ಅಹಮದಾಬಾದ್(ಗುಜರಾತ್): ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್(ಸಿಬಿಎನ್) ಜಿಲ್ಲೆಯ ಚಂಗೋದ್ನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ 20 ಕೋಟಿ ರೂ. ಮೌಲ್ಯದ ಒಂದು ಕೋಟಿಗೂ ಹೆಚ್ಚು ಟ್ಯಾಬ್ಲೆಟ್‌ಗಳ ಇರುವ ಮಾಹಿತಿಯ ಮೇರೆಗೆ ಚಂಗೋದರ್‌ನಲ್ಲಿ ಈ ದಾಳಿ ನಡೆಸಲಾಗಿದೆ.
ಮಾದಕ ಪದಾರ್ಥಗಳು ಮಾರುಕಟ್ಟೆಗೆ ಬರದಂತೆ ತಡೆಯಲು 2022 ರ ನವೆಂಬರ್‌ನಲ್ಲಿ ದೆಹಲಿ ಮತ್ತು 2023 ರ ಮಾರ್ಚ್‌ನಲ್ಲಿ ರಾಜಸ್ಥಾನದಲ್ಲಿ 5 ಜನರನ್ನು ಕೇಂದ್ರ ನಾರ್ಕೋಟಿಕ್ಸ್ ಬ್ಯೂರೋ ಬಂಧಿಸಿತ್ತು. ಈವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಈ ಎರಡೂ ಪ್ರಕರಣಗಳಿಂದ ಚಂಗೋದರ್‌ಗೆ ಭಾರೀ ಪ್ರಮಾಣದ ಅಕ್ರಮ ಡ್ರಗ್ಸ್ ಬರುತ್ತಿರುವ ಬಗ್ಗೆ ಕೇಂದ್ರ ನಾರ್ಕೋಟಿಕ್ಸ್ ತಂಡಕ್ಕೆ ಮಾಹಿತಿ ಸಿಕ್ಕಿತ್ತು.
ಈ ಹಿನ್ನೆಲೆ ಚಂಗೋದರ್‌ನ ಪುಷ್ಕರ್ ಮತ್ತು ಕೈಗಾರಿಕಾ ಪಾರ್ಕ್‌ಗೆ ತೆರಳಿದ ಸೆಂಟ್ರಲ್ ಬ್ಯೂರೋ ನಾರ್ಕೋಟಿಕ್ಸ್ ತಂಡಕ್ಕೆ ಚಂಗೋದರ್‌ಗೆ ಒಂದು ಕೋಟಿ ಪ್ರಮಾಣದ ಔಷಧಿಗಳು ತಲುಪಿರುವ ಮಾಹಿತಿ ಇತ್ತು. ಹೆಲ್ತ್‌ಕೇರ್ ಕಂಪನಿಯ ಮಾಲೀಕರೊಬ್ಬರಿಂದ ಆರ್ಡರ್ ನೀಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣವೊಂದರ ಸಂಬಂಧ ಕಂಪನಿಯ ಮಾಲೀಕರನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿ ರಾಯಪುರ ಜೈಲಿನಲ್ಲಿ ಇರಿಸಿರುವುದು ತಿಳಿದುಬಂದಿದೆ. ಈ ಪ್ರಕರಣ ಮತ್ತೊಬ್ಬ ಆರೋಪಿ ಮೆಹ್ಸಾನಾ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ:ಬಾತ್ರೂಮಲ್ಲಿ ಬಾಲಕಿ ಬಂಧಿಸಿಟ್ಟು ಕ್ರೌರ್ಯ.. ಶಾಲಾ ಶಿಕ್ಷಕಿ ವಿರುದ್ಧ ಕೇಸ್
ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ನ ಸೂಪರಿಂಟೆಂಡೆಂಟ್ ಎಸ್.ಪಿ.ಸಿಂಗ್ ಮಾತನಾಡಿ, ಹಿಂದಿನ ಎರಡು ಪ್ರಕರಣಗಳ ತನಿಖೆ ಹಿನ್ನೆಲೆ ಈ ಸ್ಥಳಕ್ಕೆ ಡ್ರಗ್ಸ್ ಬರುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಮಹಿತಿ ಪಡೆದು, ದಾಳಿ ನಡೆಸಿ ಒಂದು ಕೋಟಿಗೂ ಹೆಚ್ಚು ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 20 ಕೋಟಿಗೂ ಹೆಚ್ಚು. ಈ ಪ್ರಕರಣದ ಪ್ರಮುಖ ಆರೋಪಿ ಸದ್ಯ ಇತರೆ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದಿದ್ದಾರೆ.
20 ಕೋಟಿ ಮೌಲ್ಯದ ಡ್ರಗ್ಸ್ ವಶ: ವಶಪಡಿಸಿಕೊಂಡ ಔಷಧಗಳು ನೋವು ನಿವಾರಕ ಮತ್ತು ನಿದ್ರೆಗೆ ಬಳಸುವ ಮಾತ್ರೆಗಳಾಗಿವೆ. ಇವುಗಳನ್ನು ಮಾದಕ ವಸ್ತುಗಳನ್ನಾಗಿಯೂ ಸಹ ಬಳಸಲಾಗುತ್ತದೆ ಎಂಬ ಮಾಹಿತಿ ಇದೆ. 44 ಲಕ್ಷದ 55 ಸಾವಿರದ 600 ಸೈಕೋಟ್ರೋಪಿಕ್ ಡ್ರಗ್ ಅಲ್ಪ್ರಜೋಲಮ್ ಮಾತ್ರೆಗಳು ಮತ್ತು 57 ಲಕ್ಷದ 87 ಸಾವಿರದ 52 ಟ್ರಾಮಾಡೋಲ್ ಕ್ಯಾಪ್ಸುಲ್‌ಗಳು ಪತ್ತೆಯಾಗಿವೆ. ಒಟ್ಟು 1 ಕೋಟಿ 2 ಲಕ್ಷದ 42 ಸಾವಿರದ 652 ಕ್ಯಾಪ್ಸೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 20 ಕೋಟಿ ರೂಪಾಯಿಗೂ ಹೆಚ್ಚು. ಆರೋಪಿ ಮೆಹ್ಸಾನಾ ವಿವಿಧ ರಾಜ್ಯಗಳಿಗೆ ಈ ಮಾದಕ ವಸ್ತುಗಳನ್ನು ರವಾನಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಮ್‌ದಲ್ಲಿ ಪರಿಚಯವಾದ ಸ್ನೇಹಿತನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ