ETV Bharat / bharat

ಆಸ್ಟ್ರೇಲಿಯಾ ಕಡಲ ತೀರದಲ್ಲಿ ಭಾರಿ ಕುತೂಹಲ ಕೆರಳಿಸಿದ ಬೃಹತ್‌ ಗಾತ್ರದ ವಸ್ತು: ಇದು ಭಾರತದ ರಾಕೆಟ್‌ನ ಭಾಗವೇ? ISRO ಹೇಳಿದ್ದೇನು? - ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮುದ್ರ ತೀರ

ಆಸ್ಟ್ರೇಲಿಯಾದ ಕಡಲ ತೀರದಲ್ಲಿ ಇತ್ತೀಚೆಗೆ ಬೃಹತ್​ ಗಾತ್ರದ ವಸ್ತುವೊಂದು ಪತ್ತೆಯಾಗಿದೆ. ಈ ವಸ್ತುವು ಇಸ್ರೋದ ರಾಕೆಟ್​ನ ಭಾಗವೇ? ಎಂಬ ಚರ್ಚೆ ನಡೆಯುತ್ತಿದೆ.

cant-confirm-or-deny-whether-object-on-australian-shores-is-part-of-pslv-isro
ಆಸ್ಟ್ರೇಲಿಯಾ ಕಡಲ ತೀರದಲ್ಲಿ ಬೃಹತ್​ ವಸ್ತು ಪತ್ತೆ : ಪಿಎಸ್​ಎಲ್​ವಿ ರಾಕೆಟ್​ನ ಭಾಗವೇ ಎಂದು ಪರಿಶೀಲಿಸದೇ ತಿಳಿಸಲು ಸಾಧ್ಯವಿಲ್ಲ ಎಂದ ಇಸ್ರೋ
author img

By

Published : Jul 19, 2023, 9:26 AM IST

ಚೆನ್ನೈ (ತಮಿಳುನಾಡು) : ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹತ್​ ಗಾತ್ರದ ಸಿಲಿಂಡರ್​ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಇದು ಪೋಲಾರ್ ಸ್ಯಾಟ್​​ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಭಾಗವೇ ಎಂಬುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋದ ಹಿರಿಯ ವಿಜ್ಞಾನಿಯೋರ್ವರು, “ನಾವು ಈ ಬೃಹತ್​ ವಸ್ತುವನ್ನು ಖುದ್ದಾಗಿ ನೋಡದೆ ಅಥವಾ ಪರಿಶೀಲನೆ ಮಾಡದೇ ಇದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ" ಎಂದರು. "ಮೊದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ವಸ್ತುವಿನ ವಿಡಿಯೋವನ್ನು ನಮಗೆ ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತುಗಳಿವೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ಇದಕ್ಕೂ ಮೊದಲು ಈ ವಸ್ತುವನ್ನು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಬೇರೆಡೆಗೆ ಸ್ಥಳಾಂತರಿಸಬೇಕು. ಇನ್ನೂ ಅಗತ್ಯವಿದ್ದರೆ, ಅದು ಭಾರತೀಯ ರಾಕೆಟ್‌ಗೆ ಸಂಬಂಧಿಸಿದ ವಸ್ತುವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಬಹುದು" ಎಂದು ಅವರು ಹೇಳಿದರು.

ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ಬೃಹತ್​ ಲೋಹೀಯ ವಸ್ತುವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ದೂರ ಇರುವಂತೆ ಅಲ್ಲಿನ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಈ ವಸ್ತುವು ಬಹಳ ಹಿಂದಿನ ಭಾರತದ ಪಿಎಸ್​ಎಲ್​ವಿ ರಾಕೆಟ್​​ನ ಭಾಗವೇ ಎಂಬ ಬಗ್ಗೆ​ ಬಾಹ್ಯಾಕಾಶ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬಾಹ್ಯಾಕಾಶ ವಿಜ್ಞಾನಿಗಳು ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಟ್ವೀಟ್​ ಮಾಡಿರುವ ಆಸ್ಟ್ರೇಲಿಯನ್​ ಸ್ಪೇಸ್​ ಏಜೆನ್ಸಿ, "ನಾವು ಸದ್ಯ ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಭಾರಿ ಗಾತ್ರದ ಲೋಹೀಯ ವಸ್ತುವಿನ ಬಗ್ಗೆ ವಿವಿಧೆಡೆ ವಿಚಾರಣೆ ನಡೆಸುತ್ತಿದ್ದೇವೆ. ಈ ವಸ್ತುವು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿವಿಧ ಜಾಗತಿಕ ಸಂಸ್ಥೆಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ" ಎಂದು ಹೇಳಿದೆ.

ವಸ್ತುವಿನ ಮೂಲ ತಿಳಿದಿಲ್ಲವಾದ್ದರಿಂದ, ಸಾರ್ವಜನಿಕರ ಇದರ ಬಳಿ ತೆರಳುವುದಾಗಲಿ ಅಥವಾ ಅದನ್ನು ಸರಿಸಲು ಪ್ರಯತ್ನಿಸುವುದಾಗಲಿ ಮಾಡಬಾರದು. ಬೇರೆಡೆ ಇಂತಹ ಯಾವುದೇ ಅವಶೇಷಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜೊತೆಗೆ space.monitoring@space.gov.au ಮೂಲಕ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಲೋಹದಂತಹ ವಸ್ತುವನ್ನು ಹತ್ತಿರದಿಂದ ನೋಡಿದಾಗ ಇದರ ಮೇಲೆ ಸಾಕಷ್ಟು ಪಾಚಿ ಕಟ್ಟಿರುವಂತೆ ಕಾಣುತ್ತದೆ. ಆದ್ದರಿಂದ ಇದು ತುಂಬಾ ಹಳೆಯ ವಸ್ತುವಾಗಿರಬೇಕು ಎಂದು ಅಂದಾಜಿಸಲಾಗಿದೆ. ಅಲ್ಲದೆ ಇದು ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3ನ ಎಲ್‌ವಿಎಂ 3 ಸೇರಿದಂತೆ ಇತ್ತೀಚೆಗೆ ಉಡಾವಣೆಯಾದ ಯಾವುದೇ ರಾಕೆಟ್‌ನ ಭಾಗವಲ್ಲ ಎಂಬುದು ಖಚಿತವಾಗುತ್ತದೆ.

ಇದನ್ನೂ ಓದಿ : ವಿಮಾನದಿಂದ ಐತಿಹಾಸಿಕ ಚಂದ್ರಯಾನ 3 ಉಡಾವಣೆಯ ದೃಶ್ಯ ಸೆರೆಹಿಡಿದ ಪ್ರಯಾಣಿಕ: ವೈರಲ್ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.