ETV Bharat / bharat

ಛಾಪ್ರಾದ ಮದ್ಯ ದುರಂತ; ಮಾಸ್ಟರ್ ಮೈಂಡ್ ಬಂಧನ - ನಿತೀಶ್​ ಸರ್ಕಾರದ ಆಡಳಿತದ

ಬಿಹಾರದಲ್ಲಿ ಕಲಬೆರಕೆ ಮದ್ಯ ಸೇವಿಸಿ 70 ಕ್ಕಿಂತ ಅಧಿಕ ಮಂದಿ ಸಾವನ್ನಪ್ಪಿದ್ದರು, ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

Arrest of accused in Chhapra alcohol disaster
ಛಾಪ್ರಾದ ಮದ್ಯ ದುರಂತದ ಆರೋಪಿಯ ಬಂಧನ
author img

By

Published : Dec 31, 2022, 1:01 PM IST

ಪಾಟ್ನಾ: ವಿಷಪೂರಿತ ಮದ್ಯ ಸೇವಿಸಿ 70 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿತ್ತು. ಈ ದುರ್ಘಟನೆಯ ನಂತರ ಪೊಲೀಸ್​ ಕಾರ್ಯಚರಣೆಯು ತೀವ್ರವಾಗಿ ಶುರುವಾಗಿತ್ತಾದರೂ, ತನಿಖೆ ಕುರಿತು ನಿತೀಶ್​ ಸರ್ಕಾರದ ಆಡಳಿತದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುವುದಲ್ಲದೇ ಟೀಕೆಗೂ ಗುರಿಯಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರ ಬಂಧನ ಕೂಡ ಮಾಡಿದ್ದರು. ಇದೀಗ ಮುಖ್ಯವಾಗಿ ಕಲಬೆರಕೆ ಮದ್ಯದ ರುವಾರಿಯನ್ನು ಬಂದಿಸಿದ್ದಾರೆ. ಹೌದು ಹೋಮಿಯೋಪತಿ ಔಷಧದಿಂದ ಮದ್ಯ ತಯಾರಿಸಿದ ಮಾಸ್ಟರ್ ಮೈಂಡ್​ ಅನ್ನು ಪೊಲೀಸರು ದೆಹಲಿಯಲ್ಲಿ ಸೆರೆ ಹಿಡಿದಿದ್ದಾರೆ. ಈ ಮದ್ಯ ದುರಂತದ ಮಾಸ್ಟರ್​ ಮೈಂಡ್​ ಹೆಸರು ರಾಮ್ ಬಾಬು ಆಗಿದ್ದು , ಆತನ ವಯಸ್ಸು 35 ವರ್ಷ ಎಂದು ತಿಳಿದು ಬಂದಿದೆ.

ವಿಷಪೂರಿತ ಮದ್ಯದ ಪ್ರಮುಖ ಪೂರೈಕೆದಾರ ಬಂಧನ: ಛಾಪ್ರಾ ವಿಷಯುಕ್ತ ಮದ್ಯ ಪ್ರಕರಣದಲ್ಲಿ ಮದ್ಯ ಸೇವಿಸಿ ಜನರು ಸಾವನ್ನಪ್ಪಲು ಕಾರಣನಾದ ಕಲಬೆರಕೆ ಮದ್ಯದ ಮುಖ್ಯ ಪೂರೈಕೆದಾರನನ್ನು ವಾರಾಣಸಿಯಲ್ಲಿ ಬಂಧಿಸಲಾಗಿದೆ. ಪ್ರಮುಖ ಪೂರೈಕೆದಾರ ಸಂಜೀವ್ ಕುಮಾರ್​ ಆಗಿದ್ದು, ಇವನ ನಂತರ ಈ ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಆರೋಪಿಗಳು ಮದ್ಯಕ್ಕೆ ರಾಸಾಯನಿಕಗಳನ್ನು ಬೆರೆಸಿ ತಯಾರಿಸಿ ಮಾರಾಟ ಮಾಡಿದ್ದರಿಂದ ಸೇವನೆ ಮಾಡಿದವರು ಪ್ರಾಣ ಕಳೆದು ಕೊಂಡಿದ್ದಾರೆ. ಇಲ್ಲಿಗೆ ತನಿಖೆ ನಿಲ್ಲಿಸದ ಪೊಲೀಸರು, ಪ್ರಕರಣದ ತನಿಖೆಯ ವೇಳೆ ಹೊರಬಿದ್ದಿರುವ ಅಂಶಗಳ ಆಧಾರದ ಮೇಲೆ ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಇದುವರೆಗೂ ಪೊಲೀಸರು 150ಕ್ಕೂ ಹೆಚ್ಚು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಬಿಹಾರದ ಸರನ್‌ನ ಮಶ್ರಕ್, ಮಧುರಾ, ಇಸುಪುರ್ ಮತ್ತು ಅಮಾನೂರ್ ಬ್ಲಾಕ್‌ಗಳಲ್ಲಿ ಈ ಸಾವುಗಳು ಉಂಟಾಗಿದ್ದು, ಮಾನವ ಹಕ್ಕುಗಳ ತಂಡವೂ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ.

ಬಿಹಾರದಲ್ಲಿ ಸಂಚಲನ ಮೂಡಿಸಿದ ಈ ದುರಂತದ ಪರಿಣಾಮವಾಗಿ ಮೃತರಾದ ಕುಟುಂಬಗಳಿಗೆ ಪರಿಹಾರ ನೀಡಬೇಕಾಗಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬಬೇಕಿದೆ.

ಇದನ್ನೂ ಓದಿ: ಸಿಬಿಐ ದಾಳಿ: ಲಂಚ ಪ್ರಕರಣದಲ್ಲಿ ಐಡಿಎಎಸ್ ಅಧಿಕಾರಿ ಸೇರಿ 6 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.