ಅಲಿರಾಜಪುರ(ಮಧ್ಯಪ್ರದೇಶ): ಬುಡಕಟ್ಟು ಜನಾಂಗದ ನಾಲ್ವರ ಕನಸು ಕೊನೆಗೂ ನನಸಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧಿಕೃತವಾಗಿ ಬಳಕೆ ಮಾಡುತ್ತಿದ್ದ ಹೆಲಿಕಾಪ್ಟರ್ನಲ್ಲಿ ಅರ್ಧಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.
-
मुख्यमंत्री श्री @ChouhanShivraj के अलीराजपुर प्रवास के दौरान जनजातीय बंधुओं को हेलिकाप्टर में बैठने का मौका मिला।
— Jansampark MP (@JansamparkMP) September 15, 2021 " class="align-text-top noRightClick twitterSection" data="
श्री दरियाव सिंह, श्री मंगल सिंह, श्री रिच्छु सिंह बघेल तथा श्री जोध सिंह, सभी निवासी अलीराजपुर ने सफर किया।@DMAlirajpur @PROJSAlirajpur #JansamparkMP pic.twitter.com/RspmTeTaV0
">मुख्यमंत्री श्री @ChouhanShivraj के अलीराजपुर प्रवास के दौरान जनजातीय बंधुओं को हेलिकाप्टर में बैठने का मौका मिला।
— Jansampark MP (@JansamparkMP) September 15, 2021
श्री दरियाव सिंह, श्री मंगल सिंह, श्री रिच्छु सिंह बघेल तथा श्री जोध सिंह, सभी निवासी अलीराजपुर ने सफर किया।@DMAlirajpur @PROJSAlirajpur #JansamparkMP pic.twitter.com/RspmTeTaV0मुख्यमंत्री श्री @ChouhanShivraj के अलीराजपुर प्रवास के दौरान जनजातीय बंधुओं को हेलिकाप्टर में बैठने का मौका मिला।
— Jansampark MP (@JansamparkMP) September 15, 2021
श्री दरियाव सिंह, श्री मंगल सिंह, श्री रिच्छु सिंह बघेल तथा श्री जोध सिंह, सभी निवासी अलीराजपुर ने सफर किया।@DMAlirajpur @PROJSAlirajpur #JansamparkMP pic.twitter.com/RspmTeTaV0
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬೋಬತ್ ತಹಸಿಲ್ನ ಬುಡಕಟ್ಟು ಕುಟುಂಬದ ನಾಲ್ವರು ಆದಿವಾಸಿಗಳಾದ ದರಿಯವ್ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್ ಸಿಎಂ ಬಳಕೆ ಮಾಡುತ್ತಿದ್ದ ಅಧಿಕೃತ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡಿದರು. ಇವರು ರಣಬೈಡಾದಿಂದ ಸೇಜವಾಡದವರೆಗೆ ಈ ಹೆಲಿಕಾಪ್ಟರ್ನಲ್ಲಿ ತೆರಳಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕ್ಷೇತ್ರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಚೌಹಾಣ್, ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಆದಿವಾಸಿ ಕ್ಷೇತ್ರ ಜೋಬತ್ನಲ್ಲಿ ಉಪಚುನಾವಣೆ ನಡೆಯಬೇಕಾಗಿದ್ದ ಕಾರಣ, ಸಿಎಂ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು.
ಸಿಎಂ ಈ ಕ್ಷೇತ್ರಕ್ಕೆ ರೋಡ್ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಆಸೆ ಈಡೇರಿಸುವಂತೆ ಪೀಡಿಸಿ, ಯುವತಿ ಮೇಲೆ ವ್ಯಕ್ತಿಯಿಂದ ಹಲ್ಲೆ... ವಿಡಿಯೋ ವೈರಲ್!
ಈ ಕ್ಷೇತ್ರಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡುತ್ತಿದ್ದಂತೆ ಇಲ್ಲಿನ ಆದಿವಾಸಿ ಜನರು ಅವರನ್ನ ವಿಶೇಷವಾಗಿ ಸ್ವಾಗತ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ಸಹ ನೀಡಿದರು.