ETV Bharat / bharat

ಮಾಜಿ ಸಚಿವ ಸಾವಿನ ವಿಚಾರ ಜಗನ್‌ಗೆ ಮೊದಲೇ ಗೊತ್ತಿತ್ತು: ಹೈಕೋರ್ಟ್​ಗೆ ಸಿಬಿಐ ವರದಿ

ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ ಸಂಬಂಧ ಅವಿನಾಶ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ತೆಲಂಗಾಣ ಹೈಕೋರ್ಟ್ ಇಂದು ತೀರ್ಪು ನೀಡುವ ಸಾಧ್ಯತೆಯಿದೆ.

YS Viveka murder case  CBI counter petition in YS Viveka murder case  CBI counter petition  ಮಾಜಿ ಸಚಿವ ಸಾವಿನ ವಿಚಾರ ಜಗನ್‌ಗೆ ಮೊದಲೇ ಗೊತ್ತಿತ್ತು  ಅವಿನಾಶ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿ  ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ತೆಲಂಗಾಣ ಹೈಕೋರ್ಟ್  ತೆಲಂಗಾಣ ಹೈಕೋರ್ಟ್ ಇಂದು ತೀರ್ಪು ನೀಡುವ ಸಾಧ್ಯತೆ  ತನಿಖೆಗೆ ಸಹಕರಿಸದ ಸಂಸದ  ಬಂಧನಕ್ಕೆ ಮುಂದಾದ ಸಿಬಿಐ  ಸಂಸದ ಅವಿನಾಶ್ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ  ಸಿಬಿಐ ಕೌಂಟರ್ ಅರ್ಜಿ
ಮಾಜಿ ಸಚಿವ ಸಾವಿನ ವಿಚಾರ ಜಗನ್‌ಗೆ ಮೊದಲೇ ಗೊತ್ತಿತ್ತು
author img

By

Published : May 27, 2023, 8:04 AM IST

ಹೈದರಾಬಾದ್​​, ತೆಲಂಗಾಣ: ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆಯ ಬಗ್ಗೆ ಆಪ್ತ ಸಹಾಯಕ ಎಂವಿ ಕೃಷ್ಣಾ ರೆಡ್ಡಿ ಅವರು ಅಂದು ಬೆಳಗ್ಗೆ 6.15ಕ್ಕೆ ಜಗತ್ತಿಗೆ ಬಹಿರಂಗಪಡಿಸುವ ಮುನ್ನವೇ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನ್ ರೆಡ್ಡಿ ಅವರಿಗೆ ಹತ್ಯೆಯ ಮಾಹಿತಿ ಸಿಕ್ಕಿತ್ತು ಎಂದು ತೆಲಂಗಾಣ ಹೈಕೋರ್ಟ್‌ಗೆ ಸಿಬಿಐ ತಿಳಿಸಿದೆ.

ವಿವೇಕ್ ಕೊಲೆ ನಡೆದ ದಿನ ಸಂಸದ ಅವಿನಾಶ್ ರೆಡ್ಡಿ ಅವರು ನಸುಕಿನ ಜಾವ 4.11ಕ್ಕೆ ವಾಟ್ಸ್​ಆ್ಯಪ್​ನಲ್ಲಿ ಆ್ಯಕ್ಟಿವ್ ಆಗಿದ್ದರು ಎಂಬುದು ಅವರ ಫೋನ್ ಪರಿಶೀಲನೆ ವೇಳೆ ಗೊತ್ತಾಗಿದೆ. ಆದ್ದರಿಂದ ವಿವೇಕ್ ಹತ್ಯೆ ಕುರಿತು ವೈಎಸ್ ಜಗನ್​ಗೆ ಮಾಹಿತಿ ನೀಡುವಲ್ಲಿ ಅವಿನಾಶ್ ರೆಡ್ಡಿ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಹೈಕೋರ್ಟ್​ಗೆ ಸಿಬಿಐ ವರದಿ ಸಲ್ಲಿಸಿದೆ. ವಿವೇಕ್ ಹತ್ಯೆ ಬಳಿಕ ಮಧ್ಯರಾತ್ರಿ 1.58ಕ್ಕೆ ಅವಿನಾಶ್ ರೆಡ್ಡಿ ಮನೆಗೆ ಎರಡನೇ ಆರೋಪಿ ವೈ.ಸುನೀಲ್ ಯಾದವ್ ಹಾಜರಾಗಿದ್ದು, ಅವಿನಾಶ್ ವಾಟ್ಸಾಪ್ ವಾಯ್ಸ್ ಕಾಲ್ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿರುವ ಸಂಸದರನ್ನು ವಿಚಾರಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸಿಬಿಐ ಹೇಳಿದೆ. ವಿವೇಕ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಂಸದ ಅವಿನಾಶ್ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿರುದ್ಧ ಸಿಬಿಐ ಶುಕ್ರವಾರ ತೆಲಂಗಾಣ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಕೌಂಟರ್‌ ಸಲ್ಲಿಸಿತ್ತು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು. ಕಸ್ಟಡಿ ವಿಚಾರಣೆಗೆ ಸಿಬಿಐ ನೀಡಿರುವ ಕಾರಣಗಳು ಸರಿಯಿಲ್ಲ ಎಂದು ಅವಿನಾಶ್ ಪರ ವಕೀಲರು ಆಕ್ಷೇಪಿಸಿದ್ದಾರೆ.

ಅವಿನಾಶ್ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನನ್ನು ನೀಡಬಾರದೆಂದು ಮತ್ತು ತನಿಖೆಯನ್ನು ಚುರುಕುಗೊಳಿಸಲು ಕಸ್ಟಡಿಯಲ್ಲಿ ವಿಚಾರಣೆ ನಡೆಸಬೇಕಾಗಿದೆ ಎಂದು ಕೋರ್ಟ್​ಗೆ ಸಿಬಿಐ ಹೇಳಿದೆ. ಈ ಹಿಂದೆ ತನಿಖೆ ವೇಳೆ ನುಣುಚಿಕೊಳ್ಳುವ ಉತ್ತರ ನೀಡಿ ತನಿಖೆಗೆ ಸಹಕರಿಸುತ್ತಿರಲಿಲ್ಲ. ಆದ್ದರಿಂದ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಅಗತ್ಯ ಎಂದು ಈ ಹಿಂದೆಯೇ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು ಎಂದು ಕೋರ್ಟ್​ ಗಮನಕ್ಕೆ ಸಿಬಿಐ ತಂದಿದೆ.

ಐಪಿಡಿಆರ್ ಮೂಲಕ ಅವಿನಾಶ್ ರೆಡ್ಡಿ ಮೊಬೈಲ್ ಪರಿಶೀಲನೆ ನಡೆಸಿದಾಗ, ವಿವೇಕಾನಂದ ರೆಡ್ಡಿ ಹತ್ಯೆಗೂ ಮುನ್ನ 2019ರ ಮಾರ್ಚ್ 15ರ ಮಧ್ಯರಾತ್ರಿ 12.27ರಿಂದ 1.10ರವರೆಗೆ ವಾಟ್ಸಾಪ್‌ನಲ್ಲಿ ಆ್ಯಕ್ಟಿವ್ ಆಗಿ ವಾಟ್ಸಾಪ್ ಕರೆಗಳನ್ನೂ ಮಾಡಿದ್ದರು ಎನ್ನಲಾಗಿದೆ. ವಿವೇಕಾನಂದ ರೆಡ್ಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ಅಂದು ರಾತ್ರಿ 1.30ರ ಸುಮಾರಿಗೆ ವಿವೇಕ ಅವರ ಮನೆಗೆ ನುಗ್ಗಿದ್ದರು ಎನ್ನಲಾಗಿದೆ. ಮೇಲಾಗಿ, ವಿವೇಕಾ ಹತ್ಯೆಯ ನಂತರ, ಎರಡನೇ ಆರೋಪಿ ವೈ.ಸುನೀಲ್ ಯಾದವ್, ಅಂದು ರಾತ್ರಿ 1.58ಕ್ಕೆ ವೈ.ಎಸ್.ಅವಿನಾಶ್ ರೆಡ್ಡಿ/ಭಾಸ್ಕರ ರೆಡ್ಡಿ ಅವರ ಮನೆಯಲ್ಲಿದ್ದರು ಎಂದು ಮೊಬೈಲ್ ಫೋನ್ ಲೊಕೇಶನ್​ನಿಂದ ಗೊತ್ತಾಗಿದೆ. ಮಾರ್ಚ್ 15ರ ಬೆಳಗ್ಗೆ 4.11ಕ್ಕೆ ಅವಿನಾಶ್ ರೆಡ್ಡಿ ವಾಟ್ಸಾಪ್ ಸಂಭಾಷಣೆ ನಡೆಸಿರುವುದು ಐಪಿಡಿಆರ್ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ವಿವರಿಸಿದೆ.

ತನಿಖೆಗೆ ಸಹಕರಿಸದ ಸಂಸದ: ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿಯಲ್ಲಿ ಅವಿನಾಶ್‌ ರೆಡ್ಡಿ ಅವರಿಗೆ ಈ ತಿಂಗಳ 16ರಂದು ಬೆಳಗ್ಗೆ 11 ಗಂಟೆಗೆ ತನಿಖೆಗೆ ಹಾಜರಾಗುವಂತೆ ಮೇ 15ರಂದು ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ, ಪೂರ್ವ ನಿಯೋಜಿತ ಕಾರ್ಯಕ್ರಮಗಳಿ ಕಾರಣದಿಂದ ಹಾಜರಾಗಿರಲಿಲ್ಲ. ಇದರಿಂದ 19ರಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಿಲ್ಲ. ತಾಯಿಯ ಆರೋಗ್ಯ ಸರಿಯಿಲ್ಲ, ತಾಯಿಯ ಆರೋಗ್ಯದಲ್ಲಿ ಚೇತರಿಕೆ ಬಳಿಕ ತನಿಖೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೂ ಆಗಿರಲಿಲ್ಲ. ಬಳಿಕ 22ರಂದು ಸಿಬಿಐ ಮುಂದೆ ಹಾಜರಾಗುವಂತೆ 19ರಂದು ಮತ್ತೊಂದು ನೋಟಿಸ್ ನೀಡಲು ಹೈದರಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ಹೋದಾಗ ಅವರ ಮನೆ ಬೀಗ ಹಾಕಿತ್ತು. ಪುಲಿವೆಂದುದಲ್ಲಿ ಅವರು ಲಭ್ಯವಿಲ್ಲದ ಕಾರಣ ಅಲ್ಲಿದ್ದ ಆಪ್ತ ಸಹಾಯಕನಿಗೆ ನೋಟಿಸ್ ನೀಡಿದ್ದೇವೆ ಎಂದು ಸಿಬಿಐ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದೆ. ಇದಲ್ಲದೆ, ಇಮೇಲ್ ಮತ್ತು ವಾಟ್ಸಾಪ್ ಮೂಲಕವೂ ನೋಟಿಸ್ ಕಳುಹಿಸಲಾಗಿದೆ. ಸಿಬಿಐ ಪ್ರಕಾರ, ಈ ನೋಟಿಸ್ ಹಿನ್ನೆಲೆಯಲ್ಲಿ ಕರ್ನೂಲ್​ನ ವಿಶ್ವಭಾರತಿ ಆಸ್ಪತ್ರೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಳ್ಳಬೇಕಾಗಿತ್ತು ಮತ್ತು ಆದ್ದರಿಂದ ಹಾಜರಾತಿಯನ್ನು 7 ದಿನಗಳವರೆಗೆ ಮುಂದೂಡಬೇಕು ಎಂದು ಅವರು ತಿಳಿಸಿದ್ದರು.

ಬಂಧನಕ್ಕೆ ಮುಂದಾದ ಸಿಬಿಐ: ಅವಿನಾಶ್ ರೆಡ್ಡಿಯನ್ನು ಬಂಧಿಸಲು ಇದೇ ತಿಂಗಳ 22ರಂದು ಸಿಬಿಐ ತಂಡ ಕರ್ನೂಲ್‌ನ ವಿಶ್ವಭಾರತಿ ಆಸ್ಪತ್ರೆಗೆ ತೆರಳಿತ್ತು, ಆದರೆ ಅವಿನಾಶ್ ಅವರ ಬೆಂಬಲಿಗರು ಅಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿದರು ಎಂದು ಸಿಬಿಐ ವಿವರಿಸಿದೆ. ಅವಿನಾಶ್ ರೆಡ್ಡಿ ಶಾಂತಿ ಮತ್ತು ಭದ್ರತೆಗೆ ಭಂಗ ತರುವ ಆತಂಕದಲ್ಲಿದ್ದು, ಅವರನ್ನು ಬಂಧಿಸಲು ಕರ್ನೂಲ್ ಎಸ್ಪಿ ನೆರವು ಕೋರಿದ್ದೆವು. 22ರಂದು ಕೂಡ ವಿಚಾರಣೆಗೆ ಹಾಜರಾಗಿಲ್ಲ. ಜೂನ್​ 30ರೊಳಗೆ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ ಅವಿನಾಶ್‌ ರೆಡ್ಡಿ ಉದ್ದೇಶಪೂರ್ವಕವಾಗಿ ಅಡೆತಡೆಗಳನ್ನು ಸೃಷ್ಟಿಸಿ ತನಿಖೆಯನ್ನು ಮುಂದೂಡುತ್ತಿದ್ದಾರೆ. ಈ ಕಾರಣಗಳಿಂದಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಕೋರಲಾಗಿದೆ. ಜಾಮೀನು ಅರ್ಜಿ ವಜಾಗೊಂಡರೆ ಜೂನ್ 30 ರೊಳಗೆ ತನಿಖೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಸಿಬಿಐ ಹೈಕೋರ್ಟ್​ಗೆ ಹೇಳಿದೆ.

ಸಂಸದ ಅವಿನಾಶ್ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ: ವಿವೇಕ ಹತ್ಯೆ ಪ್ರಕರಣದಲ್ಲಿ ವೈಸಿಪಿ ಸಂಸದ ಅವಿನಾಶ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ತೆಲಂಗಾಣ ಹೈಕೋರ್ಟ್‌ನಲ್ಲಿ ಸುದೀರ್ಘ ವಾದಗಳು ನಡೆದವು. ವಿಚಾರಣೆ ಆರಂಭವಾದಾಗ ಅವಿನಾಶ್ ಪರ ವಕೀಲ ಉಮಾಮಹೇಶ್ವರ ರಾವ್ ವಾದ ಮಂಡಿಸಿದರು.

ಸಿಬಿಐ ಕೌಂಟರ್ ಅರ್ಜಿ..: ವಿವೇಕಾ ಹತ್ಯೆಯ ನಿಗೂಢದಲ್ಲಿ ಸಿಬಿಐ ಮತ್ತೊಂದು ಸಂಚಲನ ಮೂಡಿಸಿದೆ. ಜಗನ್​ಗೆ ಕೊಲೆಯ ಬಗ್ಗೆ ಹೊರಜಗತ್ತಿಗೂ ಮೊದಲೇ ಗೊತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಅವಿನಾಶ್ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸಿಬಿಐ ತೆಲಂಗಾಣ ಹೈಕೋರ್ಟ್‌ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದೆ. ಕೃಷ್ಣಾ ರೆಡ್ಡಿ ಹತ್ಯೆಯನ್ನು ಬಹಿರಂಗಪಡಿಸುವ ಮುನ್ನವೇ ಜಗನ್‌ಗೆ ಈ ಬಗ್ಗೆ ತಿಳಿದಿತ್ತು ಎಂದು ವಿವೇಕ ಪಿಎ ಸ್ಪಷ್ಟಪಡಿಸಿದ್ದಾರೆ. ಅವಿನಾಶ್ ರೆಡ್ಡಿ ಜಗನ್​ಗೆ ಹೇಳಿದ್ದಾರಾ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಅಫಿಡವಿಟ್​ನಲ್ಲಿ ತಿಳಿಸಲಾಗಿದೆ.

ಓದಿ: ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಕೇಸ್: ಕಡಪ ಸಂಸದ ಅವಿನಾಶ್, ತಂದೆ ಭಾಸ್ಕರ್​ ರೆಡ್ಡಿ ಸೇರಿ ಮೂವರಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆ

ಪ್ರಕರಣದ ಹಿನ್ನೆಲೆ: 2019ರ ಮಾರ್ಚ್ 15ರಂದು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಕೊಲೆ ನಡೆದಿತ್ತು. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್​​ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರು. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಕೂಡ ವೈಎಸ್ ರಾಜಶೇಖರ್​ ರೆಡ್ಡಿ ಅವರ ಸಹೋದರರಾಗಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ತಮ್ಮ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಕೊಲೆಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವನ್ನು ಸಿಬಿಐ ವ್ಯಕ್ತಪಡಿಸಿದೆ.

ಇದರ ಭಾಗವಾಗಿ ಭಾಸ್ಕರ್ ​ರೆಡ್ಡಿ ಅವರನ್ನು ಏಪ್ರಿಲ್​ 16ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್​ 18ರಂದು ಭಾಸ್ಕರ್​ ರೆಡ್ಡಿ ಹಾಗೂ ಮತ್ತೋರ್ವ ಆರೋಪಿ ಉದಯಕುಮಾರ್ ರೆಡ್ಡಿ ಅವರನ್ನು ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮತ್ತೊಂದೆಡೆ, ಭಾಸ್ಕರ್ ರೆಡ್ಡಿ ಪುತ್ರರಾದ ಕಡಪ ಸಂಸದ ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್​ 25ರವರೆಗೆ ಬಂಧಿಸುವಂತಿಲ್ಲ. ಆದರೆ, ಸಿಬಿಐ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.