ನಬ್ರಂಗ್ಪುರ(ಒಡಿಶಾ): ದೇಶದಲ್ಲಿ ನಡೆಯುವ ಕೆಲವೊಂದು ಅಪರೂಪದ ಘಟನೆಗಳು ನಂಬಲು ಸಾಧ್ಯವಾಗದಿದ್ದರೂ, ಜನರು ಮೂಢನಂಬಿಕೆ ಅಥವಾ ದೇವರ ಮೇಲಿನ ಪ್ರೀತಿಯಿಂದಾಗಿ ನಂಬಲು ಶುರು ಮಾಡುತ್ತಾರೆ. ಸದ್ಯ ಅಂತಹದೊಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.
ನವರಾತ್ರಿಯ ಸಂಭ್ರಮದಲ್ಲಿ ರೈತನೋರ್ವನ ಮನೆಯಲ್ಲಿ ಎರಡು ತಲೆ, ಮೂರು ಕಣ್ಣುಗಳಿರುವ ಕರುವೊಂದು ಜನಿಸಿದೆ. ಹೀಗಾಗಿ ಇದನ್ನ ದುರ್ಗೆಯ ಅವತಾರವೆಂದು ಜನರು ಪೂಜೆ ಮಾಡಲು ಶುರು ಮಾಡಿದ್ದಾರೆ. ಇದೀಗ ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
-
People in the locality of Bijapara village have begun worshipping a two headed calf as #Durga Avatar
— Suffian सूफ़ियान سفیان (@iamsuffian) October 12, 2021 " class="align-text-top noRightClick twitterSection" data="
After it was born with two heads and three eyes on the occasion of #Navratri to a farmer in Odisha's Nabrangpur District. #DurgaPuja @aajtak @IndiaToday pic.twitter.com/tz9i9mpJ0O
">People in the locality of Bijapara village have begun worshipping a two headed calf as #Durga Avatar
— Suffian सूफ़ियान سفیان (@iamsuffian) October 12, 2021
After it was born with two heads and three eyes on the occasion of #Navratri to a farmer in Odisha's Nabrangpur District. #DurgaPuja @aajtak @IndiaToday pic.twitter.com/tz9i9mpJ0OPeople in the locality of Bijapara village have begun worshipping a two headed calf as #Durga Avatar
— Suffian सूफ़ियान سفیان (@iamsuffian) October 12, 2021
After it was born with two heads and three eyes on the occasion of #Navratri to a farmer in Odisha's Nabrangpur District. #DurgaPuja @aajtak @IndiaToday pic.twitter.com/tz9i9mpJ0O
ಇದನ್ನೂ ಓದಿರಿ: ಮನಕಲಕುವ ಘಟನೆ.. ಮರಿ ಸತ್ತಿದ್ರೂ, ಮೂರು ದಿನದಿಂದ ತನ್ನೊಂದಿಗೆ ಇರಿಸಿಕೊಂಡು ರೋಧಿಸುತ್ತಿರುವ ತಾಯಿ!
ಒಡಿಶಾದ ನಬ್ರಂಗ್ಪುರ ಜಿಲ್ಲೆಯ ಕುಮುಲಿ ಪಂಚಾಯತ್ ವ್ಯಾಪ್ತಿಯ ಬಿಜಾಪರಾ ಗ್ರಾಮದ ರೈತ ಧನಿರಾಮ್ ಮನೆಯಲ್ಲಿನ ಹಸು ಈ ರೀತಿಯ ಅಪರೂಪದ ಕರುವಿಗೆ ಜನನ ನೀಡಿದೆ. ಇದರಿಂದ ರೈತ ಕುಟುಂಬ ಹಾಗೂ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.
ಧನಿರಾಮ್ ಕಳೆದ ಎರಡು ವರ್ಷಗಳ ಹಿಂದೆ ಹಸು ಖರೀದಿಸಿದ್ದರು. ಅದು ಇದೀಗ ಕರುವಿಗೆ ಜನ್ಮ ನೀಡಿದೆ. ಆದರೆ ತಾಯಿಯ ಹಾಲು ಕುಡಿಯಲು ತೊಂದರೆ ಅನುಭವಿಸುತ್ತಿರುವ ಕಾರಣ ಹಾಲು ಕರೆದು ನಂತರ ನೀಡಲಾಗುತ್ತಿದೆ ಎಂದಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ವಿಶಿಷ್ಟವಾದ ಕರು ಜನಿಸಿರುವ ಕಾರಣ, ಸ್ಥಳೀಯರು ಇದು ದುರ್ಗಾ ಮಾತೆಯ ಅವತಾರ ಎಂದು ಪೂಜಿಸಲು ಆರಂಭಿಸಿದ್ದಾರೆ.