ETV Bharat / bharat

ಪ್ರಾದೇಶಿಕ ಭದ್ರತೆ, ಸಮೃದ್ಧಿಗೆ ಭಾರತ ಮತ್ತು ಮಧ್ಯ ಏಷ್ಯಾ ನಡುವೆ ಸಹಕಾರ ಅಗತ್ಯ: ಮೋದಿ - ಪ್ರಧಾನಿ ನರೇಂದ್ರ ಮೋದಿ

ಪ್ರಾದೇಶಿಕ ಭದ್ರತೆಗೆ ನಾವೆಲ್ಲ ಸಮನಾದ ಕಾಳಜಿ ಮತ್ತು ಗುರಿಗಳನ್ನು ಹಂಚಿಕೊಳ್ಳಬೇಕಿದೆ. ಅಫ್ಘಾನಿಸ್ತಾನದಲ್ಲಿನ ಸದ್ಯದ ಬೆಳವಣಿಗೆ ಕುರಿತಂತೆ ನಾವೆಲ್ಲರೂ ಚಿಂತಿತರಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನಮ್ಮ ನಡುವಿನ ಪರಸ್ಪರ ಸಹಕಾರವು ಬಹಳ ಮಹತ್ವದ್ದು ಎಂದು ಪ್ರಧಾನಿ ಮೋದಿ ಹೇಳಿದರು.

central-asia-is-central-to-indias-vision-of-integrated-stable-extended-neighbourhood-pm-modi
ಪ್ರಾದೇಶಿಕ ಭದ್ರತೆ, ಸಮೃದ್ಧಿಗೆ ಭಾರತ ಮತ್ತು ಮಧ್ಯ ಏಷ್ಯಾ ನಡುವೆ ಸಹಕಾರ ಅಗತ್ಯ: ಮೋದಿ
author img

By

Published : Jan 28, 2022, 1:44 AM IST

ನವದೆಹಲಿ: ಭಾರತ ಮತ್ತು ಮಧ್ಯ ಏಷ್ಯಾ ನಡುವಿನ ಸಹಕಾರಕ್ಕಾಗಿ ಮುಂಬರುವ ವರ್ಷಗಳಲ್ಲಿ ಮಹತ್ವಾಕಾಂಕ್ಷಿ ದೃಷ್ಟಿಕೋನ ವ್ಯಾಖ್ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಅಲ್ಲದೆ, ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿಗೆ ಭಾರತ ಮತ್ತು ಮಧ್ಯ ಏಷ್ಯಾ ನಡುವೆ ಪರಸ್ಪರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಡೆದ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಝಾಕಿಸ್ತಾನ್ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಾಯೆವ್, ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷ ಸದಿರ್ ಜಪರೋವ್, ತಜಿಕಿಸ್ತಾನ್ ಅಧ್ಯಕ್ಷ ಎಮೋಮಾಲಿ ರಹಮಾನ್, ತುರ್ಕಮೆನಿಸ್ತಾನ್ ಅಧ್ಯಕ್ಷ ಗುರ್ಬಾಂಗುಲಿ ಬರ್ಡಿಮುಹಮೆಡೋವ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ವರ್ಚುವಲ್​ನಲ್ಲಿ ಭಾಗವಹಿಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಅಭಿವೃದ್ದಿಗಾಗಿ ಮೂರು ಸೂತ್ರಗಳನ್ನು ಅನುಸರಿಸಬೇಕಾಗಿದೆ ಎಂದ ಪ್ರಧಾನಿ ಮೋದಿ, ಭಾರತದ ಸಮಗ್ರ ಮತ್ತು ಸ್ಥಿರ ನೆರೆಹೊರೆಯ ದೃಷ್ಟಿಗೆ ಮಧ್ಯ ಏಷ್ಯಾವು ಕೇಂದ್ರವಾಗಿದೆ. ನಮ್ಮ ಸಹಕಾರಕ್ಕೆ ಪರಿಣಾಮಕಾರಿ ರಚನೆ ನೀಡುವುದರಿಂದ ಎಲ್ಲಾ ಮಧ್ಯಸ್ಥಗಾರರ ನಡುವೆ ನಿಯಮಿತ ಸಂವಾದಕ್ಕೆ ಅಗತ್ಯ ವೇದಿಕೆ ನಿರ್ಮಾಣವಾಗಲಿದೆ. ಹೀಗಾಗಿ ನಮ್ಮ ಸಹಕಾರಕ್ಕಾಗಿ ಮಹತ್ವಾಕಾಂಕ್ಷಿ ಮಾರ್ಗಸೂಚಿ ರೂಪುಗೊಳ್ಳಬೇಕಿದೆ. ಇದರಿಂದ ಪ್ರಾದೇಶಿಕ ಸಂಪರ್ಕ ಮತ್ತು ಸಹಕಾರಕ್ಕಾಗಿ ಸಮಗ್ರ ವಿಧಾನ ಅಳವಡಿಕೆಗೆ ಅನುವು ಮಾಡಿಕೊಡಲಿದೆ ಎಂದು ತಿಳಿಸಿದರು.

ಪ್ರಾದೇಶಿಕ ಭದ್ರತೆಗೆ ನಾವೆಲ್ಲ ಸಮನಾದ ಕಾಳಜಿ ಮತ್ತು ಗುರಿಗಳನ್ನು ಹಂಚಿಕೊಳ್ಳಬೇಕಿದೆ. ಅಫ್ಘಾನಿಸ್ತಾನದಲ್ಲಿನ ಸದ್ಯದ ಬೆಳವಣಿಗೆ ಕುರಿತಂತೆ ನಾವೆಲ್ಲರೂ ಚಿಂತಿತರಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನಮ್ಮ ನಡುವಿನ ಪರಸ್ಪರ ಸಹಕಾರವು ಬಹಳ ಮಹತ್ವದ್ದು ಎಂದರು.

ಈ ಶೃಂಗಸಭೆಯು ಭಾರತ-ಮಧ್ಯ ಏಷ್ಯಾದ ಸಮಗ್ರ ಮತ್ತು ನಿರಂತರ ಪಾಲುದಾರಿಕೆಗೆ ಎರಡೂ ಕಡೆಯ ನಾಯಕರು ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ. ಪ್ರಧಾನಿ ಮೋದಿಯವರು 2015ರಲ್ಲಿ ಮಧ್ಯ ಏಷ್ಯಾದ ಎಲ್ಲ ದೇಶಗಳಿಗೆ ಭೇಟಿ ನೀಡಿದ್ದರು. ಬಳಿಕ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಉನ್ನತ ಮಟ್ಟದ ವಿನಿಮಯಗಳು ನಡೆದಿವೆ.

ಇದನ್ನೂ ಓದಿ: Budget 2022: ಈ ಸಲವೂ ಕಾಗದ ರಹಿತ ಬಜೆಟ್​, ಮೊಬೈಲ್​​ ಅಪ್ಲಿಕೇಶನ್​​ನಲ್ಲೂ ಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.