ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ಸೇವಾವಧಿ ಇದೇ ತಿಂಗಳು ಕೊನೆಯಾಗಲಿದ್ದು, ಮುಂದಿನ ಸಿಜೆಐ ಆಗಲು ಹಿರಿಯ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದರು.
ತಮ್ಮ ಉತ್ತರಾಧಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ಇಂದು ರಮಣ ಅವರು, ಲಲಿತ್ ಮುಂದಿನ ಸುಪ್ರೀಂ ಸಿಜೆಐ ಮಾಡಬಹುದು ಎಂದು ಹೆಸರು ಸೂಚಿಸಿದರು. ಯು.ಯು. ಲಲಿತ್ ಸುಪ್ರೀಂಕೋರ್ಟ್ನ 49ನೇ ಸಿಜೆಐ ಆಗಿ ನೇಮಕವಾಗಲಿದ್ದಾರೆ.
ಲಲಿತ್ ಅವರು ನಿವೃತ್ತ ಹೊಂದಲು ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿದೆ. ಕಡಿಮೆ ಅವಧಿಗೆ ಅವರು ಸುಪ್ರೀಂ ಸಿಜೆಐ ಆಗಿ ಕೆಲಸ ಮಾಡಲಿದ್ದಾರೆ. ಈಗಿರುವ ಸಿಜೆಐ ರಮಣ ಅವರ ಸೇವಾವಧಿ ಇದೇ ತಿಂಗಳ 26 ರಂದು ಕೊನೆಗೊಳ್ಳಲಿದೆ.
ಓದಿ: ಕೆಐಐಎಫ್ಬಿ ಹಣಕಾಸು ಅವ್ಯವಹಾರ: ಮಾಜಿ ಹಣಕಾಸು ಸಚಿವರಿಗೆ ಮತ್ತೆ ಇಡಿ ನೋಟಿಸ್