ETV Bharat / bharat

ವಿಶ್ವದಾದ್ಯಂತ ಗ್ರಾಹಕರನ್ನು ಆಕರ್ಷಿಸುತ್ತಿರುವ ‘ಚಂಬಾ ಕಲೆ’..

ಉದ್ಯೋಗ ಕೊರತೆಯ ಸಮಯದಲ್ಲಿ, ಇದು ಯುವಕರಿಗೆ ಅವಕಾಶದ ಬಾಗಿಲನ್ನ ತೆರೆಯುತ್ತದೆ. ಆದ ಕಾರಣ ಈ ಕಲೆಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ..

author img

By

Published : Feb 17, 2021, 6:08 AM IST

Chamba art of Himachal Pradesh ಹಿಮಾಚಲಪ್ರದೇಶ ಚಂಬಾ ಕಲೆ ಸುದ್ದಿ
ಹಿಮಾಚಲಪ್ರದೇಶ ಚಂಬಾ ಕಲೆ ಸುದ್ದಿ

ಚಂಬಾ (ಹಿಮಾಚಲ ಪ್ರದೇಶ): ಇದು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ. ಲೋಹದ ತಟ್ಟೆಯಲ್ಲಿ ತರಹೇವಾರು ಶಿಲ್ಪ ಕೆತ್ತನೆ ಮಾಡುವುದು ಇಲ್ಲಿನ ಕರಕುಶಲ ಕರ್ಮಿಗಳಿಗೆ ಕರಗತ. ಚಂಬಾ ಕರಕುಶಲ ವಸ್ತುಗಳು ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಪ್ರಸಿದ್ಧವಾಗಿವೆ. ಚಂಬಾದ ಕುಶಲಕರ್ಮಿಗಳು ಲೋಹದ ತಟ್ಟೆಯಲ್ಲಿ ವಿವಿಧ ಚಿತ್ರಗಳನ್ನು ಕೆತ್ತುತ್ತಾರೆ. ಈ ಕೆಲಸವನ್ನು ಮೊದಲು ಪ್ರಾರಂಭಿಸಿದ್ದು, ಶಿಲ್ಪಿ ಪ್ರಕಾಶ್ ಚಂದ್. ಈ ಸಾಧನೆಗಾಗಿ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಸಹ ಲಭಿಸಿದೆ.

ಪ್ರಕಾಶ್ ಚಂದ್ ಅವರು ಈ ಕೆಲಸವನ್ನು ಪ್ರಾರಂಭಿಸಿದಾಗ 11 ವರ್ಷ. ರಾಷ್ಟ್ರಾದ್ಯಂತ ಇವರ ಕಲೆ ಪ್ರಸಿದ್ಧಿ ಪಡೆಯಿತು. ಕಲೆ ಅರಸಿ ಅನೇಕ ಸಮ್ಮಾನಗಳು ಸಹ ಪ್ರಕಾಶ್​ ಚಂದ್​ ಅವರಿಗೆ ಲಭಿಸಿದವು. ಈಗ ಪ್ರಕಾಶ್ ಅವರ ಮಗ ಮತ್ತು ಮೊಮ್ಮಗ ಈ ಸಾಂಪ್ರದಾಯಿಕ ಕೌಶಲ್ಯ ಮುಂದುವರೆಸುತ್ತಿದ್ದಾರೆ. ವಿಶ್ವದಾದ್ಯಂತ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಅವರ ಶಿಲ್ಪಕಲೆ ಮತ್ತು ಲೋಹದ ತಟ್ಟೆಗಳಲ್ಲಿ ಕೆತ್ತಿದ ಕೆತ್ತನೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿವೆ.

ಲೋಹದ ತಟ್ಟೆಯಲ್ಲಿ ತರಹೇವಾರು ಶಿಲ್ಪ ಕೆತ್ತನೆ

ಒಂದು ಕೆತ್ತನೆಯನ್ನು ಒಂದು ತಟ್ಟೆಯಲ್ಲಿ ಕೆತ್ತಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ. ಪ್ರಕಾಶ್ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಸೇರಿದಂತೆ ಅನೇಕ ಗಣ್ಯರ ಭಾವಚಿತ್ರಗಳನ್ನು ಕೆತ್ತಿ, ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈಗ ಅವರ ಮೊಮ್ಮಗ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಕೆತ್ತಲು ಮತ್ತು ಅವರಿಗೆ ಉಡುಗೊರೆ ನೀಡುವ ಕನಸು ಹೊಂದಿದ್ದಾರೆ.

ಜನರು ತಮ್ಮ ಮನೆಯನ್ನು ಅಲಂಕರಿಸಲು ಚಂಬಾ ಅವರ ತಟ್ಟೆಯನ್ನು ಬಳಸುತ್ತಾರೆ. ಅಲ್ಲದೇ ಶುಭಸಮಾರಂಭಗಳಲ್ಲಿ ಆತ್ಮೀಯರಿಗೆ ಉಡುಗೊರೆಯಾಗಿ ನೀಡುತ್ತಾರೆ. ಈ ಕಲಾವಿದರು ಶಿಲ್ಪಕಲೆ ತಯಾರಿಸುವಲ್ಲಿ ಪರಿಣತರಾಗಿದ್ದಾರೆ. ಆದರೆ, ಕಲಾತ್ಮಕ ಉತ್ಪನ್ನಗಳನ್ನು ತಯಾರಿಸಲು ಕಠಿಣ ಪರಿಶ್ರಮ ಮತ್ತು ಸಮಯ ಬೇಕಾಗುತ್ತದೆ.

ಉದ್ಯೋಗ ಕೊರತೆಯ ಸಮಯದಲ್ಲಿ, ಇದು ಯುವಕರಿಗೆ ಅವಕಾಶದ ಬಾಗಿಲನ್ನ ತೆರೆಯುತ್ತದೆ. ಆದ ಕಾರಣ ಈ ಕಲೆಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಪ್ರಕಾಶ್ ಚಂದ್ ಅವರು ಕರಕುಶಲತೆಯ ಪರಂಪರೆಯನ್ನು ಚಂಬಾ ಜಿಲ್ಲೆಗೆ ಹಸ್ತಾಂತರಿಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿದರೆ, ಅದು ಯುವಕರಿಗೆ ಉದ್ಯೋಗ ನಿಡುವ ಜತೆಗೆ, ಜಾಗತಿಕ ಮಟ್ಟದಲ್ಲಿ ಚಂಬಾ ಶಿಲ್ಪಕಲೆ ಮನ್ನಣೆ ಪಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.