ETV Bharat / bharat

ವಿಶೇಷಚೇತನರ ಮನೆ ಬಾಗಿಲಿಗೆ ಕೋವಿಡ್​ ವ್ಯಾಕ್ಸಿನ್​​: ಕೇಂದ್ರ ಸರ್ಕಾರ - ಅಂಗವಿಕಲರ ಮನೆ ಬಾಗಿಲಿಗೆ ಕೋವಿಡ್​ ವ್ಯಾಕ್ಸಿನ್​​

ದೇಶದಲ್ಲಿನ ವಿಶೇಷಚೇತನರ ಮನೆ ಬಾಗಿಲಿಗೆ ತೆರಳಿ ಕೋವಿಡ್​ ವ್ಯಾಕ್ಸಿನ್ ನೀಡುವಂತೆ ಈಗಾಗಲೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Covid vaccination
Covid vaccination
author img

By

Published : Sep 23, 2021, 9:13 PM IST

ನವದೆಹಲಿ: ವಿಶೇಷಚೇತನರ ಮನೆ ಬಾಗಿಲಿಗೆ ತೆರಳಿ ಕೋವಿಡ್​ ವ್ಯಾಕ್ಸಿನೇಷನ್​ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಲಾಗಿದ್ದು, ಸಂಭಾವ್ಯ ಫಲಾನುಭವಿಗಳ ಪಟ್ಟಿ ತಯಾರು ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್​ ನವದೆಹಲಿಯಲ್ಲಿ ತಿಳಿಸಿದರು.

ಭಾರತದಲ್ಲಿ 61.85 ಕೋಟಿ ಜನರಿಗೆ ಮೊದಲ ಡೋಸ್​ ಹಾಗೂ 21.55 ಕೋಟಿ ಜನರಿಗೆ ಎರಡನೇ ಡೋಸ್​ ನೀಡಲಾಗಿದೆ ಎಂದು ಮಾಹಿತಿ ನೀಡಿರುವ ಭೂಷಣ್, ದೇಶದ ಎಲ್ಲರಿಗೂ​ ವ್ಯಾಕ್ಸಿನ್​​ ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ರೀತಿ ಜಗತ್ತಿನ ಬೇರಾವುದೇ ದೇಶ ಕೋವಿಡ್​ ನಿರ್ವಹಿಸಿಲ್ಲ: ಸುಪ್ರೀಂಕೋರ್ಟ್ ಮೆಚ್ಚುಗೆ

45.75 ಕೋಟಿ ಗ್ರಾಮೀಣ ಜನರು ಈಗಾಗಲೇ ಕೋವಿಡ್​ ಲಸಿಕೆ ಪಡೆದುಕೊಂಡಿರುವುದಕ್ಕೆ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಶೇ.25.42ರಷ್ಟು ನಗರ ಪ್ರದೇಶದ ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳಿಂದ ನವರಾತ್ರಿ, ದಸರಾ, ಈದ್​-ಮಿಲಾದ್​​, ಕರ್ವಾ ಚೌತ್​, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಇರುವ ಕಾರಣ ಕೋವಿಡ್​ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಈ ರಾಜ್ಯಗಳಲ್ಲಿ ಹೆಚ್ಚು ಸಕ್ರಿಯ ಪ್ರಕರಣ

ಕೇರಳದಲ್ಲಿ 1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಮಹಾರಾಷ್ಟ್ರ, ತಮಿಳುನಾಡು, ಮಿಜೋರಾಂ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 10 ರಿಂದ 50 ಸಾವಿರ ಕೋವಿಡ್​​ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಭಾರತ್​ ಬಯೋಟೆಕ್​ನ ಕೊವಾಕ್ಸಿನ್​ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದ್ದು, ಅದರ ವರದಿ ಬಂದ ನಂತರ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಲರಾಮ್​ ಬಾರ್ಗವ್​ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.