ETV Bharat / bharat

ಉತ್ತರಪ್ರದೇಶ ಚುನಾವಣೆ 2022: ಕರ್ತವ್ಯ ನಿರತ ಕರ್ನಾಟಕ ಯೋಧ ಹಠಾತ್​ ಸಾವು! - ನಿಪ್ಪಾಣಿ ಯೋಧ ಹುತಾತ್ಮ

ಉತ್ತರಪ್ರದೇಶದ ಚಂದೌಲಿಯಲ್ಲಿ ಚುನಾವಣಾ ಕರ್ತವ್ಯದ ವೇಳೆ ಕರ್ನಾಟಕದ ಯೋಧ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

http://10.10.50.85:6060//finalout4/karnataka-nle/thumbnail/08-March-2022/14667997_954_14667997_1646713866683.png
ಕರ್ತವ್ಯ ನಿರತ ಕರ್ನಾಟಕ ಯೋಧ ಹಠಾತ್​ ಸಾವು
author img

By

Published : Mar 8, 2022, 10:05 AM IST

ಚಂದೌಲಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಬಂದಿದ್ದ ಸಿಐಎಸ್‌ಎಫ್ ಯೋಧ ಸೋಮವಾರ ಚುನಾವಣಾ ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿದ್ದಾಗ ಯೋಧನ ಆರೋಗ್ಯ ಹಠಾತ್ ಹದಗೆಟ್ಟಿದ್ದು, ನಂತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಲಿ ಗ್ರಾಮದ ನಿವಾಸಿ ಸಿಐಎಸ್‌ಎಫ್ ಯೋಧ ನವಂತ್ ಅಪ್ಪಾಸಾಹೇಬ ದೀವಾಟೆ (43) ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು. ಮೊಘಲ್ಸರಾಯ್ ಸಭೆಯಲ್ಲಿ ಅವರ ಕರ್ತವ್ಯ ನಿರತವಾಗಿತ್ತು. ಸೋಮವಾರ ಸಂಜೆ ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ಕೂಡಲೇ ಅವರನ್ನು ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಓದಿ: ರಷ್ಯಾ - ಉಕ್ರೇನ್ ಯುದ್ಧದ ಎಫೆಕ್ಟ್​: ಅಮೆರಿಕ ಷೇರು ಮಾರುಕಟ್ಟೆ ಕುಸಿತ

ಪ್ರಾಥಮಿಕವಾಗಿ, ವೈದ್ಯರು ಯೋಧನ ಸಾವಿಗೆ ಹೃದಯಾಘಾತದ ಕಾರಣವನ್ನು ಹೇಳಿದ್ದಾರೆ. ಸದ್ಯ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ. ಇದೇ ವೇಳೆ ಮೃತ ಯೋಧನ ಕುಟುಂಬದ ಸದಸ್ಯರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.