ETV Bharat / bharat

ಗಾಳಿಪಟದ ಚೀನಾ ದಾರದಿಂದ ಅವಘಡ: ಬೈಕ್​ ಸವಾರ ಸಾವು, ಮಗು ಬಾಯಿಗೆ 120 ಹೊಲಿಗೆ! - ಗಾಳಿಪಟದ ಧಾರವೊಂದು ವ್ಯಕ್ತಿಯ ಕೊರಳಿಗೆ ಸಿಕ್ಕಿ

ಗಾಳಿಪಟದಲ್ಲಿ ಬಳಸುವ ಚೀನಾ ದಾರದಿಂದ ಅವಘಡಗಳು ಸಂಭವಿಸುತ್ತಿವೆ. ಒಂದೆಡೆ, ಬೈಕ್​ ಸವಾರ ಸಾವನ್ನಪ್ಪಿದ್ರೆ, ಮತ್ತೊಂದೆಡೆ ಮಗುವಿನ ಬಾಯಿಗೆ 120 ಹೊಲಿಗೆ ಹಾಕಲಾಗಿದೆ.

Child injured due to china door in Samrala  stitches on the mouth  Child injured due to china door  ಗಾಳಿಪಟದ ಚೀನಾ ಧಾರಾದಿಂದ ಅವಘಡ  ಬೈಕ್​ ಸವಾರ ಸಾವು  ಮಗು ಬಾಯಿಗೆ 120 ಹೊಲಿಗೆ  ರಾಜ್ಯದಲ್ಲಿ ಆಘಾತಕಾರಿ ಘಟನೆ  ಗಾಳಿಪಟದ ಧಾರವೊಂದು ವ್ಯಕ್ತಿಯ ಕೊರಳಿಗೆ ಸಿಕ್ಕಿ
ಬೈಕ್​ ಸವಾರ ಸಂಜಯ್​
author img

By

Published : Jan 16, 2023, 9:15 AM IST

ಥಾಣೆ/ಲೂಧಿಯಾನ : ಹಾರುತ್ತಿದ್ದ ಗಾಳಿಪಟದ ದಾರವೊಂದು ವ್ಯಕ್ತಿಯ ಕೊರಳಿಗೆ ಸಿಲುಕಿ ಅವರು ಕುತ್ತಿಗೆ ಕೊಯ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯ ದಿವಂಗತ ಬಾಳಾಸಾಹೇಬ್ ಠಾಕ್ರೆ ಸೇತುವೆ ಮೇಲೆ ಸಂಭವಿಸಿದೆ. ಇಲ್ಲಿನ ಉಲ್ಲಾಸ ನಗರ ನಿವಾಸಿ 47 ವರ್ಷದ ಸಂಜಯ್ ಹಜಾರೆ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸಂಜಯ್ ತನ್ನ ಕುಟುಂಬದೊಂದಿಗೆ ಉಲ್ಲಾಸನಗರದಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಕರ ಸಂಕ್ರಾತಿಯ ದಿನ ಸಂಜೆ ಹೊತ್ತಿಗೆ ಭಿವಂಡಿಯಿಂದ ಕೆಲಸ ಮುಗಿಸಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದರು. ದಿ. ಬಾಳಾಸಾಹೇಬ್ ಠಾಕ್ರೆ ಮೇಲ್ಸೇತುವೆಯಿಂದ ಮನೆ ಕಡೆಗೆ ಸಂಚರಿಸುತ್ತಿದ್ದಾಗ ರಸ್ತೆಯಲ್ಲಿ ಹಾರುತ್ತಿದ್ದ ಗಾಳಿಪಟದ ದಾರ (ಮಾಂಜಾ) ಏಕಾಏಕಿ ಅವರ ಕತ್ತಿಗೆ ಸಿಲುಕಿಕೊಂಡಿದೆ. ಸಂಜಯ್​ ಕತ್ತು ಕೊಯ್ದಿದ್ದು ಬೈಕ್ ರಸ್ತೆ ಬದಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಭಿವಂಡಿ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದೆ.

Child injured due to china door in Samrala  stitches on the mouth  Child injured due to china door  ಗಾಳಿಪಟದ ಚೀನಾ ಧಾರಾದಿಂದ ಅವಘಡ  ಬೈಕ್​ ಸವಾರ ಸಾವು  ಮಗು ಬಾಯಿಗೆ 120 ಹೊಲಿಗೆ  ರಾಜ್ಯದಲ್ಲಿ ಆಘಾತಕಾರಿ ಘಟನೆ  ಗಾಳಿಪಟದ ಧಾರವೊಂದು ವ್ಯಕ್ತಿಯ ಕೊರಳಿಗೆ ಸಿಕ್ಕಿ
ಬೈಕ್​ ಸವಾರ ಸಂಜಯ್​

ಚೀನಾ ಮಾಂಜಾದಿಂದ ಹಲವೆಡೆ ಅಪಘಾತ ಸಂಭವಿಸಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೆಡೆ ಚೈನಾ ಮಾಂಜಾ ನಿಷೇಧದ ನಡುವೆಯೂ ಗಾಳಿಪಟ ಹಾರಿಸಲು ಈ ದಾರ ಬಳಕೆಯಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಅವಘಡಗಳು ಮುನ್ನೆಲೆಗೆ ಬರುತ್ತಿವೆ.

ಕೆಲ ವರ್ಷಗಳ ಹಿಂದೆ ಗಾಳಿಪಟ ಹಾರಿಸಲು ಸರಳವಾದ ಹತ್ತಿಯ ದಾರವನ್ನು ಬಳಸಲಾಗುತ್ತಿತ್ತು. ಈ ದಾರ ಸ್ಪರ್ಧೆಯ ಸಂದರ್ಭದಲ್ಲಿ ಹರಿದು ಹೋಗುತ್ತಿತ್ತು. ಆದ್ರೆ ಚೀನಿಯರು ತಮ್ಮ ಗಾಳಿಪಟಗಳನ್ನು ಸುರಕ್ಷಿತವಾಗಿರಿಸಲು ಮತ್ತು ಎದುರಾಳಿಗಳ ಗಾಳಿಪಟಗಳನ್ನು ಕತ್ತರಿಸಲು ಮಾಂಜಾ ದಾರಾ ಬಳಸುತ್ತಾರೆ. ಇದನ್ನು ಗಾಜಿನ ಪುಡಿಯಿಂದ ತಯಾರಿಸಲಾಗುತ್ತಿದ್ದು, ಅಷ್ಟು ಸುಲಭವಾಗಿ ಹರಿಯುವುದಿಲ್ಲ. ಆದರೆ ಇದು ಬೈಕ್ ಸವಾರನ ಕುತ್ತಿಗೆಗೆ ಸಿಕ್ಕಿಹಾಕಿಕೊಂಡರೆ ಕತ್ತು ಕೊಯ್ದು ಪ್ರಾಣ ಹಾನಿ ಸಂಭವಿಸುತ್ತದೆ. ಹೀಗಾಗಿ ಗಾಳಿಪಟ ಹಾರಾಟದಲ್ಲಿ ಬಳಸುವ ಅಪಾಯಕಾರಿ ಚೀನಾದ ಮಾಂಜಾ ದಾರಾ ನಿಷೇಧಿಸಲಾಗಿದೆ. ಆದ್ರೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕಿದೆ.

ಸ್ಥಳೀಯ ಪುರಸಭೆ ನೌಕರರು ಜಿಲ್ಲೆಯ ನಾನಾ ನಗರಗಳಲ್ಲಿರುವ ಪ್ಯಾಂಟಗ್ ಮಾರಾಟಗಾರರ ಬಳಿ ತೆರಳಿ ನೈಲಾನ್ ಮಾಂಜಾ ಪರಿಶೀಲಿಸಬೇಕು ಎಂಬ ಆಗ್ರಹವಿದೆ. ಈ ಹಿಂದೆ ಕಲ್ಯಾಣ್, ಭಿವಂಡಿ, ಉಲ್ಲಾಸನಗರದಲ್ಲಿ ಮಾಂಜಾ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಮಾಂಜಾದಿಂದ ಇಂತಹ ಅವಘಡಗಳು ಮರುಕಳಿಸುತ್ತಿದ್ದು, ಮಾಂಜಾ ಮಾರಾಟಗಾರರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಗುವಿನ ಬಾಯಿಗೆ 120 ಹೊಲಿಗೆ: ಪಂಜಾಬ್​ನ ಲೂಧಿಯಾನದಲ್ಲಿ ಚೀನಾ ದಾರಕ್ಕೆ ನಾಲ್ಕು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ. ಕಾರಿನ ಕಿಟಕಿ ಮೂಲಕ ಹೊರ ನೋಡುತ್ತಿದ್ದ ಮಗುವಿನ ಬಾಯಿಗೆ ಗಾಳಿಪಟ ದಾರ ಸಿಲುಕಿದೆ. ನೋಡನೋಡುತ್ತಿದ್ದಂತೆ ಬಾಯಿ ಹರಿದುಹೋಗಿದೆ. ಕೂಡಲೇ ಮಗುವನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಗುವಿನ ಪರಿಸ್ಥಿತಿ ಅರಿತು ವಿಶೇಷ ಚಿಕಿತ್ಸೆಗಾಗಿ ಡಿಎಂಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 120 ಹೊಲಿಗೆ ಹಾಕಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ನಡೆದಿವೆ. ನಿಷೇಧ ಕ್ರಮಗಳ ಹೊರತಾಗಿಯೂ ಚೀನಾ ಮಾಂಜಾ ದಾರದ ಮಾರಾಟ ಮಾತ್ರ ನಿಂತಿಲ್ಲ. ಜನರು ಬೇಡಿಕೆ ನಿಲ್ಲಿಸುವವರೆಗೆ ಮಕ್ಕಳು ಬಲಿಯಾಗುತ್ತಲೇ ಇರುತ್ತಾರೆ. ಚೀನಾ ದಾರದ ವಿರುದ್ಧ ಮಗುವಿನ ಪೋಕಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಡಿ ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಹುಮನಾಬಾದ್​ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.