ETV Bharat / bharat

ಶಿಕ್ಷಕನಿಗೆ ಡಿಇಒ ಡ್ರಿಲ್.. ಹಿಂದಿಯಲ್ಲಿ ಪದ ಬರೆಯಲು ವಿಫಲನಾದ ಟೀಚರ್, ಇದೆಂಥಾ ಶಿಕ್ಷಣವಯ್ಯಾ?

ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯಲ್ಲಿ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ಡಿಇಒ ಹಿಂದಿಯಲ್ಲಿ ಎಂಎ ಪದವಿ ಪಡೆದಿರುವ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಒಂದು ಪದ ಬರೆಯಲು ಹೇಳುತ್ತಾರೆ. ಆದರೆ, ಹಲವಾರು ಪ್ರಯತ್ನಗಳ ಹೊರತಾಗಿಯೂ ಶಿಕ್ಷಕ ಪದವನ್ನು ಸರಿಯಾಗಿ ಬರೆಯಲು ವಿಫಲರಾದರು. ಇದು ಡಿಇಒ ಅಸಮಾಧಾನಕ್ಕೆ ಕಾರಣವಾಗಿದೆ.

DEO lambasts MA teacher for failing to write a Hindi word
ಹಿಂದಿಯಲ್ಲಿ ಪದ ಬರೆಯಲು ವಿಫಲನಾದ ಶಿಕ್ಷಕನ ವಿಡಿಯೋ ವೈರಲ್
author img

By

Published : Aug 7, 2021, 7:20 PM IST

ಕವರ್ಧ(ಛತ್ತೀಸ್‌ಗಢ): ಹಿಂದಿಯಲ್ಲಿ ಎಂಎ ಪದವಿ ಪಡೆದಿರುವ ಸರ್ಕಾರಿ ಶಾಲೆಯ ಶಿಕ್ಷಕ ಒಂದು ಪದ ಬರೆಯಲು ವಿಫಲರಾಗಿರುವುದು ಜಿಲ್ಲಾ ಶಿಕ್ಷಣ ಅಧಿಕಾರಿಯ ಅಸಮಾಧಾನಕ್ಕೆ ಕಾರಣವಾಗಿದೆ. ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಮಕ್ಕಳಿಗಾಗಿ ಆರಂಭಿಸಲಾಗಿರುವ ಮೊಹಲ್ಲಾ ತರಗತಿಗಳನ್ನು ಡಿಇಒ ರಾಕೇಶ್ ಪಾಂಡೆ ಪರಿಶೀಲಿಸುತ್ತಿರುವ ವಿಡಿಯೋ ಕ್ಲಿಪ್ ವೈರಲ್​ ಆಗಿದೆ.

ಶಿಕ್ಷಕನಿಗೆ ಡಿಇಒ ಡ್ರಿಲ್

ಡಿಇಒ ಶಿಕ್ಷಕರಿಗೆ 'अंत्येष्टि' (ಅಂತ್ಯೊಷ್ಟಿ) ಪದವನ್ನು ಬರೆಯಲು ಹೇಳುತ್ತಾರೆ. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಶಿಕ್ಷಕ ಪದವನ್ನು ಸರಿಯಾಗಿ ಬರೆಯಲು ವಿಫಲರಾದರು. ರಾಯ್‌ಪುರದಿಂದ 100 ಕಿಮೀ ದೂರದಲ್ಲಿರುವ ಕವಾರಾದ ಲೋಹರಾ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. 4 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಳ ದರ್ಜೆಯ ಹಿಂದಿ ಪಠ್ಯಪುಸ್ತಕಗಳನ್ನು ಸಹ ಓದಲು ಸಾಧ್ಯವಾಗದಿರುವುದನ್ನು ಗಮನಿಸಿದ ಡಿಇಒ ವಿದ್ಯಾರ್ಥಿಗಳೊಂದಿಗೆ ಮತ್ತಷ್ಟು ಸಂವಹನ ನಡೆಸಿದ ನಂತರ ಅಸಮಾಧಾನಗೊಂಡಿದ್ದಾರೆ.

ಡಿಇಒ ಶಾಲೆಗೆ ದಿಢೀರನೆ ತಪಾಸಣೆಗೆ ಆಗಮಿಸಿದ್ದರು. ಎಂಎ ಹಿಂದಿ ಪದವೀಧರರಾಗಿರುವ ಶಿಕ್ಷಕನಿಗೆ ಹಿಂದಿ ಭಾಷೆಯಲ್ಲಿಯೇ ಒಂದು ಪದವನ್ನು ಬರೆಯಲು ಸಾಧ್ಯವಾಗದ ಕರುಣಾಜನಕ ಸ್ಥಿತಿಯನ್ನು ನೋಡಿದ ಡಿಇಒ, ಮಕ್ಕಳು ಕಳಪೆ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಹೇಳಿದರು.

ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಜೋಪ್ರಾಗೆ ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ಮೋದಿ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.