ETV Bharat / bharat

ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ ಸಹೋದರ; ತಾಯಿ ಮೇಲೂ ದುಷ್ಕೃತ್ಯ ಯತ್ನ

ಕಾಮುಕ ಸಹೋದರನೋರ್ವ ತನ್ನಿಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

brother raped two sisters in Jharkhand
brother raped two sisters in Jharkhand
author img

By

Published : Apr 28, 2022, 5:44 PM IST

ಲೋಹರ್ಡಗಾ(ಜಾರ್ಖಂಡ್​): ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ನಾಚಿಕೆಗೇಡಿನ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಕಾಮುಕ ಸಹೋದರನೋರ್ವ ತನ್ನಿಬ್ಬರು ಸಹೋದರಿಯರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಇದರ ಬೆನ್ನಲ್ಲೇ ಹೆತ್ತ ತಾಯಿ ಮೇಲೂ ದುಷ್ಕೃತ್ಯಕ್ಕೆ ಮುಂದಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನ ಮಾಡಲಾಗಿದೆ.

ಲೋಹರ್ಡಗಾ ಪ್ರದೇಶದ ನಿವಾಸಿ ಗ್ಯಾರೇಜ್​​​ನಲ್ಲಿ ರಿಪೇರಿ ಕೆಲಸ ಮಾಡ್ತಿದ್ದ. ಮನೆಯಲ್ಲಿ ವಾಸವಾಗಿದ್ದ ಇಬ್ಬರು ಅಪ್ರಾಪ್ತೆಯರ ಮೇಲೆ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಭಾಷಾ ವಿವಾದದ ನಡುವೆ 'ಕೆಜಿಎಫ್​-2' ದಾಖಲೆ; ಹಿಂದಿಯಲ್ಲೇ ಅತಿ ಹೆಚ್ಚು ಗಳಿಸಿದ 3ನೇ ಸಿನಿಮಾ!

ಕಳೆದ ಮೂರು ವರ್ಷಗಳಿಂದ ಸಹೋದರಿಯರ ಮೇಲೆ ಅನೇಕ ಸಲ ಅತ್ಯಾಚಾರವೆಸಗಿರುವ ಕಾಮುಕ, ಹೆತ್ತ ತಾಯಿ ಮೇಲೂ ಅತ್ಯಾಚಾರ ನಡೆಸಲು ಯತ್ನಿಸಿದ್ದಾಗಿ ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಮತ್ತೊಮ್ಮೆ ತನ್ನ ಸಹೋದರಿ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಈ ವೇಳೆ ಸಂತ್ರಸ್ತೆ ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಾಯಿಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೇ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆತನ ವಿರುದ್ಧ ದೂರು ದಾಖಲಾಗಿದ್ದು, ಬಾಲಕಿಯರಿಬ್ಬರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.