ETV Bharat / bharat

ಅಪರೂಪದ ಶಸ್ತ್ರಚಿಕಿತ್ಸೆ..ಹೃದಯದೊಳಗೆ ಪ್ರವೇಶಿಸಿದ್ದ ಕಿಮೋಥೆರಪಿ ಸಾಧನ ಹೊರತೆಗೆದ ವೈದ್ಯರು

ಮಹಿಳಾ ರೋಗಿಯ ಹೃದಯದೊಳಗೆ ಪ್ರವೇಶಿಸಿದ್ದ ಕಿಮೋಥೆರಪಿ ಸಾಧನವಾದ ಕಿಮೋ ಪೋರ್ಟ್​ ಅನ್ನು ರಾಯಪುರ ವೈದ್ಯರು ಹೊರ ತೆಗೆದಿದ್ದಾರೆ.

chemotherapy-device-entered-in-heart-aci-doctors-saves-patient-life-in-raipur
ಹೃದಯದೊಳಗೆ ಪ್ರವೇಶಿಸಿದ್ದ ಕಿಮೋಥೆರಪಿ ಸಾಧನ ಹೊರತೆಗೆದ ವೈದ್ಯರು
author img

By

Published : Sep 22, 2022, 8:33 PM IST

ರಾಯಪುರ (ಛತ್ತೀಸ್​ಗಢ): ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಛತ್ತೀಸ್​ಗಢದ ರಾಜಧಾನಿ ರಾಯಪುರ ವೈದ್ಯರು 27 ವರ್ಷದ ಮಹಿಳೆಯ ಜೀವ ಉಳಿಸಿದ್ದಾರೆ. ಮಹಿಳೆಯ ಹೃದಯವನ್ನು ಪ್ರವೇಶಿಸಿದ್ದ ಕಿಮೊಥೆರಪಿ ಸಾಧನವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಜಶ್‌ಪುರ ನಿವಾಸಿ 27 ವರ್ಷದ ಮಹಿಳೆ ಹೊಟ್ಟೆಯ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಿಮೊ ಪೋರ್ಟ್ ಮೂಲಕ ವೈದ್ಯರು ಔಷಧ ನೀಡುತ್ತಿದ್ದರು. ಹೀಗೆ ಔಷಧ ನೀಡುವ ಪ್ರಕ್ರಿಯೆ ವೇಳೆ ವೈದ್ಯರು ಎಕ್ಸ್​ರೇ ಸಹ ಮಾಡಿದ್ದಾರೆ. ಆಗ ಹೃದಯದೊಳಗೆ ಕಿಮೋಥೆರಪಿ ಸಾಧನವು ಪ್ರವೇಶಿಸಿರುವುದು ಕಂಡುಬಂದಿದೆ.

ಆದ್ದರಿಂದ ವೈದ್ಯರು ತಕ್ಷಣವೇ ರೋಗಿಯನ್ನು ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆ (ಮೆಕಹರಾ)ಗೆ ರೆಫರ್​ ಮಾಡಿದ್ದಾರೆ. ಅಂತೆಯೇ, ಕುಟುಂಬಸ್ಥರು ಮಹಿಳೆಯನ್ನು ಅಡ್ವಾನ್ಸ್ಡ್ ಕಾರ್ಡಿಯಾಕ್ ಇನ್​ಸ್ಟಿಟ್ಯೂಟ್ (ಎಸಿಐ)ನ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ.ಸ್ಮಿತ್ ಶ್ರೀವಾಸ್ತವ ಅವರ ಬಳಿಗೆ ಕರೆ ತಂದಿದ್ದಾರೆ. ಆಗ ರೋಗಿಯನ್ನು ತಪಾಸಣೆ ನಡೆಸಿದ ಡಾ.ಸ್ಮಿತ್ ಶ್ರೀವಾಸ್ತವ ಮತ್ತವರ ತಂಡವು ಕ್ಯಾಥ್ ಲ್ಯಾಬ್ ಮೂಲಕ ಕಿಮೊ ಪೋರ್ಟ್​ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ರೋಗಿಯನ್ನು ಎಸಿಐನ ಹೃದ್ರೋಗ ವಿಭಾಗಕ್ಕೆ ದಾಖಲಿಸಲಾಗಿದೆ.

ಕಿಮೋ ಪೋರ್ಟ್‌ ಎಲ್ಲಿರುತ್ತದೆ?: ಈ ಶಸ್ತ್ರಚಿಕಿತ್ಸೆ ನೆರವೇರಿಸಿರುವ ಡಾ.ಸ್ಮಿತ್ ಶ್ರೀವಾಸ್ತವ ಮಾತನಾಡಿ, ಹೊಟ್ಟೆಯ ಕ್ಯಾನ್ಸರ್‌ಗೆ ಔಷಧ ನೀಡಲು ಕಿಮೋ ಪೋರ್ಟ್‌ ಬಳಸಲಾಗುತ್ತದೆ. ಅದು ಪೈಪ್‌ನಂತೆ ಇರುತ್ತದೆ ಮತ್ತ ಅದರ ಮೂಲಕ ಔಷಧ ನೀಡಲಾಗುತ್ತದೆ. ಈ ಕಿಮೋ ಪೋರ್ಟ್‌ ತುಂಬಾ ಚಿಕ್ಕದಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಎದೆ ಮೇಲಿನ ಭಾಗ ಅಥವಾ ತೋಳಿನಲ್ಲಿ ಚರ್ಮದಡಿ ಸೇರಿಸಲಾಗಿರುತ್ತದೆ. ಆದರೆ, ಈ ರೋಗಿಗೆ ಅದು ಹೃದಯದೊಳಗೆ ಹೋಗಿತ್ತು ಎಂದು ಹೇಳಿದರು.

ಹೊರ ತೆಗೆದಿದ್ದು ಹೇಗೆ?: ಕಿಮೊ ಪೋರ್ಟ್​ಅನ್ನು ಹೊರ ತೆಗೆದಿದ್ದಿರುವ ವಿಧಾನ ಬಗ್ಗೆಯೂ ಡಾ.ಸ್ಮಿತ್ ಶ್ರೀವಾಸ್ತವ ವಿವರಿಸಿದ್ದು, ಅಮೆರಿಕದಂತಹ ದೇಶಗಳಲ್ಲಿ ಜಾನುವಾರುಗಳನ್ನು ಹಿಡಿಯಲು ವಿಶೇಷ ಹಗ್ಗವನ್ನು ಬಳಸುತ್ತಾರೆ. ಇದನ್ನು 'ಲಾಸ್ಸೋ' ಎಂದು ಕರೆಯಲಾಗುತ್ತದೆ. ಇದರಲ್ಲಿ ಹಗ್ಗದ ಒಂದು ತುದಿಯನ್ನು ಕುಣಿಕೆಯಂತೆ ಮಾಡಲಾಗಿರುತ್ತದೆ. ಹಗ್ಗದ ಕುಣಿಕೆ ಭಾಗವನ್ನು ಜಾನುವಾರು ಕಡೆಗೆ ಎಸೆದಾಗ ಆ ಕುಣಿಕೆಯಲ್ಲಿ ಜಾನುವಾರು ತಲೆ ಸಿಲುಕಿಕೊಳ್ಳುತ್ತದೆ. ಕಿಮೋ ಪೋರ್ಟ್​ ಅನ್ನು ತೆಗೆದುಹಾಕಲು ನಾವು ಅದೇ ವಿಧಾನವನ್ನು ಅಳವಡಿಸಿಕೊಂಡಿದ್ದೆವು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಅಲ್ಝೈಮರ್​ ಮೆದುಳಿನ ರೋಗ ಅಲ್ಲ: ಇದು ಬುದ್ಧಿಮಾಂದ್ಯತೆಯ ಸಾಮಾನ್ಯ ರೂಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.