ETV Bharat / bharat

CBSE 10,12ನೇ ತರಗತಿಗೆ ಏಪ್ರಿಲ್​​ 26ರಿಂದ 2ನೇ ಅವಧಿ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ - ಸಿಬಿಎಸ್​​ಇ ಎರಡನೇ ಅವಧಿ ಪರೀಕ್ಷೆ

ಸೆಂಟ್ರಲ್ ಬೋರ್ಡ್​ ಆಫ್​ ಸೆಕೆಂಡರಿ​ ಎಜುಕೇಷನ್​ನ 10 ಮತ್ತು 12ನೇ ತರಗತಿಗಳ ಟರ್ಮ್​​-II ಪರೀಕ್ಷೆಗಳನ್ನು ನಡೆಸಲು ಇದೀಗ ವೇಳಾಪಟ್ಟಿ ಹೊರಬಿದ್ದಿದೆ.

CBSE Term-II examinations
CBSE Term-II examinations
author img

By

Published : Mar 11, 2022, 5:16 PM IST

ನವದೆಹಲಿ: 2022ರ ಏಪ್ರಿಲ್​​ 26ರಿಂದ 10 ಮತ್ತು 12ನೇ ತರಗತಿಗಳಿಗೆ ಎರಡನೇ ಅವಧಿ (ಟರ್ಮ್​​-II) ಪರೀಕ್ಷೆ ನಡೆಸಲು ಸೆಂಟ್ರಲ್ ಬೋರ್ಡ್​ ಆಫ್​ ಸೆಕೆಂಡರ್​ ಬೋರ್ಡ್​ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿದೆ.

ಈ ಸಲದ ಪರೀಕ್ಷೆ ಬೆಳಗ್ಗೆ 10:30ಕ್ಕೆ ನಡೆಯಲಿದ್ದು, ಅದಕ್ಕಾಗಿ ಒಂದೇ ಅವಧಿ ನಿಗದಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಎಸ್​​ಸಿ ಅಧಿಕೃತ ವೆಬ್​ಸೈಟ್​​ನಲ್ಲಿ(cbseresults.nic.in) ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ.

10ನೇ ತರಗತಿ ಪರೀಕ್ಷೆಗಳು ಏಪ್ರಿಲ್​​ 26ರಿಂದ ಮೇ 24ರವರೆಗೆ ಹಾಗೂ 12ನೇ ತರಗತಿ ಪರೀಕ್ಷೆಗಳು ಏಪ್ರಿಲ್​​ 26ರಿಂದ ಜೂನ್​ 15ರವರೆಗೆ ನಡೆಯಲಿವೆ ಎಂದು ಬೋರ್ಡ್​​ ತಿಳಿಸಿದೆ. ಯಾವ ದಿನಾಂಕದಂದು ಯಾವ ಪರೀಕ್ಷೆ ನಡೆಯಲಿದೆ ಎಂಬುದರ ದಿನಾಂಕ ಕೂಡ ಪ್ರಕಟಿಸಿದೆ.

ಇದನ್ನೂ ಓದಿ: ಪಕ್ಷ ಗೆಲ್ಲಿಸಿ ಚುನಾವಣೆಯಲ್ಲಿ ಸೋತ ಸಿಎಂ ಧಾಮಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಸಿಬಿಎಸ್​ಇ ಟರ್ಮ್​-Iರ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಈ ಪ್ರಕಟಣೆ ಹೊರಡಿಸಿದೆ. CBSE 10ನೇ ತರಗತಿಯ ಟರ್ಮ್​​-I ಪರೀಕ್ಷೆ ನವೆಂಬರ್ 30 ರಿಂದ ಡಿಸೆಂಬರ್ 11ರವರೆಗೆ ದೇಶದಾದ್ಯಂತ ನಡೆದಿದ್ದವು. ಇದರ ಜೊತೆಗೆ 12ನೇ ತರಗತಿಯ ಟರ್ಮ್​​-I ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22ರವರೆಗೆ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.