ETV Bharat / bharat

ತಂದೆಗೆ ನೀಡಲಾಗಿದ್ದ ಬಂಗಲೆ ತೆರವು ಪ್ರಕ್ರಿಯೆ ಆರಂಭಿಸಿದ ಚಿರಾಗ್ ಪಾಸ್ವಾನ್

author img

By

Published : Mar 31, 2022, 10:22 AM IST

ರಾಮ್ ವಿಲಾಸ್ ಪಾಸ್ವಾನ್ ಮೃತಪಟ್ಟ ನಂತರವೂ ಸರ್ಕಾರದ ಬಂಗಲೆಯಲ್ಲಿದ್ದ ಚಿರಾಗ್ ಪಾಸ್ವಾನ್ ತಮ್ಮ ಬಂಗಲೆಯನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

chirag-paswan-begins-the-process-of-vacating-the-bungalow-allotted-to-ram-vilas-paswan
ಒಂದು ವರ್ಷದ ಬಳಿಕೆ ತಂದೆಗೆ ನೀಡಲಾಗಿದ್ದ ಬಂಗಲೆಯ ತೆರವು ಪ್ರಕ್ರಿಯೆ ಆರಂಭಿಸಿದ ಚಿರಾಗ್ ಪಾಸ್ವಾನ್

ನವದೆಹಲಿ: ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರು ನವದೆಹಲಿಯ 12 ಜನಪಥ್​​ನಲ್ಲಿರುವ ಬಂಗಲೆಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಈ ಬಂಗಲೆಯನ್ನು ಚಿರಾಗ್ ಅವರ ತಂದೆ ರಾಮ್​ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಗಿತ್ತು.

ರಾಮ್​ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಚಿರಾಗ್ ಪಾಸ್ವಾಲ್ ಈ ಬಂಗಲೆಯನ್ನು ಬಳಸುತ್ತಿದ್ದರು. ಈಗ ಬಂಗಲೆಯನ್ನು ತೆರವು ಮಾಡಲು ಚಿರಾಗ್ ಪಾಸ್ವಾನ್ ಮುಂದಾಗಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್ ನಿರ್ದೇಶನಾಲಯದ ಹಿಂದಿನ ವರ್ಷವೇ ಬಂಗಲೆಯನ್ನು ತೆರವು ಮಾಡಲು ಚಿರಾಗ್ ಪಾಸ್ವಾನ್​ಗೆ ಸೂಚನೆ ನೀಡಿತ್ತು.

ಆದರೆ, ಚಿರಾಗ್ ಈವರೆಗೂ ಬಂಗಲೆಯನ್ನು ತೆರವು ಮಾಡಿರಲಿಲ್ಲ. ಈಗ ತೆರವು ಮಾಡಲು ಮುಂದಾಗಿದ್ದು, ಲೋಡ್ ಮಾಡಿದ ಎರಡು ಟ್ರಕ್​ಗಳು ಬಂಗಲೆಯಿಂದ ಹೊರಬಂದಿವೆ. ಇನ್ನೂ ಮೂರು ಟ್ರಕ್​ಗಳು ಬಂಗಲೆ ಮುಂದೆ ನಿಂತಿವೆ ಎಂದು ಮೂಲಗಲೂ ತಿಳಿಸಿವೆ.

ಕೇಂದ್ರ ಸಚಿವರಿಗೆ ಈ ಬಂಗಲೆಯನ್ನು ಮೀಸಲಿಡಲಾಗಿದೆ. ಆದ್ದರಿಂದ ಚಿರಾಗ್ ಪಾಸ್ವಾನ್ ಅವರಿಗೆ ಬಂಗಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೋಕ ಜನಶಕ್ತಿ ಪಕ್ಷದ ಸಾಂಸ್ಥಿಕ ಸಭೆಗಳು ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಬಂಗಲೆಯನ್ನು ನಿಯಮಿತವಾಗಿ ಬಳಸಲಾಗುತ್ತಿತ್ತು.

ಇದನ್ನೂ ಓದಿ: ತಪಾಸಣೆ ವೇಳೆ ಕಾರಲ್ಲಿ ಸ್ಫೋಟಕ ತುಂಬಿದ್ದ ಮೂವರು ಆರೋಪಿಗಳ ಸೆರೆ; ಉಗ್ರರ ನಂಟಿನ ಶಂಕೆ..!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.