ETV Bharat / bharat

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ - ಬಿಜೆಪಿ ಮುಖಂಡ ರಾಜು ಝಾ

ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ವ್ಯಾಪಾರಿಯಾಗಿದ್ದ ಬಿಜೆಪಿ ಮುಖಂಡನ ಹತ್ಯೆ ಮಾಡಲಾಗಿದೆ. ಇವರ ವಿರುದ್ಧ ಹಲವು ಪ್ರಕರಣಗಳಿದ್ದು, ಕಲ್ಲಿದ್ದಲು ವ್ಯಾಪಾರದ ಪ್ರಮುಖ ವ್ಯಕ್ತಿ ಆಗಿದ್ದರು.

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
author img

By

Published : Apr 2, 2023, 7:56 AM IST

ದುರ್ಗಾಪುರ(ಪಶ್ಚಿಮ ಬಂಗಾಳ): ಕಲ್ಲಿದ್ದಲು ವ್ಯಾಪಾರಿ ಹಾಗು ಬಿಜೆಪಿ ಮುಖಂಡ ರಾಜೇಶ್ ಅಲಿಯಾಸ್ ರಾಜು ಝಾ ಅವರನ್ನು ಶನಿವಾರ ಸಂಜೆ ಇಲ್ಲಿನ ಶಕ್ತಿಗಢದಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಮಾಹಿತಿಯ ಪ್ರಕಾರ, ರಾಜು ಝಾ ಅವರು ತಮ್ಮ ಕಾರಿನಲ್ಲಿ ಕೋಲ್ಕತ್ತಾಗೆ ಹೋಗುತ್ತಿದ್ದಾಗ, ಶಕ್ತಿಗಢದಲ್ಲಿ ಅವರ ಕಾರಿನ ಪಕ್ಕದಲ್ಲಿ ಮತ್ತೊಂದು ವಾಹನ ಬಂದು ನಿಂತಿತು. ಕಾರಿನೊಳಗಿದ್ದ ದುಷ್ಕರ್ಮಿಗಳು ರಾಜು ಝಾ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಮೂರು ಗುಂಡುಗಳು ರಾಜು ದೇಹ ಹೊಕ್ಕಿವೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಜು ಅವರ ಜೊತೆಗೆ ಕಾರಿನಲ್ಲಿದ್ದ ಬ್ರಾಟಿನ್ ಬ್ಯಾನರ್ಜಿ ಎಂಬಾತ ಪರಾರಿಯಾಗಲು ಪ್ರಯತ್ನಿಸಿದಾಗ, ಆತನಿಗೂ ಗುಂಡು ಹಾರಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬ್ಯಾನರ್ಜಿ ಅವರನ್ನು ಪೊಲೀಸರು ರಕ್ಷಿಸಿ ಬುರ್ದ್ವಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬ್ರಾಟಿನ್ ಬ್ಯಾನರ್ಜಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಡರಂಗದ ಆಡಳಿತದಲ್ಲಿ ಕಲ್ಲಿದ್ದಲು- ಬ್ಲ್ಯಾಕ್​ ಡೀಲಿಂಗ್​ ಸಿಂಡಿಕೇಟ್‌ನ ಕಿಂಗ್‌ಪಿನ್ ಆಗಿದ್ದ ರಾಜು ಝಾ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿದ್ದರು. ಸಾರಿಗೆ ವ್ಯವಹಾರದಿಂದ ಹೋಟೆಲ್ ಉದ್ದಿಮೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಶಕ್ತಿಗಢ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು, ರಾಜು ಝಾ ಮೇಳೆ ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜು ವಿರುದ್ಧ ಹಲವು ಪ್ರಕರಣ ದಾಖಲು: ಬಿಜೆಪಿ ಮುಖಂಡ ರಾಜು ಝಾ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ ಸರ್ಕಾರ ಹಲವಾರು ಪ್ರಕರಣಗಳನ್ನು ದಾಖಲಿಸಿದೆ. ಕಲ್ಲಿದ್ದಲು ವ್ಯಾಪಾರದಲ್ಲಿ ಪ್ರಮುಖನಾಗಿದ್ದ ಝಾ ವ್ಯವಹಾರವನ್ನು ಸರ್ಕಾರ ತಡೆ ಒಡ್ಡಿತ್ತು. ಇದಾದ ಬಳಿಕ ಹಲವು ಪ್ರಕರಣಗಳಲ್ಲಿ ಸಿಲುಕಿ, ಬಂಧನಕ್ಕೆ ಒಳಗಾಗಿದ್ದರು.

ಇದಾದ ಬಳಿಕ ರಾಜು ಝಾ, ದುರ್ಗಾಪುರದ ಪಲಾಶ್ದಿಹಾ ಮೈದಾನದಲ್ಲಿ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿ ಪಾಳಯಕ್ಕೆ ಸೇರಿದ್ದರು. ಬಿಜೆಪಿ ನಾಯಕ ಅರ್ಜುನ್ ಸಿಂಗ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ವೇಳೆ ರಾಜು ಝಾ ಅವರು ವಿವಿಧೆಡೆ ಕಾಣಿಸಿಕೊಂಡಿದ್ದರು.

ಬಿಜೆಪಿಯ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ನಾಯಕರೊಂದಿಗೆ ಸೇರಿ ಬಿಜೆಪಿಯ ವಿವಿಧ ಕಾರ್ಯಕ್ರಮಗಳಲ್ಲಿ ರಾಜು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕೆಲವೇ ದಿನಗಳ ಹಿಂದೆ ದುರ್ಗಾಪುರದ ನಗರ ಕೇಂದ್ರದಲ್ಲಿರುವ ರಾಜು ಅವರ ಸಾರಿಗೆ ಕಚೇರಿಯಲ್ಲಿ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆದಿತ್ತು. ಆದರೆ, ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಕೆಲ ದಿನಗಳ ಹಿಂದೆ ಬಿಜೆಪಿಯ ಇಬ್ಬರು ನಾಯಕರನ್ನು ಹತ್ಯೆ ಮಾಡಲಾಗಿತ್ತು. ಇದಲ್ಲದೇ ಓರ್ವ ಕಾರ್ಯಕರ್ತನೂ ಅಸುನೀಗಿದ್ದ. ಟಿಎಂಸಿ ಮತ್ತು ಬಿಜೆಪಿ ಮಧ್ಯೆ ರಾಜ್ಯದಲ್ಲಿ ಕಿತ್ತಾಟ ನಡೆಯುತ್ತಲೇ ಇರುತ್ತದೆ.

ಇದನ್ನೂ ಓದಿ: ನಳಂದಾ ಮತ್ತು ಸಸಾರಾಮ್​​ನಲ್ಲಿ ಮತ್ತೆ ಹಿಂಸಾಚಾರ: ಗುಂಡು ತಗುಲಿ ಇಬ್ಬರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.