ETV Bharat / bharat

ಅಪ್ರಾಪ್ತ ಸೋದರಳಿಯನಿಗೆ ಕಾಲೇಜ್​​ ಬಸ್​ ಚಾಲನೆಗೆ ಅವಕಾಶ: ಕೆಲಸದಿಂದ ಚಾಲಕ ವಜಾ

ಕಾಲೇಜು ವಿದ್ಯಾರ್ಥಿಗಳನ್ನು ಡ್ರಾಪ್​ ಮಾಡಿದ ಬಳಿಕ ಚಾಲಕ ಮನೆಗೆ ಬಸ್​ ಕೊಂಡೊಯ್ಯವ ವೇಳೆ ಬಸ್​ ಚಾಲನೆಗೆ ತನ್ನ ಅಪ್ರಾಪ್ತ ಸೋದರಳಿಯನಿಗೆ ಅವಕಾಶ ನೀಡಿದ್ದಾನೆ.

ಅಪ್ರಾಪ್ತ ಸೋದರಳಿಯನಿಗೆ ಕಾಲೇಜ್​​ ಬಸ್​ ಚಾಲನೆಗೆ ಅವಕಾಶ: ಕೆಲಸದಿಂದ ಚಾಲಕನ ವಜಾ
college-dismissed-driver-who-allowed-minor-nephew-to-drive-college-bus
author img

By

Published : Nov 29, 2022, 10:48 AM IST

ಚೆನ್ನೈ: ತನ್ನ ಅಪ್ರಾಪ್ತ ಸೋದರಳಿಯನಿಗೆ ಕಾಲೇಜು ಬಸ್​ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ಚಾಲಕನನ್ನು ಕೆಲಸದಿಂದ ವಜಾಗೊಳಿಸಿ ಖಾಸಗಿ ಕಾಲೇಜು ಕಠಿಣ ಕ್ರಮ ತೆಗೆದುಕೊಂಡಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕ ಖಾಸಗಿ ಕಾಲೇಜು ಬಸ್ ಚಲಾಯಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು.

ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿರುವ ಕಾಲೇಜು ಆಡಳಿತ ಮಂಡಳಿ, ಕಾಲೇಜು ವಿದ್ಯಾರ್ಥಿಗಳನ್ನು ಡ್ರಾಪ್​ ಮಾಡಿದ ಬಳಿಕ ಚಾಲಕ ಮನೆಗೆ ಬಸ್​ ಕೊಂಡೊಯ್ಯುವಾಗ ಬಸ್​ ಚಾಲನೆಗೆ ತನ್ನ ಅಪ್ರಾಪ್ತ ಸೋದರಳಿಯನಿಗೆ ಅವಕಾಶ ನೀಡಿದ್ದಾನೆ. ಅಲ್ಲದೇ, ಆತ ಬಸ್​ ಚಲಾಯಿಸುವುದನ್ನು ವಿಡಿಯೋ ಮಾಡಿದ್ದಾನೆ.

ಈ ಘಟನೆ ನಡೆದು ತಿಂಗಳಾಗಿದೆ. ಆದರೆ, ಇತ್ತೀಚೆಗೆ ಬಾಲಕ ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್​ ಆಗಿತ್ತು.

ಇದನ್ನು ಕಂಡ ಕಾಲೇಜು ಆಡಳಿತ ಸಿಬ್ಬಂದಿ ತಕ್ಷಣ ಚಾಲಕನನ್ನು ಕೆಲಸದಿಂದ ತೆಗೆದು ಹಾಕಿದೆ. ಚಾಲಕನ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ರ್‍ಯಾಗಿಂಗ್‌ನಿಂದ ಪಾರಾಗಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿ: ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.