ETV Bharat / bharat

ರಾಜ್ಯಗಳಿಗೆ 95,000 ಕೋಟಿ ರೂ. ತೆರಿಗೆ ಹಣ ಬಿಡುಗಡೆಗೊಳಿಸಿದ ಕೇಂದ್ರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? - finance ministry

ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿನ ಹಣವನ್ನು ಇಂದು ಕೇಂದ್ರ ಹಣಕಾಸು ಇಲಾಖೆ ರಿಲೀಸ್ ಮಾಡಿದೆ.

Union taxes
Union taxes
author img

By

Published : Nov 23, 2021, 7:13 PM IST

ನವದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣದ ಕಂತು ರಿಲೀಸ್​ ಆಗಿದ್ದು, 28 ರಾಜ್ಯಗಳಿಗೆ ಒಟ್ಟು 95,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ, ಕರ್ನಾಟಕಕ್ಕೆ 3,467.62 ಕೋಟಿ ರೂ. ಸಿಕ್ಕಿದೆ.

ಕೇಂದ್ರ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ​​ ಆಗಿದೆ. ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿರುವ ಕಾರಣ ಇಷ್ಟೊಂದು ಹಣ ಬಿಡುಗಡೆಯಾಗಿದೆ. ಕಳೆದ ವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ರಾಜ್ಯಗಳಿಗೆ ತೆರಿಗೆ ಹಣ ರಿಲೀಸ್ ಮಾಡುವುದಾಗಿ ಭರವಸೆ ನೀಡಿದ್ದರು.

  • ✅ Centre releases two installments of tax devolution to States of Rs. 95,082 crore as against normal monthly devolution of Rs. 47,541 crore

    ✅ Rs. 95,082 crore of Tax devolution to strengthen fiscal space of States

    Read more ➡️ https://t.co/1n7EyycuaC pic.twitter.com/aVRrKShXB5

    — Ministry of Finance (@FinMinIndia) November 23, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಶರಣಾದ 21ರ ವಿವಾಹಿತೆ

ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಣ?

ಕೇಂದ್ರ ಸರ್ಕಾರದಿಂದ ರಿಲೀಸ್​ ಆಗಿರುವ ಹಣದಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು 17056.66 ಕೋಟಿ ಸಿಕ್ಕಿದೆ. ಉತ್ತರಾಖಂಡ್​​ಗೆ 1063.02 ಕೋಟಿ ರೂ., ಮಧ್ಯಪ್ರದೇಶಕ್ಕೆ 7463.92 ಕೋಟಿ ರೂ. ಛತ್ತೀಸ್​ಘಡಕ್ಕೆ 3239.54 ಕೋಟಿ ರೂ. ಮಹಾರಾಷ್ಟ್ರಕ್ಕೆ 6006.30 ಕೋಟಿ, ಗುಜರಾತ್​ಗೆ 3306.94 ಕೋಟಿ ರೂ. ಹಾಗೂ ಗೋವಾಗೆ 367.02 ಕೋಟಿ ರೂ. ಸಿಕ್ಕಿದೆ. ಉಳಿದಂತೆ ಪಂಜಾಬ್​ಗೆ 1718.16 ಕೋಟಿ ರೂ., ಹರಿಯಾಣ 1039.24 ಕೋಟಿ ರೂ., ರಾಜಸ್ಥಾನಕ್ಕೆ 5729.64 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 789.16 ಕೋಟಿ ರೂ., ಆಂಧ್ರಪ್ರದೇಶಕ್ಕೆ 3847.96 ಕೋಟಿ ರೂ., ತೆಲಂಗಾಣ 1998.62 ಕೋಟಿ ರೂ., ತಮಿಳುನಾಡಿಗೆ 3878.38 ಕೋಟಿ ರೂ., ಕರ್ನಾಟಕಕ್ಕೆ 3467.62 ಕೋಟಿ ರೂ ಹಾಗೂ ಕೇರಳಕ್ಕೆ 1830.38 ಕೋಟಿ ರೂ. ಸಿಕ್ಕಿದೆ.

ಪಶ್ಚಿಮ ಬಂಗಾಳಕ್ಕೆ 7152.96 ಕೋಟಿ ರೂ., ಬಿಹಾರ 9563.30 ಕೋಟಿ ರೂ., ಜಾರ್ಖಂಡ್​​ 3144.34 ಕೋಟಿ ರೂ. ಒಡಿಶಾ 4305.32 ಕೋಟಿ, ಅಸ್ಸೋಂಗೆ 2974.16 ಕೋಟಿ ರೂ. ಅರುಣಾಚಲ ಪ್ರದೇಶ 1670.58 ಕೋಟಿ ರೂ. ಸಿಕ್ಕಿಂ 368.94 ಕೋಟಿ ರೂ. ಮಣಿಪುರ 680.80 ಕೋಟಿ ರೂ.ಮೇಘಾಲಯ 729.28 ಕೋಟಿ ರೂ. ಮಿಜೋರಾಂ 475.42 ಕೋಟಿ ರೂ. ತ್ರಿಪುರಾ 673.32 ಕೋಟಿ ರೂ. ನಾಗಾಲ್ಯಾಂಡ್​​ 541.02 ಕೋಟಿ ರೂ. ಪಡೆದುಕೊಂಡಿದೆ.

ಕೇಂದ್ರ ಹಣಕಾಸು ಇಲಾಖೆ ಪ್ರತಿ ಸಲ ತೆರಿಗೆ ಹಣ ರಿಲೀಸ್ ಮಾಡುವಾಗಲೂ 47 ಸಾವಿರ ಕೋಟಿ ರೂ. ಬಿಡುಗಡೆ ಮಾಡುತ್ತಿತ್ತು. ಆದರೆ ಇದೀಗ ದೇಶದ ಕೆಲವೊಂದು ರಾಜ್ಯಗಳಲ್ಲಿ ನೆರೆಹಾವಳಿ ಉಂಟಾಗಿರುವ ಕಾರಣ ಎರಡು ಹಂತದ ಹಣ ಒಟ್ಟಿಗೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.