ಲಖನೌ: ಮೂಢನಂಬಿಕೆಯಿಂದಾಗಿ ಮುಗ್ದ ಜೀವಗಳು ಬಲಿಯಾಗುತ್ತಿವೆ. ಈ ಕಾಲದಲ್ಲಿಯೂ ಸಹ ಮಾಟಮಂತ್ರಕ್ಕೆ ನಂಬಿ ಮಕ್ಕಳ ಜೀವವನ್ನು ತೆಗೆಯುತ್ತಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುರು ಪೂರ್ಣಿಮ ರಾತ್ರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಹಿಳೆ ಸೇರಿದಂತೆ ಐವರು ಮಗುವನ್ನು ಸಮಾಧಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಗುವನ್ನು ಹೂತು ಹಾಕಿದ್ದ ಸ್ಥಳದ ಬಳಿ ಚಾಕು ಸೇರಿದಂತೆ ಸಮಾಧಿ ಮಾಡಲು ಬಳಿಸಿದ ವಸ್ತುಗಳು ಮತ್ತು ಪ್ರಾರ್ಥನಾ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿನ್ಹಾಟ್ ಪೊಲೀಸ್ ಠಾಣೆಯ ಅಧಿಕಾರಿ ಪ್ರದೀಪ್ ಕುಮಾರ್ ಚತುರ್ವೇದಿ ಮಾತನಾಡಿ, ಸಾವಿಗೆ ಕಾರಣ ಇನ್ನು ತಿಳಿದು ಬಂದಿಲ್ಲ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಗುವನ್ನು ಗುರುತಿಸುವ ಪ್ರಯತ್ನದಲ್ಲಿ ಮೃತರ ವಿವರಣೆಯನ್ನು ನೆರೆಯ ಜಿಲ್ಲೆಗಳಾದ ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಇಲ್ಲಿಯವರೆಗೆ, ಆಗ್ರಾದಲ್ಲಿನ ಯಾವುದೇ ಪೊಲೀಸ್ ಠಾಣೆಗಳಲ್ಲಿ ಮಗುವಿಗೆ ಕಾಣೆಯಾದ ದೂರು ಪ್ರಕರಣಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.