ಪಾಲಕ್ಕಾಡ್ (ಕೇರಳ): ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ನಾಯಿ ಕಚ್ಚಿದೆ. ಅವರು ಅಗತ್ಯ ಲಸಿಕೆಯನ್ನು ತೆಗೆದುಕೊಂಡರೂ ರೇಬೀಸ್ ಸೋಂಕಿಗೆ ಬಲಿಯಾಗಿದ್ದಾರೆ.
ಮೇ 30 ರಂದು ಶ್ರೀಲಕ್ಷ್ಮಿಗೆ (19) ತಮ್ಮ ನೆರೆಹೊರೆಯವರ ಮನೆಯ ನಾಯಿ ಕಚ್ಚಿದೆ. ಇದಾದ ನಂತರ ವೈದ್ಯರು ಸೂಚಿಸಿದ ಎಲ್ಲಾ ಅಗತ್ಯ ಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದರಂತೆ. ಆರಂಭಿಕ ದಿನಗಳಲ್ಲಿ ಯುವತಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಕೆಲವು ದಿನಗಳ ಹಿಂದೆ ರೇಬೀಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತೀವ್ರ ಜ್ವರ ಕಾಣಿಸಿಕೊಂಡ ಪರಿಣಾಮ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ಇಂದು ಮುಂಜಾನೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ಬೈಕ್ ಅಪಘಾತದಲ್ಲಿ ವ್ಯಕ್ತಿ ಸಾವು: ಸಂಚಾರಿ ನಿಯಮ ಉಲ್ಲಂಘನೆ ಎಂದು ದಂಡ ವಿಧಿಸಿದ ಕೋರ್ಟ್