ನವದೆಹಲಿ: ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿಯ ಲಿಖಿತ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ವಕೀಲರಾದ ಮಮತಾ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ವಿಚಾರಣೆ ನಡೆಸಿದರು.
ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸಿಬಿಎಸ್ಇ ಪರವಾಗಿ ವಾದಮಂಡನೆ ಮಾಡಿದ್ದರು. ಸಿಬಿಎಸ್ಇ 12ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಮಾನದಂಡಗಳ ಬಗ್ಗೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದು, ಅವುಗಳು ಇಂತಿವೆ.
ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಮಾನದಂಡಗಳು..
- ವಿದ್ಯಾರ್ಥಿಗಳ 10ನೇ ತರಗತಿಯ ಫಲಿತಾಂಶದ ಶೇಕಡಾ 30ರಷ್ಟು ಅಂಕ
- ವಿದ್ಯಾರ್ಥಿಗಳ 11ನೇ ತರಗತಿಯ ಫಲಿತಾಂಶದ ಶೇಕಡಾ 30ರಷ್ಟು ಅಂಕ
- 12ನೇ ತರಗತಿಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ನಡೆದ ಯುನಿಟ್, ಟರ್ಮ್, ಪ್ರಾಯೋಗಿಕ ಟೆಸ್ಟ್ಗಳ ಫಲಿತಾಂಶದ ಶೇಕಡಾ 40ರಷ್ಟು ಅಂಕ.
ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಮಾಡಿ ಜುಲೈ 31ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Microsoft: ಸಿಇಒ ಸ್ಥಾನದಿಂದ ಮೈಕ್ರೋಸಾಫ್ಟ್ ಅಧ್ಯಕ್ಷಗಿರಿಗೇರಿದ ಸತ್ಯ ನಾದೆಲ್ಲಾ
ಇದೇ ವೇಳೆ ರಾಜ್ಯಗಳ ಶಿಕ್ಷಣ ಇಲಾಖೆಯ 12ನೇ ತರಗತಿ, ಹೈಯರ್ ಸೆಕೆಂಡರಿ ಸ್ಕೂಲ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್)ಗಳ ಪರೀಕ್ಷೆಗಳನ್ನು ರದ್ದು ಮಾಡುವಂತೆ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಅನುಭಾ ಶ್ರೀವತ್ಸ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.