ETV Bharat / bharat

Video - ನೋಡ ನೋಡುತ್ತಿದ್ದಂತೆ ಚಾಲಕನ ಸಮೇತ ಕೊಚ್ಚಿ ಹೋಯ್ತು ಕಾರು..! - ಮಹಾರಾಷ್ಟ್ರ ಮಳೆ

ನೀರಿನ ರಭಸಕ್ಕೆ ಕಾರು ಚಾಲಕನ ಸಮೇತ ಕೊಚ್ಚಿ ಹೋಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ನಡೆದಿದೆ.

Car Washed out in Palghar
ಕೊಚ್ಚಿ ಹೋದ ಕಾರು
author img

By

Published : Jul 14, 2021, 7:28 AM IST

ಪಾಲ್ಘರ್ (ಮಹಾರಾಷ್ಟ್ರ) : ದೇಶಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಭಾರಿ ಅವಘಡಗಳು ಸಂಭವಿಸಿವೆ. ಪಾಲ್ಘರ್​ ಜಿಲ್ಲೆಯ ರೈಲ್ವೆ ನಿಲ್ದಾಣದ ಸಮೀಪ ಸಂಚರಿಸುತ್ತಿದ್ದ ಕಾರೊಂದು ಚಾಲಕ ಸಹಿತ ಹೊಳೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಕಾರು ಹೊಳೆ ಮೂಲಕ ಸಂಚರಿಸುತ್ತಿತ್ತು. ಈ ವೇಳೆ ಏಕಾಏಕಿ ನೀರು ಹರಿದು ಬಂದಿದೆ. ನೀರಿನ ರಭಸಕ್ಕೆ ಕಾರು ಚಾಲಕನ ಸಮೇತ ಕೊಚ್ಚಿ ಹೋಗಿದೆ. ಈ ವೇಳೆ ತಕ್ಷಣ ಕಾರಿಗೆ ಹಗ್ಗ ಕಟ್ಟಿದ ಸ್ಥಳೀಯರು ನೀರಿನಿಂದ ಮೇಲಕ್ಕೆಳೆದಿದ್ದಾರೆ.

ಕೊಚ್ಚಿ ಹೋದ ಕಾರು

ಓದಿ : ಕಾರಿನ ಬಾನೆಟ್​ ಮೇಲೆ ಕುಳಿತು ಫೋಟೋ ಶೂಟ್​​... ವಧುವಿನ ವಿರುದ್ಧ ದಾಖಲಾಯ್ತು FIR

ಈ ಪ್ರದೇಶದಲ್ಲಿ ಹಳೆಯ ಸೇತುವೆಯೊಂದಿದ್ದು, ಅದು ಶಿಥಿಲಗೊಂಡ ಕಾರಣ ಸಮೀಪದಲ್ಲೇ ಮತ್ತೊಂದು ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ, ಅದು ಇನ್ನೂ ಪೂರ್ಣಗೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.