ETV Bharat / bharat

ಚಿತ್ರ ಭಾರತಿ ಚಲನಚಿತ್ರೋತ್ಸವಕ್ಕೆ ತೆರೆ : 'ದಿ ಕಾಶ್ಮೀರ್​ ಫೈಲ್ಸ್' ನಿರ್ದೇಶಕ, ನಟಿಗೆ ಸನ್ಮಾನ

author img

By

Published : Mar 28, 2022, 11:54 AM IST

ನಿನ್ನೆ ರವೀಂದ್ರ ಭವನದಲ್ಲಿ ನಡೆದ ಚಿತ್ರ ಭಾರತಿ ಚಲನಚಿತ್ರೋತ್ಸವದ ನಾಲ್ಕನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ 'ದಿ ಕಾಶ್ಮೀರ್​ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಟಿ 'ಪಲ್ಲವಿ ಜೋಶಿ' ಅವರನ್ನು ಸನ್ಮಾನಿಸಲಾಯಿತು..

ಚಿತ್ರ ಭಾರತಿ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ
ಚಿತ್ರ ಭಾರತಿ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ

ಭೋಪಾಲ್/ಮಧ್ಯಪ್ರದೇಶ : ಭೋಪಾಲ್‌ನ ಮಖನ್‌ಲಾಲ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 25ರಿಂದ ಆರಂಭಗೊಂಡಿದ್ದ ಚಿತ್ರ ಭಾರತಿ ಚಲನಚಿತ್ರೋತ್ಸವ ಮುಕ್ತಾಯಗೊಂಡಿದೆ. ಕಾರ್ಯಕ್ರಮದ ಕೊನೆಯ ದಿನ 'ದಿ ಕಾಶ್ಮೀರ್​ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಟಿ 'ಪಲ್ಲವಿ ಜೋಶಿ' ಅವರನ್ನು ಸನ್ಮಾನಿಸಲಾಯಿತು.

ಚಿತ್ರ ಭಾರತಿ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ..

ನಿನ್ನೆ ರವೀಂದ್ರ ಭವನದಲ್ಲಿ ನಡೆದ ಚಿತ್ರ ಭಾರತಿ ಚಲನಚಿತ್ರೋತ್ಸವದ 4ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ಸಂಸ್ಕೃತಿಯನ್ನು ಎಲ್ಲರಿಗೂ ತಿಳಿಸಬೇಕಾದರೆ ಅದಕ್ಕೆ ಸಂಬಂಧಿಸಿದ ಕಥೆಗಳನ್ನು ನಾವು ಜನರಿಗೆ ತಿಳಿಸುವುದು ಅಗತ್ಯ. ಚಿತ್ರ ಭಾರತಿ ಮೂಲಕ ಇಂತಹ ಸಿನಿಮಾಗಳು ನಿರ್ಮಾಣವಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕರಿಗೆ ಸನ್ಮಾನ : ಸಮಾರಂಭದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಟಿ ಪಲ್ಲವಿ ಜೋಶಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಪಲ್ಲವಿ ಜೋಶಿ ಮಾತನಾಡಿ, ಚಿತ್ರ ಭಾರತಿಯ ಕಲಾವಿದರಿಗೆ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರದಲ್ಲಿ ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಸಾಕ್ಷ್ಯ ಚಿತ್ರಗಳು, ಅನಿಮೇಷನ್ ಚಿತ್ರಗಳು ಸೇರಿದಂತೆ ಅನೇಕ ಸಿನಿಮಾಗಳಿಗೆ ಆಯಾ ವಿಭಾಗಕ್ಕೆ ತಕ್ಕಂತೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜಕೀಯರ ಗಣ್ಯರು, ಖ್ಯಾತ ಚಲನಚಿತ್ರ ನಿರ್ಮಾಪಕರು, ಕಲಾವಿದರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದನ್ನೂ ಓದಿ: ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್​ ಸ್ಮಿತ್​ ನಿರೂಪಕನ ಕಪಾಳಕ್ಕೆ ಹೊಡೆದದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.