ETV Bharat / bharat

ಅಪಾಯದಲ್ಲಿದ್ದ ಮೂವರು ಭಾರತೀಯರು ಸೇರಿ 16 ಜನರ ರಕ್ಷಿಸಿದ ಕೋಸ್ಟ್​ ಗಾರ್ಡ್​

ಸಮುದ್ರದಲ್ಲಿ ಅಪಾಯದಲ್ಲಿದ್ದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೋಸ್ಟ್​ ಗಾರ್ಡ್​ ತಿಳಿಸಿದೆ. ಅಷ್ಟೇ ಅಲ್ಲMRCC ಮುಂಬೈ ಸಿಂಗಾಪುರ್, ಇಂಡೋನೇಷ್ಯಾ ಮತ್ತು ಮಲೇಷ್ಯಾದ SAR ಸಂಯೋಜಕ ಏಜೆನ್ಸಿಗಳ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ.

http://10.10.50.90:6060///finaloutc/english-nle/finalout/27-August-2022/16210325_gh.jpg

author img

By

Published : Aug 27, 2022, 11:09 AM IST

ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ ಸಿಂಗಾಪುರ, ಇಂಡೋನೇಷ್ಯಾ ಮತ್ತು ಮಲೇಷ್ಯಾದ ಎಸ್‌ಎಆರ್ ಸಮನ್ವಯ ಏಜೆನ್ಸಿಗಳ ಸಹಯೋಗದೊಂದಿಗೆ ಮಲೇಷ್ಯಾದಲ್ಲಿ ಮೂವರು ಭಾರತೀಯರು ಸೇರಿದಂತೆ 16 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್ 25 ರಂದು MRCC ಮುಂಬೈ, ಮಲೇಷ್ಯಾ ಕರಾವಳಿಯಿಂದ ಗಯಾನಾ ಧ್ವಜದ ಟ್ಯಾಂಕರ್ MT ವೋರಾದಿಂದ ಕಾಣೆಯಾದ ಮೂವರು ಭಾರತೀಯರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿತ್ತು. ಈ ಮಾಹಿತಿ ಅನ್ವಯ ಸಂಕಷ್ಟದಲ್ಲಿ ಸಿಲುಕಿದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಕೋಸ್ಟ್ ಗಾರ್ಡ್ (ICG) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಮುದ್ರದಲ್ಲಿ ಅಪಾಯದಲ್ಲಿದ್ದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೋಸ್ಟ್​ ಗಾರ್ಡ್​ ತಿಳಿಸಿದೆ. ಅಷ್ಟೇ ಅಲ್ಲMRCC ಮುಂಬೈ ಸಿಂಗಾಪುರ್, ಇಂಡೋನೇಷ್ಯಾ ಮತ್ತು ಮಲೇಷ್ಯಾದ SAR ಸಂಯೋಜಕ ಏಜೆನ್ಸಿಗಳ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ.

ಮಲೇಷಿಯಾದ ಅಧಿಕಾರಿಗಳು ಆಗಸ್ಟ್ 26 ರಂದು ಮಲೇಷಿಯಾದ ಕರಾವಳಿಯಲ್ಲಿ ನಿರಂತರ ಪ್ರಯತ್ನದ ಮೂಲಕ ದೋಣಿಯನ್ನು ಪತ್ತೆ ಮಾಡಿದ್ದರು. ಇನ್ನು ಬೋಟ್​​​ನಲ್ಲಿ ಇಂಧನ ಖಾಲಿಯಾಗಿತ್ತು. ಕಾಣೆಯಾದ 03 ಭಾರತೀಯ ಪ್ರಜೆಗಳು ಸೇರಿದಂತೆ 16 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಿರುವ ಸಿಬ್ಬಂದಿಯನ್ನು ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಲು ಮಲೇಷ್ಯಾಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಕೋಸ್ಟ್​ ಗಾರ್ಡ್​ ಪ್ರಕಟಣೆ ತಿಳಿಸಿದೆ.

ಇದನ್ನು ಓದಿ:ಸೇನಾ ಕಾರ್ಯಾಚರಣೆ.. ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುಕೋರನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.