ETV Bharat / bharat

ಪಾಕಿಸ್ತಾನಿ ವಲಸಿಗರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ಹಸ್ತಾಂತರಿಸಿದ ಡಿಸಿ ಟೀನಾ ದಾಬಿ - ಭಾರತೀಯ ಪೌರತ್ವ

ಮೂವರು ಪಾಕಿಸ್ತಾನಿ ವಲಸಿಗರಿಗೆ ಜೈಸಲ್ಮೇರ್‌ನಲ್ಲಿ ಜಿಲ್ಲಾಧಿಕಾರಿ ಟೀನಾ ದಾಬಿ ಅವರು ಭಾರತೀಯ ಪೌರತ್ವ ಪ್ರಮಾಣಪತ್ರ ನೀಡಿದರು.

Etv Bharat
Etv Bharat
author img

By

Published : Jun 21, 2023, 10:35 PM IST

ಜೈಸಲ್ಮೇರ್ (ರಾಜಸ್ಥಾನ): ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಮೂವರು ಪಾಕಿಸ್ತಾನಿ ವಲಸಿಗರಿಗೆ ಜಿಲ್ಲಾಧಿಕಾರಿ ಟೀನಾ ದಾಬಿ ಅವರು ಮಂಗಳವಾರ ಭಾರತೀಯ ಪೌರತ್ವದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಜೈಸಲ್ಮೇರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದಾಬಿ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಜಿಲ್ಲಾಡಳಿತ ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಭಾರತದಲ್ಲಿ ಪೌರತ್ವವನ್ನು ಪಡೆದ ನಂತರ, ಪ್ರಸ್ತುತ ಅವರು ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪಾಕಿಸ್ತಾನಿ ವಲಸಿಗರಿಗೆ ಸಹಾಯ ಮಾಡಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ: Black Cocaine: ಅಹಮದಾಬಾದ್ ಏರ್​ಪೋರ್ಟ್​ನಲ್ಲಿ ₹32 ಕೋಟಿ ಮೌಲ್ಯದ ಕಪ್ಪು ಕೊಕೇನ್‌ ಜಪ್ತಿ; ಬ್ರೆಜಿಲ್ ಪ್ರಜೆ ಅರೆಸ್ಟ್

ಮಾಧ್ಯಮಗಳೊಂದಿಗೆ ಮಾತನಾಡಿದ ದಾಬಿ, ಈ ದಿನ ಸ್ಮರಣೀಯವಾಗಿದೆ ಎಂದು ಬಣ್ಣಿಸಿದರು. ಜಿಲ್ಲಾಡಳಿತವು ವಿವಿಧ ಹಂತಗಳಲ್ಲಿ ಸಹಾಯ ನೀಡುತ್ತಿದೆ. ಕಳೆದ ವರ್ಷದಲ್ಲಿ 30ರಿಂದ 31 ಜನರಿಗೆ ಪೌರತ್ವ ನೀಡಿದ್ದೇವೆ. ಪ್ರಸ್ತುತ ನಾವು ಮೂರು ಜನರಿಗೆ ಪೌರತ್ವವನ್ನು ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರನ್ನು ದಾಟಲು ನಾವು ಬಯಸುತ್ತೇವೆ. ಆದರೆ, ಅದು ದೀರ್ಘ ಪ್ರಕ್ರಿಯೆ ಮತ್ತು ನಾವು ಎಲ್ಲಾ ಕಾನೂನು ಅವಶ್ಯಕತೆಗಳನ್ನು ಪರಿಶೀಲಿಸಬೇಕಾಗಿದೆ. ಆದ್ದರಿಂದ ಇದು ಕೆಲವೊಮ್ಮೆ ವಿಳಂಬವಾಗುತ್ತದೆ ಎಂದರು.

ಇದನ್ನೂ ಓದಿ: ಗಾಯಕ ಹನಿ ಸಿಂಗ್​ಗೆ ಕೆನಡಾದಿಂದ ಜೀವ ಬೆದರಿಕೆ ಕರೆ: ಭದ್ರತೆ ಒದಗಿಸಲು ಪೊಲೀಸರಿಗೆ ಮನವಿ

"ಎಲ್ಲ ಅವಶ್ಯಕತೆಗಳನ್ನು ಪೂರೈಸಲು ನಾವು ಶೀಘ್ರದಲ್ಲೇ ಅಧಿಕಾರಿಯನ್ನು ನೇಮಿಸಿಕೊಳ್ಳುತ್ತೇವೆ" ಎಂದು ದಾಬಿ ತಿಳಿಸಿದರು. ''ಪಾಕಿಸ್ತಾನಿ ವಲಸಿಗರು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಭಾರತದಲ್ಲಿ ಪೌರತ್ವ ಪಡೆದ ನಂತರ ಅವರು ಕಾಲ ಕಾಲಕ್ಕೆ ಸರ್ಕಾರ ನೀಡುವ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ'' ಎಂದರು.

ಇದನ್ನೂ ಓದಿ: 9th International Yoga Day: ಐಟಿಬಿಪಿ ಸಿಬ್ಬಂದಿಯೊಂದಿಗೆ ಶ್ವಾನದ ಯೋಗ ಪ್ರದರ್ಶನ; ವಿಡಿಯೋ ವೈರಲ್​

ಪೌರತ್ವ ಪ್ರಮಾಣ ಪತ್ರವನ್ನು ಸತಾರ್ ರಾಮ್, ಅವರ ಪತ್ನಿ ಹುರ್ಮಿ ಹಾಗೂ ಸದೋರಿ ಬಾಯಿ ಅವರಿಗೆ ಜಿಲ್ಲಾಡಳಿತದಿಂದ ಹಸ್ತಾಂತರಿಸಲಾಯಿತು. ಈ ವೇಳೆ ಗಡಿನಾಡು ಹಿಂದೂ ಸಂಘಟನೆಯ ಹಿಂದೂ ಸಿಂಗ್ ಸೋದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಂತ್ಯಸಂಸ್ಕಾರ ಯೋಜನೆಯಡಿ ಸಿಗದ ಹಣ: ಮೃತದೇಹವನ್ನು ಸೀದಾ ಸರ್ಕಾರಿ ಕಚೇರಿಗೆ ಹೊತ್ತು ತಂದ ಜನ!

ಸೌಹಾರ್ದಯುತವಾಗಿ ರಾಷ್ಟ್ರಪತಿ ಭೇಟಿಯಾದ ಸಿದ್ದರಾಮಯ್ಯ.. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಕೇಂದ್ರಕ್ಕೆ ಸಿಎಂ ಪ್ರಸ್ತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.