ಕಾನ್ಪುರ (ಉತ್ತರಪ್ರದೇಶ) : ಇಲ್ಲಿನ ಕ್ಯಾಂಟ್ ಪ್ರದೇಶದ ನಿವಾಸಿ ಕರ್ನಲ್ ನೀರಜ್ ತನ್ನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕರ್ನಲ್ ನೀರಜ್ ತನ್ನ ಬಾಲ್ಯದ ಗೆಳೆಯ ಹಾಗೂ ಆತನ ಪತ್ನಿಯನ್ನು ಮನೆಗೆ ಡಿನ್ನರ್ಗೆ ಆಹ್ವಾನಿಸಿ ಈ ದುಷ್ಕೃತ್ಯ ಎಸಗಿದ್ದಾನೆ.
ನೀರಜ್ ಇಬ್ಬರಿಗೂ ಪಾನೀಯ ನೀಡಿ, ಸ್ನೇಹಿತನ ಪಾನೀಯಕ್ಕೆ ಮಾದಕ ದ್ರವ್ಯ ಸೇರಿಸಿದ್ದಾನೆ. ಪಾನೀಯ ಸೇವಿಸಿದ ಸ್ನೇಹಿತ ಮೂರ್ಛೆ ತಪ್ಪಿದ ಕೂಡಲೇ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಪರಾರಿಯಾಗಿದ್ದಾನೆ. ಬಳಿಕ ಎಚ್ಚರಗೊಂಡ ಸ್ನೇಹಿತ ತನ್ನ ಪತ್ನಿಯೊಂದಿಗೆ ಕ್ಯಾಂಟ್ ಪೊಲೀಸ್ ಠಾಣೆಗೆ ತೆರಳಿ ವಿಷಯದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ ರಷ್ಯಾ ಮೂಲದವರು. ಮಹಿಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರ, ಹಲ್ಲೆ ಮತ್ತು ಇತರ ವಿಭಾಗಗಳಲ್ಲಿ ನೀರಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಲಾಗಿದೆ.