ಚೆನ್ನೈ: 44ನೇ ಚೆಸ್ ಒಲಿಂಪಿಯಾಡ್ ಸರಣಿ ಇಂದು ಚೆನ್ನೈನ ಮಾಮಲ್ಲಪುರಂನಲ್ಲಿ ಆರಂಭವಾಗಿದೆ. ಈ ಪಂದ್ಯಾವಳಿಯಲ್ಲಿ 187 ದೇಶಗಳಿಂದ 2,000 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದಾರೆ.
ಐಷಾರಾಮಿ ಹೋಟೆಲ್ 'ಫೋರ್ ಪಾಯಿಂಟ್ಸ್ ಬೈ ಶೆರಟಾನ್ ಮಹಾಬಲಿಪುರಂ'ನಲ್ಲಿ ಈ ಸರಣಿಗಾಗಿ ಎರಡು ಅರೆನಾಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಜರ್ಮನ್ ತಂತ್ರಜ್ಞಾನದಿಂದ ತಯಾರಿಸಿದ ಚೆಸ್ ಬೋರ್ಡ್ ಗಳನ್ನು ಯುರೋಪ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಒಂದು ಚೆಸ್ ಬೋರ್ಡ್ ಬೆಲೆ ರೂ. 75 ಸಾವಿರ ಎಂದು ವರದಿಯಾಗಿದೆ. ಈ ಬೋರ್ಡ್‌ಗಳು ಕಂಪ್ಯೂಟರ್‌ಗೆ ಡಿಜಿಟಲ್ ಸಂಪರ್ಕ ಹೊಂದಿವೆ. ಈ ಮೂಲಕ ನೀವು ಇಂಟರ್ನೆಟ್ ಮೂಲಕ ಆಟಗಾರನ ಚಲನೆಯನ್ನು ನೇರವಾಗಿ ತಿಳಿದುಕೊಳ್ಳಬಹುದು.
ಈಟಿವಿ ಭಾರತ ಜೊತೆ ಮಾತನಾಡಿದ ತೀರ್ಪುಗಾರರಲ್ಲಿ ಒಬ್ಬರಾದ ಆನಂದ್ ಬಾಬು, ನೇರ ಪ್ರಸಾರವನ್ನು ಡಿಜಿಟಲ್ ಮೂಲಕ ರೆಕಾರ್ಡ್ ಮಾಡಬಹುದು, ವಿಶೇಷ ಸಾಫ್ಟ್‌ವೇರ್ ಮೂಲಕ ಎಲ್ಲಾ ಚದುರಂಗ ಫಲಕಗಳನ್ನು ಕಂಪ್ಯೂಟರ್‌ಗೆ ಜೋಡಿಸಿದ್ದೇವೆ. ಈ ಮೂಲಕ ನಾವು ಪಂದ್ಯಗಳನ್ನು ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಬಹುದು. ಪ್ರಪಂಚದ ಯಾವುದೇ ಭಾಗದಿಂದ ಚೆಸ್ ಪಂದ್ಯಗಳ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು ಎಂದಿದ್ದಾರೆ.
-
The India Open A team in the zone 🔥♟️
— Chennai Chess 2022 (@chennaichess22) July 29, 2022 " class="align-text-top noRightClick twitterSection" data="
Some serious looks as the team try to eclipse past the Zimbabwean team! 🔥#ChessChennai2022 #VanakkamTamilnadu #teamindia#khelochess #thambi #chess #chessolympiad #chennaichess22 #chennaichess #grandmaster #mahabalipuram @FIDE_chess pic.twitter.com/VCLAZNGIfH
">The India Open A team in the zone 🔥♟️
— Chennai Chess 2022 (@chennaichess22) July 29, 2022
Some serious looks as the team try to eclipse past the Zimbabwean team! 🔥#ChessChennai2022 #VanakkamTamilnadu #teamindia#khelochess #thambi #chess #chessolympiad #chennaichess22 #chennaichess #grandmaster #mahabalipuram @FIDE_chess pic.twitter.com/VCLAZNGIfHThe India Open A team in the zone 🔥♟️
— Chennai Chess 2022 (@chennaichess22) July 29, 2022
Some serious looks as the team try to eclipse past the Zimbabwean team! 🔥#ChessChennai2022 #VanakkamTamilnadu #teamindia#khelochess #thambi #chess #chessolympiad #chennaichess22 #chennaichess #grandmaster #mahabalipuram @FIDE_chess pic.twitter.com/VCLAZNGIfH
ಸ್ಥಳದಲ್ಲಿ ಪ್ರದರ್ಶನಗಳ ಮೂಲಕ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಹಿಂದಿನ ಚೆಸ್ ಒಲಿಂಪಿಯಾಡ್‌ಗಳಲ್ಲಿ ಪ್ರಮುಖ ಪಂದ್ಯಗಳನ್ನು ಮಾತ್ರ ನೇರ ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಚೆನ್ನೈನ 700 ಚೆಸ್ ಬೋರ್ಡ್‌ಗಳಲ್ಲಿ ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿದ್ದೇವೆ ಎಂದು ಆನಂದ್ ಬಾಬು ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣದ ಬಳಿ ಇರುವ 48 ಕಟ್ಟಡ ಕೆಡವಲು ಡಿಸಿಗೆ ಸೂಚಿಸಿದ ಹೈಕೋರ್ಟ್