ETV Bharat / bharat

ಆಸ್ತಿಗೋಸ್ಕರ ಜಗಳ: ಒಡಹುಟ್ಟಿದ ಅಣ್ಣನಿಂದಲೇ ತಮ್ಮನ ಕೊಲೆ - ಒಡಹುಟ್ಟಿದ ಅಣ್ಣನಿಂದಲೇ ಕೊಲೆಯಾದ ಸಹೋದರ

ಆಸ್ತಿಗೋಸ್ಕರ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಒಡಹುಟ್ಟಿದ ಅಣ್ಣನಿಂದಲೇ ಸಹೋದರನೋರ್ವ ಕೊಲೆಯಾಗಿದ್ದಾನೆ.

Businessman shot dead by own brother
Businessman shot dead by own brother
author img

By

Published : Mar 7, 2022, 10:04 PM IST

ಕೊಟ್ಟಾಯಂ(ಕೇರಳ): ಆಸ್ತಿ ವಿಚಾರವಾಗಿ ನಡೆದ ವಾದ-ವಿವಾದ ಕೊಲೆಯಲ್ಲಿ ಅಂತ್ಯವಾಗಿದ್ದು, ಒಡಹುಟ್ಟಿದ ಅಣ್ಣನನ್ನು ಸ್ವಂತ ಸಹೋದರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕೇರಳದ ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದೆ.

ಜಾರ್ಜ್ ಕುರಿಯನ್ ಎಂಬಾತ ರಂಜು ಕುರಿಯನ್​​(50) ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸುವುದನ್ನು ತಡೆಯಲು ಮುಂದಾಗಿದ್ದ ಸೋದರ ಮಾವ ಮ್ಯಾಥ್ಯೂ ಸ್ಕೇರಿಯಾಗೂ ಗುಂಡು ತಗುಲಿದ್ದು, ಕೊಟ್ಟಾಯಂ ವೈದ್ಯಕೀಯ ಕಾಲೇಜಿ​ಗೆ ದಾಖಲು ಮಾಡಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯುಪಿ ಮತ್ತೆ BJPಗೆ, AAP ಕೈಗೆ ಪಂಜಾಬ್: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ..

ಕೊಚ್ಚಿಯಲ್ಲಿ ರಿಯಲ್ ಎಸ್ಟೇಟ್​ ಉದ್ಯಮಿಯಾಗಿರುವ ಜಾರ್ಜ್​ ಇತ್ತೀಚೆಗೆ ಕುಟುಂಬದ ಆಸ್ತಿ ಮಾರಾಟ ಮಾಡಿದ್ದನು. ಊಟಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ರಂಜು ಆಸ್ತಿ ಮಾರಾಟದ ಬಗ್ಗೆ ತಿಳಿದುಕೊಳ್ಳಲು ಕೇರಳಕ್ಕೆ ಆಗಮಿಸಿದ್ದನು. ಮಾತುಕತೆ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಇದ್ದಕ್ಕಿದ್ದಂತೆ ರಿವಾಲ್ವಾರ್ ಹೊರತೆಗೆದಿರುವ ಜಾರ್ಜ್​​ ಸಹೋದರನಿಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ರಂಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಹಿತಿ ಪಡೆದಕೊಂಡ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದು, ಜಾರ್ಜ್​​ ಎಂಬಾತನ ಬಂಧನ ಮಾಡಿದ್ದಾರೆ. ರಂಜು ಮೃತದೇಹ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.