ಕೊತ್ತಗುಡೆಂ (ತೆಲಂಗಾಣ) : ಆ ವೃದ್ಧರನ್ನು ಕಂಡರೆ ಎಂತವರ ಹೃದಯ ಕೂಡ ಕರಗುತ್ತದೆ. ಆದ್ರೆ, ಸಿಟ್ಟಿನಲ್ಲಿ ವಿವೇಚನೆ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಪಾದರಕ್ಷೆಯಿಂದ ವೃದ್ಧನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಹಿರಿ ಜೀವ ಪ್ರಾಣ ಬಿಟ್ಟಿರುವ ದಾರುಣ ಘಟನೆ ಭದ್ರಾದ್ರಿ - ಕೊತ್ತಗುಡೆಂ ಜಿಲ್ಲೆಯ ಕೋಲಿಲೈನ್ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, "ಸ್ಥಳೀಯರಾದ ಮೃತ ದೊಡ್ಡ ಪೋಚಯ್ಯ (75) ಮತ್ತು ಲಚಮ್ಮ ದಂಪತಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಸಂಬಂಧಿಕರ ಮಗನಾದ ಚಂದೇರ್ನನ್ನು ತಂದು ಸಾಕಿದ್ದರು. ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಚಂದೇರ್ (30) ಅವಿವಾಹಿತ. ಒಮ್ಮೆ ಸ್ಥಳೀಯರಾದ ಹರಿಪ್ರಸಾದ್ ಎಂಬುವರ ಮನೆಯಲ್ಲಿ ಸಿಲಿಂಡರ್ ಅಳವಡಿಸುವಾಗ ಅವರ ಫೋನ್ ನಂಬರ್ ತೆಗೆದುಕೊಂಡಿದ್ದಾನೆ. ಬಳಿಕ ಫೋನ್ನಲ್ಲಿ ನನ್ನ ಪತ್ನಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿ, ತಿಂಗಳ ಹಿಂದೆಯಷ್ಟೇ ಇದೇ ವಿಚಾರವಾಗಿ ಚಂದೇರ್ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ಜೊತೆಗೆ, ಆತ ಬದಲಾಗದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು".
ಇದನ್ನೂ ಓದಿ : ತಿರುನಲ್ವೇಲಿಯ ವೀಕ್ಷಣಾ ಕೇಂದ್ರದಿಂದ 12 ಬಾಲಾಪರಾಧಿಗಳು ಪರಾರಿ.. ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು
"ಇತ್ತೀಚೆಗಷ್ಟೇ ಚಂದೇರ್ ತನ್ನ ಪೋಷಕರ ಬಳಿ ಬಂದಿದ್ದಾನೆ ಎಂಬ ವಿಷಯ ತಿಳಿದ ಹರಿಪ್ರಸಾದ್, ಭಾನುವಾರ ಮುಂಜಾನೆ ಕೋಪದಿಂದ ಅಲ್ಲಿಗೆ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಚಂದೇರ್ ವೃದ್ಧ ತಂದೆ ತಾಯಿಯನ್ನು ಮನಬಂದಂತೆ ಥಳಿಸಿದ್ದಾನೆ. ಐಟಿಸಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹರಿಪ್ರಸಾದ್, ಕರ್ತವ್ಯಕ್ಕೆ ಬಳಸುತ್ತಿದ್ದ ಶೂ ಧರಿಸಿಯೇ ಮನಬಂದಂತೆ ಒದ್ದಿದ್ದಾನೆ. ಹಲ್ಲೆ ಮಾಡಬೇಡ ಎಂದು ಬೇಡಿಕೊಂಡರೂ ಮಾತು ಕೇಳದೆ, ಪೋಚಯ್ಯನ ಎದೆಗೆ ಒದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೃದ್ಧೆಯ ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಮಗ ಚಂದೇರ್ ಎಲ್ಲಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಜೊತೆಗೆ, ಆರೋಪಿ ಕೂಡ ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆಸಲಾಗಿದೆ".
ಇದನ್ನೂ ಓದಿ : ಚೌಕಬಾರ ಆಡ್ತಿದ್ದ ಯುವಕರಿಗೆ ಬುದ್ಧಿ ಹೇಳಿದ ವ್ಯಕ್ತಿ ಮೇಲೆ ಹಲ್ಲೆ
ಇನ್ನು ಬಾಜಿಕಟ್ಟಿಕೊಂಡು ಚೌಕಬಾರ ಆಡ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ಕಳೆದ ತಿಂಗಳು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿತ್ತು. ಮಧು, ಶಶಿ, ರಂಜಿತ್ ಎಂಬ ಮೂವರು ತಮ್ಮ ಸಹಚರರನ್ನು ಕರೆದುಕೊಂಡು ಬಂದು ಮೈಲಾರಪ್ಪನನ್ನು ಥಳಿಸಿ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ : ಯುವತಿಗೆ ಬಸ್ನಲ್ಲಿ ಬಣ್ಣ ಹಚ್ಚಿ ರಾದ್ಧಾಂತ: ಸುಪಾರಿ ಕೊಟ್ಟು ಯುವಕನ ಕಿಡ್ನಾಪ್, ಹಲ್ಲೆ.. ಯುವತಿ ವಿರುದ್ಧ ಗಂಭೀರ ಆರೋಪ