ETV Bharat / bharat

ಆಡಳಿತದಲ್ಲಿ ಎಲ್ಲರನ್ನೂ ಒಳಗೊಳ್ಳುವ ವಿಚಾರಧಾರೆ ಇರಲಿ.. ಕೇಂದ್ರಕ್ಕೆ ನೇತಾಜಿ ಮೊಮ್ಮಗ ಚಂದ್ರಕುಮಾರ್​ ಸಲಹೆ - ಚಂದ್ರಕುಮಾರ್​ ಬೋಸ್​ ನೇತಾಜಿ ಮೊಮ್ಮಗ

ನೇತಾಜಿ ಅವರ ಭವ್ಯ ಪ್ರತಿಮೆ ನಿರ್ಮಾಣದ ಜೊತೆಗೆ ನೇತಾಜಿ ಅವರ ವಿಚಾರಧಾರೆಗಳನ್ನು ಸರ್ಕಾರ ಅಳವಡಿಸಿಕೊಂಡು, ಎಲ್ಲಾ ಧರ್ಮಗಳಿಗೆ ಅನ್ವಯಿಸುವಂತಹ ಆಡಳಿತವನ್ನು ನೀಡಿದರೆ ಅದೇ ನೇತಾಜಿ ಅವರಿಗೆ ನಾವು ನೀಡುವ ದೊಡ್ಡ ಗೌರವ ಎಂದು ಹೇಳಿದ್ದಾರೆ..

netaji-kin
ದ್ರಕುಮಾರ್​ ಬೋಸ್​ ಸಲಹೆ
author img

By

Published : Jan 22, 2022, 4:56 PM IST

Updated : Jan 22, 2022, 5:34 PM IST

ನವದೆಹಲಿ : ಇಂಡಿಯಾ ಗೇಟ್​ನಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಷ್​ಚಂದ್ರ ಬೋಸ್​ ಅವರ ಪ್ರತಿಮೆ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾದ ಕ್ರಮವನ್ನು ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್​ ಬೋಸ್​ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರ ನೇತಾಜಿಯ ಸಿದ್ಧಾಂತಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ನೇತಾಜಿ ಅವರ ಭವ್ಯ ಪ್ರತಿಮೆ ನಿರ್ಮಾಣದ ಜೊತೆಗೆ ನೇತಾಜಿ ಅವರ ವಿಚಾರಧಾರೆಗಳನ್ನು ಸರ್ಕಾರ ಅಳವಡಿಸಿಕೊಂಡು, ಎಲ್ಲಾ ಧರ್ಮಗಳಿಗೆ ಅನ್ವಯಿಸುವಂತಹ ಆಡಳಿತವನ್ನು ನೀಡಿದರೆ ಅದೇ ನೇತಾಜಿ ಅವರಿಗೆ ನಾವು ನೀಡುವ ದೊಡ್ಡ ಗೌರವ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ನೇತಾಜಿ ಪ್ರತಿಮೆ

ಎಲ್ಲಾ ಧರ್ಮಗಳ ಆಡಳಿತ ನೇತಾಜಿ ನಂಬಿಕೆ

ಆಡಳಿತದಲ್ಲಿ ಎಲ್ಲಾ ಧರ್ಮಗಳೂ ಒಳಗೊಂಡಿರಬೇಕು ಎಂಬುದು ನೇತಾಜಿ ಅವರ ನಂಬಿಕೆಯಾಗಿತ್ತು. ಹೀಗಾಗಿ, ಅವರು ಆಜಾದ್​ ಹಿಂದ್​ ಫೌಜ್​, ಆಜಾದ್​ ಹಿಂದ್​ ಆಧಾರದ ಮೇಲೆ ಸರ್ಕಾರ ನಡೆಯಬೇಕು ಎಂದು ಪ್ರತಿಪಾದಿಸಿದ್ದರು ಎಂದರು.

ಅಲ್ಲದೇ, ದೇಶದಲ್ಲಿ ಪ್ರಸ್ತುತ ಕಂಟಕವಾಗಿರುವ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಕೋಮು ರಾಜಕಾರಣವನ್ನು ತೊಡೆದು ಹಾಕಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಎಲ್ಲರೂ ಮೊದಲು ಭಾರತೀಯರು ಎಂಬುದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಚಂದ್ರಕುಮಾರ್​ ಬೋಸ್​, ದೇಶದ ಯುವ ಜನತೆ ಈ ದಿಸೆಯಲ್ಲಿ ನಡೆಯದಿದ್ದರೆ, ಮುಂದೆ ಮತ್ತೊಂದು ವಿಭಜನೆಗೆ ಕಾರಣವಾಗಬೇಕಾಗುತ್ತದೆ. ಹೀಗಾಗಿ, ಪ್ರಧಾನಿ ಎಲ್ಲಾ ಜನಾಂಗದವರನ್ನೂ ಒಳಗೊಂಡ ಆಡಳಿತವನ್ನು ನೀಡಿದಲ್ಲಿ ಅದು ನೇತಾಜಿಗೆ ನೀಡುವ ಅತಿದೊಡ್ಡ ಗೌರವ ಎಂದು ಅಭಿಪ್ರಾಯಪಟ್ಟರು.

ನೇತಾಜಿ ಇದ್ದಿದ್ದರೆ ಭಾರತ ವಿಭಜನೆ ಆಗ್ತಿರಲಿಲ್ಲ

ನೇತಾಜಿ ಅವರು ಪ್ರತಿಪಾದಿಸಿದ ಸರ್ವಧರ್ಮಗಳ ಒಳಗೊಳ್ಳುವಿಕೆಯ ಆಡಳಿತದ ಸಾಕಾರಕ್ಕೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ನೇತಾಜಿ ಅವರು 1947ರಲ್ಲಿ ಭಾರತಕ್ಕೆ ಹಿಂದಿರುಗಿದ್ದರೆ ರಾಷ್ಟ್ರ ಮತ್ತು ಬಂಗಾಳ ವಿಭಜನೆ ನಡೆಯುತ್ತಿರಲಿಲ್ಲ. ಹೀಗಾಗಿ, ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದೊಂದೇ ನಮಗಿರುವ ಹಾದಿ ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಶಾ ನವಾಜ್​ ಖಾನ್​ ನೇತಾಜಿ ಅವರು ಕಟ್ಟಿದ್ದ ಆಜಾದ್​ ಹಿಂದ್​ ಫೌಜ್‌ನ ಕಮಾಂಡರ್​ ಆಗಿದ್ದರು. ನೇತಾಜಿ ಅವರು ಜರ್ಮನಿಯಿಂದ ತಪ್ಪಿಸಿಕೊಂಡು ಜಪಾನ್​ ತಲುಪುವಾಗ ಜೊತೆಗಿದ್ದದ್ದೂ ಇಸ್ಲಾಂ ಧರ್ಮದ ಅಬಿಬ್​ ಹಸನ್​ ಎಂದು ಸ್ಮರಿಸಿಕೊಂಡಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಚಂದ್ರಕುಮಾರ್​ ಬೋಸ್​

ಬಿಜೆಪಿ ಜೊತೆ ಗುರುತಿಸಿಕೊಂಡಿರುವ ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್​ ಬೋಸ್​ ಅವರು, 2019 ರಲ್ಲಿ ಕೋಲ್ಕತ್ತಾದಿಂದ ಸಂಸತ್ತಿಗೆ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ಇದಕ್ಕೂ ಮೊದಲು 2016 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಭಭಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

Last Updated : Jan 22, 2022, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.