ETV Bharat / bharat

Viral Video: ಒಂದೇ ಬೈಕ್​ನಲ್ಲಿ ಐವರ ಪಯಣ..12 ಸಾವಿರ ದಂಡ ವಿಧಿಸಿದ ಖಾಕಿ ಟೀಂ - ನವದೆಹಲಿ ಬೈಕ್ ಸ್ಟಂಟ್

ಆ್ಯಪ್​ನಲ್ಲಿ ವಿಡಿಯೋ ಅಪ್ಲೋಡ್​ ಮಾಡುವ ಸಲುವಾಗಿ ಯುವಕರು ಮಾಡಿದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Stunt Viral Video
Stunt Viral Video
author img

By

Published : Oct 16, 2021, 4:58 PM IST

ನವದೆಹಲಿ/ಗಾಜಿಯಾಬಾದ್: ಬೈಕ್​ನಲ್ಲಿ ನಾಲ್ವರು ಪಯಣಿಸುತ್ತಿದ್ದಾಗ, ಮತ್ತೊಬ್ಬ ಲಿಫ್ಟ್ ಕೇಳಿದ. ಯುವಕರು ಅವನನ್ನೂ ಎತ್ತಿಕೊಂಡು ಹೋಗಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿಗಳಿಗೆ 12 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಒಂದೇ ಬೈಕ್​ನಲ್ಲಿ ಐವರ ಪಯಣ

ಈ ಪ್ರಕರಣವು ಗಾಜಿಯಾಬಾದ್​ನ ವಿಜಯನಗರದಲ್ಲಿ ನಡೆದಿದ್ದು, ಕೆಲ ಯುವಕರು ಆ್ಯಪ್​ನಲ್ಲಿ ಅಪ್ಲೋಡ್ ಮಾಡುವ ಸಲುವಾಗಿ ವಿಡಿಯೋ ಮಾಡಿದ್ದಾರೆ. ಬೈಕ್​​ ನೋಂದಣಿ ಸಂಖ್ಯೆ ಯುಪಿ-14 ಆಗಿದ್ದು, ಅದರ ಮಾಲೀಕ ಸುನಿಲ್ ಎಂದು ತಿಳಿದು ಬಂದಿದೆ.

ಯುವಕರು ಚಿತ್ರೀಕರಣದ ವೇಳೆ ಕೋವಿಡ್ ನಿಯಮಗಳನ್ನು(ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವಿಲ್ಲ) ಪಾಲಿಸಿಲ್ಲ. ಸಾಮಾನ್ಯವಾಗಿ ಜನರು ಟಿಕ್​ಟಾಕ್​ ರೀತಿಯ ಆ್ಯಪ್​ಗಳಿಗೆ ಅಪ್​ಲೋಡ್ ಮಾಡಲು ಇಂಥ ವಿಡಿಯೋಗಳನ್ನು ಮಾಡುತ್ತಾರೆ. ಆದರೆ, ಅಪಾಯದ ಬಗ್ಗೆ ಗಮನಹರಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುಂಚೆಯೇ ಪೊಲೀಸರು, ಇಂಥ ವಿಡಿಯೋಗಳನ್ನು ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ರು. ಆದರೂ, ಜನತೆ ಎಚ್ಚೆತ್ತುಕೊಂಡಿರಲಿಲ್ಲ. ಮನೋರಂಜನೆಗಾಗಿ ಯುವಕರು ಟ್ರಾಫಿಕ್, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.