ಹರಿಯಾಣ: ಗುರುಗ್ರಾಮ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಭದ್ರತಾ ದಳ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿ ಕೊಡಿಸುವುದಾಗಿ ಐವರು ಬಿಲ್ಡರ್‌ಗಳಿಗೆ 125 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಬಿಎಸ್ಎಫ್ ಅಧಿಕಾರಿ ಸೇರಿ ನಾಲ್ವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಬಿಎಸ್‌ಎಫ್ ಉಪ ಕಮಾಂಡೆಂಟ್ ಪ್ರವೀಣ್ ಯಾದವ್ ಹಾಗೂ ಬ್ಯಾಂಕ್ ಮ್ಯಾನೇಜರ್ ಆಗಿರುವ ಅವರ ಸಹೋದರಿ ನ್ಯಾಷನಲ್ ಸೆಕ್ಯೂರಿಟಿ ಗ್ವಾರ್ಡ್ ಕ್ಯಾಂಪಸ್‌ನಲ್ಲಿ ಕಾಮಗಾರಿ ನೀಡುವುದಾಗಿ ಐವರು ಬಿಲ್ಡರ್‌ಗಳಿಗೆ ಸುಮಾರು 125 ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ದೂರು ಬಂದಿತ್ತು ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಕೆಕೆ ರಾವ್ ಮಾಹಿತಿ ನೀಡಿದ್ದಾರೆ.
ಬಿಎಸ್ಎಫ್ ಉಪ ಕಮಾಂಡೆಂಟ್ ಪ್ರವೀಣ್ ಯಾದವ್, ಅವರ ಪತ್ನಿ ಮಮತಾ ಯಾದವ್, ಪ್ರವೀಣ್ ಸಹೋದರಿ ರಿತುರಾಜ್ ಯಾದವ್ ಹಾಗೂ ಸಹವರ್ತಿ ದಿನೇಶ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಬಂಧಿತರಿಂದ 13 ಕೋಟಿ ರೂಪಾಯಿ ನಗದು, ಆರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರವೀಣ್ ಯಾದವ್ ಅವರು ಬುಲ್ಡರ್‌ಗಳ ಬಳಿ ತಾವು ಐಪಿಎಸ್ ಅಧಿಕಾರಿಯಾಗಿದ್ದು, ಗುರುಗ್ರಾಮ್ ಜಿಲ್ಲೆಯ ಮನೇಸರ್‌ನಲ್ಲಿರುವ ಎನ್‌ಎಸ್‌ಜಿ ಪ್ರಧಾನ ಕಚೇರಿಯಲ್ಲಿ ಸೇವೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಕೆಕೆ ರಾವ್ ವಿವರಿಸಿದ್ದಾರೆ.
ಎನ್‌ಎಸ್‌ಜಿ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆ ಕೊಡಿಸುವುದಾಗಿ ಹೇಳಿ ಬಿಎಸ್‌ಎಫ್ ಅಧಿಕಾರಿ ಪ್ರವೀಣ್ ಯಾದವ್ ತಮ್ಮ ಬಳಿ 65 ಕೋಟಿ ರೂಪಾಯಿ ಪಡೆದಿದ್ದಾರೆಂದು ಜನವರಿ 8 ರಂದು ಸ್ಥಳೀಯ ಬಿಲ್ಡರ್ ದೂರು ನೀಡಿದ್ದರು.
ಇದಾದ ಮರುದಿನವೇ ದೇವಿಂದರ್ ಯಾದವ್ ಎಂಬ ಬಿಲ್ಡರ್ ತಮ್ಮ ಬಳಿ 37 ಕೋಟಿ ರೂಪಾಯಿ ಪಡೆದಿದ್ದಾರೆಂದು ದೂರು ನೀಡಿದ್ದರು. ಈ ದೂರುಗಳನ್ನು ಆಧರಿಸಿ ಪ್ರವೀಣ್ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದು ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಸಹಕಾರ..!; ಮಹಾದ್ವಾರದಲ್ಲೇ ಭಕ್ತರ ಪ್ರತಿಭಟನೆ