ETV Bharat / bharat

ವಂಚನೆ ಪ್ರಕರಣ: ₹171.74 ಕೋಟಿ ದಂಡ ವಿಧಿಸಿದ ಸಿಬಿಐ ಕೋರ್ಟ್ - ದಂಡ ವಿಧಿಸಿದ ಸಿಬಿಐ ಕೋರ್ಟ್

ವಂಚನೆ ಪ್ರಕರಣವೊಂದರಲ್ಲಿ ತಮಿಳುನಾಡಿನ ಕೊಯಮತ್ತೂರಿನ ವಿಶೇಷ ಸಿಬಿಐ ನ್ಯಾಯಾಲಯ ಕೆ.ಮೋಹನರಾಜ್ ಮತ್ತು ಕಮಲವಲ್ಲಿ ಎಂಬುವವರಿಗೆ 27 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 42.76 ಕೋಟಿ ರೂ.ದಂಡ ವಿಧಿಸಿದೆ.

CBI court
ಕೊಯಮತ್ತೂರಿನ ವಿಶೇಷ ಸಿಬಿಐ ನ್ಯಾಯಾಲಯ
author img

By

Published : Aug 27, 2022, 7:09 AM IST

ನವದೆಹಲಿ: ಅಪರೂಪದ ಮತ್ತು ಕಠಿಣ ಶಿಕ್ಷೆಯಲ್ಲಿ, ತಮಿಳುನಾಡಿನ ಕೊಯಮತ್ತೂರಿನ ವಿಶೇಷ ಸಿಬಿಐ ನ್ಯಾಯಾಲಯ ಕೆ.ಮೋಹನರಾಜ್ ಮತ್ತು ಕಮಲವಲ್ಲಿ ಎಂಬುವವರಿಗೆ 27 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 42.76 ಕೋಟಿ ರೂ.ದಂಡವನ್ನು ವಿಧಿಸಿದೆ. ಪೊಂಜಿ ಯೋಜನೆಗಳ ಮೂಲಕ ಸಾರ್ವಜನಿಕ ಠೇವಣಿದಾರರಿಗೆ 870.10 ಕೋಟಿ ರೂ.ಗೆ ವಂಚಿಸಿದ್ದಾರೆ ಎನ್ನಲಾಗಿದೆ.

ಮೂರು ಖಾಸಗಿ ಸಂಸ್ಥೆಗಳಾದ Paazee Forex Trading India Pvt Ltd, Paazee Trading Inc ಮತ್ತು Paazee Marketing Co ಮೇಲೆ ತಲಾ 28.74 ಕೋಟಿ ದಂಡವನ್ನು ನ್ಯಾಯಾಲಯ ವಿಧಿಸಿದೆ. ಒಟ್ಟು ದಂಡದ ಮೊತ್ತ 171.74 ಕೋಟಿ ರೂ.

ಆರೋಪಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಜೂ.15 ರಂದು ಪ್ರಕರಣ ದಾಖಲಿಸಿತ್ತು. ತಿರುಪ್ಪೂರ್‌ನ ಪಾಝೀ ಮಾರ್ಕೆಟಿಂಗ್ ಕಂ, ಮೋಹನ್‌ರಾಜ್, ನಿರ್ದೇಶಕರು ಮತ್ತು ಇತರ ಖಾಸಗಿ ಕಂಪನಿಗಳು ಸೇರಿದಂತೆ ಇತರರು ಜುಲೈ 2008 ರಿಂದ ಸೆಪ್ಟೆಂಬರ್ 2009 ರ ನಡುವೆ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ ಮತ್ತು ವಿವಿಧ ಠೇವಣಿದಾರರಿಂದ ಠೇವಣಿ ಸಂಗ್ರಹಿಸುವ ಮೂಲಕ 870.10 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

www.paazeemarketing.com ವೆಬ್‌ಸೈಟ್ ಮೂಲಕ ಕಂಪನಿಗಳ ನಿರ್ದೇಶಕರು ಸೇರಿದಂತೆ ಆರೋಪಿಗಳು ಠೇವಣಿ ಮತ್ತು ಹೂಡಿಕೆಗಳನ್ನು ವಂಚನೆಯಿಂದ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕರಿಂದ ಪಡೆದ ಹಣವನ್ನು ಫಾರೆಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ ಬಳಸಲಾಗುವುದು ಎಂದು ಹೇಳಿದ್ದರು. ಹೀಗೆ ಸಂಗ್ರಹಿಸಿದ ಠೇವಣಿಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಭಾರಿ ಬಡ್ಡಿ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದರು.

ಆರೋಪಿಗಳು Paazee Forex Trading India Pvt.Ltd, Paazee Trading Inc. and Paazee Marketing Co ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ತನಿಖೆಯ ನಂತರ, ಆರೋಪಿಗಳ ವಿರುದ್ಧ ಅಕ್ಟೋಬರ್ 7, 2011 ರಂದು ಆರೋಪಪಟ್ಟಿ ಸಲ್ಲಿಸಲಾಯಿತು. ಸಿಬಿಐ ತನ್ನ ಪ್ರಕರಣವನ್ನು ಯಶಸ್ವಿಯಾಗಿ ಸಾಬೀತುಪಡಿಸಿದೆ ಮತ್ತು ಎಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಮಾನಿಸಿದೆ.

ಇದನ್ನೂ ಓದಿ: ಹೀಗೊಂದು ಹಗರಣ...1500 ಜನರಿರುವ ಗ್ರಾಮದಲ್ಲಿ 1470 ಮದುವೆ ಪ್ರಮಾಣಪತ್ರ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.