿಂದಾಬಾದ್' ಎನ್ನುತ್ತಲೇ ಪಂಜಾಬ್​ನ ಘಟಾನುಘಟಿ ರಾಜಕೀಯ ನಾಯಕರ ಎದುರು ಘರ್ಜಿಸುತ್ತಿದ್ದರು. 2017ರ ವಿಧಾನಸಭೆಯ ಚುನಾವಣೆಯಲ್ಲಿ ಆಪ್​ 20 ಸ್ಥಾನಗಳನ್ನು ಗೆಲುವಿನಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು.

2022ರ ವಿಧಾನಸಭಾ ಚುನಾವಣೆಗೆ ಮುನ್ನವೇ ಮತ್ತಷ್ಟು ಸಕ್ರಿಯವಾಗಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿದರು. ಹೀಗಾಗಿಯೇ ಲೋಕಸಭಾ ಸದಸ್ಯರಾಗಿದ್ದರೂ ಭಗವಂತ್‌ ಮನ್​ನನ್ನು ಚುನಾವಣೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅರವಿಂದ್​ ಕೇಜ್ರಿವಾಲ್ ಘೋಷಿಸಿದ್ದರು. ಪಂಜಾಬ್​ನಾದ್ಯಂತ 300ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ಭಗವಂತ್‌ ನಡೆಸಿದ್ದರು.

ಇನ್ನು, ಭಗವಂತ್‌ ಮನ್ ಕೆಲವೊಮ್ಮೆ ವಿವಾದಕ್ಕೂ ಒಳಗಾಗಿದ್ದಾರೆ. ಸಂಸತ್​ ಕಲಾಪಕ್ಕೆ ಮದ್ಯ ಸೇವಿಸಿ ಹಾಜರಾಗಿದ್ದರು ಎಂಬ ಆರೋಪವೂ ಕೇಳಿತ್ತು. ನಂತರ 2019ರಲ್ಲಿ ಭಗವಂತ್‌ ಮನ್ ಕುಡಿತವನ್ನು ಬಿಟ್ಟಿದ್ಧಾರೆ ಎಂದು ಖುದ್ದು ಕೇಜ್ರಿವಾಲ್​ ಬಹಿರಂಗವಾಗಿ ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.