ETV Bharat / bharat

ಮೊರ್ಬಿ ಸೇತುವೆ ದುರಂತ: ನದಿಗೆ ಜಿಗಿದು ಜನರನ್ನು ರಕ್ಷಿಸಿದ್ದ ಬಿಜೆಪಿ ಅಭ್ಯರ್ಥಿ ಗೆಲುವು - ಮೊರ್ಬಿ ಸೇತುವೆ ದುರಂತ

ತೂಗುಸೇತುವೆ ದುರಂತದಿಂದ ಸುದ್ದಿಯಾಗಿದ್ದ ಗುಜರಾತ್ ರಾಜ್ಯದ ಮೊರ್ಬಿ ಕ್ವೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್​ ಅಮೃತಿಯ ಗೆಲುವು ಸಾಧಿಸಿದ್ದಾರೆ.

By-election result of Morbi assembly of Gujarat
ಮೊರ್ಬಿ ಬಿಜೆಪಿ ಅಭ್ಯರ್ಥಿ ಗೆಲುವು
author img

By

Published : Dec 8, 2022, 9:50 AM IST

Updated : Dec 8, 2022, 1:33 PM IST

ಮೊರ್ಬಿ(ಗುಜರಾತ್): ದೇಶದ ಗಮನ ಸೆಳೆದಿರುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಬಿಜೆಪಿ ಗೆಲುವು: ತೂಗುಸೇತುವೆ ದುರಂತದಿಂದ ಸುದ್ದಿಯಾಗಿದ್ದ ಗುಜರಾತ್ ರಾಜ್ಯದ ಮೊರ್ಬಿ ಕ್ವೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್​ ಅಮೃತಿಯ ಗೆಲುವು ಸಾಧಿಸಿದ್ದಾರೆ.

ತೂಗು ಸೇತುವೆ ದುರಂತ: ಅಕ್ಟೋಬರ್ 29ರಂದು ಮೊರ್ಬಿಯಲ್ಲಿ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಮುರಿದು ಬಿದ್ದು, ನೂರಾರು ಜನರು ನೀರುಪಾಲಾದರು. ಈ ವೇಳೆ 60 ವರ್ಷದ ಕಾಂತಿಲಾಲ್ ಅಮೃತಿಯ ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಜೀವ ಉಳಿಸಲು ಮಾಜಿ ಶಾಸಕ ನದಿಗೆ ಹಾರಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಆ ವೇಳೆ ಅವರು ಹಲವು ಜನರನ್ನು ರಕ್ಷಿಸಿದ್ದರು.

ಸಂತ್ರಸ್ತರಿಗೆ ಸಹಾಯಹಸ್ತ: ಈ ಹಿಂದೆ ತಯಾರಿಸಲಾಗಿದ್ದ ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಕಾಂತಿಲಾಲ್ ಅಮೃತಿಯ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಸೇತುವೆ ದುರಂತದ ವಳೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದವರ ಜೀವ ಉಳಿಲು ತಾವೇ ನದಿಗೆ ಧುಮುಕಿದ ಅವರ ಸಾಹಸದಿಂದಾಗಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಪಘಾತದ ಸಂದರ್ಭದಲ್ಲಿ ತೋರಿದ ಧೈರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಂದಿನ ದುರಂತದಲ್ಲಿ 135 ಮಂದಿ ಸಾವನ್ನಪ್ಪಿದ್ದು, 177 ಮಂದಿಯನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಸೇತುವೆ ನಿರ್ವಹಣಾ ಗುತ್ತಿಗೆಯನ್ನು ಗುಜರಾತ್ ಮೂಲದ ಗಡಿಯಾರ ತಯಾರಕ ಒರೆವಾ ಅವರಿಗೆ ನೀಡಿತ್ತು. ಇದು ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿಯ ಕಾರ್ಯವೀಗ ಚುನಾವಣೆಯಲ್ಲಿ ಫಲಪ್ರದವಾಗುವಂತೆ ತೋರುತ್ತಿದೆ.

ಇದನ್ನೂ ಓದಿ: 6 ವಿಧಾನಸಭಾ 1 ಲೋಕಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಇಂದು.. ಮತ ಎಣಿಕೆ ಪ್ರಾರಂಭ

ಸೇತುವೆ ದುರಂತದಿಂದ ಬಿಜೆಪಿಯು ತೀವ್ರ ಟೀಕೆಗೆ ಒಳಗಾಗಿತ್ತು. ದುರಂತದ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಕಾಣಿಸುತ್ತದೆ ಎಂದು ರಾಜಕೀಯ ಪಂಡಿತರು ಹೇಳಿದ್ದರು. ಆದರೆ ಕಾಂತಿಲಾಲ್ ಅಮೃತಿಯ ಅವರು ಕಾಂಗ್ರೆಸ್‌ನ ಜಯಂತಿಲಾಲ್ ಪಟೇಲ್ ಅವರಿಗಿಂತ 10,000 ಕ್ಕೂ ಹೆಚ್ಚು ಮತಗಳ ಮುನ್ನಡೆಯೊಂದಿಗೆ ಗೆದ್ದಿದ್ದಾರೆ. ಎಎಪಿಯ ಪಂಕಜ್ ಕಾಂತಿಲಾಲ್ ರಸರಿಯಾ 2,577 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

1995, 1998, 2002, 2007 ಮತ್ತು 2012ರಲ್ಲಿ ಮೊರ್ಬಿಯಿಂದ ಕಾಂತಿಲಾಲ್ ಅಮೃತಿಯ ಗೆದ್ದಿದ್ದಾರೆ. ಈ ಬಾರಿಯೂ ಗೆಲುವನ್ನು ಬಿಟ್ಟುಕೊಟ್ಟಿಲ್ಲ.

Last Updated : Dec 8, 2022, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.