ETV Bharat / bharat

ಗುಜರಾತ್​ ಸೇತುವೆ ದುರಂತ: ಮಡಿದವರ ಸಂಖ್ಯೆ 100ಕ್ಕೆ ಏರಿಕೆ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ..ಪಿಎಂ ರೋಡ್​ ಶೋ ರದ್ದು - ಸೇತುವೆ ದುರಂತದಲ್ಲಿ ಸಾವು

ಗುಜರಾತ್​ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 100 ಕ್ಕೆ ಏರಿಕೆ ಕಂಡಿದೆ.

gujarats morbi bridge collapses
ಗುಜರಾತ್​ ಸೇತುವೆ ದುರಂತ
author img

By

Published : Oct 31, 2022, 6:31 AM IST

Updated : Oct 31, 2022, 7:31 AM IST

ಮೊರ್ಬಿ(ಗುಜರಾತ್​): ಗುಜರಾತ್​ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 100 ಕ್ಕೆ ಏರಿಕೆ ಕಂಡಿದೆ. 177 ಜನರನ್ನು ರಕ್ಷಿಸಲಾಗಿದೆ. 19 ಮಂದಿ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

  • Morbi cable bridge collapse | Search & Rescue operation underway.

    The rescue operation is still underway. Indian Army had reached here around 3 at night. We are trying to recover the bodies. Teams of NDRF are also carrying out rescue operations: Major Gaurav, Indian Army pic.twitter.com/StD0Y8xOir

    — ANI (@ANI) October 31, 2022 " class="align-text-top noRightClick twitterSection" data=" ">

ಮೋದಿ ರೋಡ್​ ಶೋ ರದ್ದು: ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಪರಿಹಾರ ನೀಡಿದ್ದಾರೆ.

  • મોરબી ખાતે થયેલ દુર્ઘટનાથી અત્યંત દુ:ખી છું. આ અંગે ગુજરાતના મુખ્યમંત્રી શ્રી @Bhupendrapbjp તથા અન્ય અધિકારીઓ સાથે વાત કરી. રાહત અને બચાવ કામગીરી પુરઝડપે ચાલી રહી છે તથા અસરગ્રસ્તોને તમામ આવશ્યક સહાય પૂરી પાડવામાં આવી રહી છે.

    — Narendra Modi (@narendramodi) October 30, 2022 " class="align-text-top noRightClick twitterSection" data=" ">

ಇದೇ ವೇಳೆ, ಅಹಮದಾಬಾದ್‌ನಲ್ಲಿ ಇಂದು ಮೋದಿ ಅವರ ರೋಡ್‌ ಶೋ ನಿಗದಿಯಾಗಿಯಾಗಿತ್ತು. ಆದರೆ ಸೇತುವೆ ದುರಂತ ಸಂಭವಿಸಿದ್ದರಿಂದ ಮೋದಿ ಈ ಕಾರ್ಯಕ್ರಮ ರದ್ದಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಆಗಮಿಸಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • PM @narendramodi has announced an ex-gratia of Rs. 2 lakh from PMNRF for the next of kin of each of those who lost their lives in the mishap in Morbi. The injured would be given Rs. 50,000.

    — PMO India (@PMOIndia) October 30, 2022 " class="align-text-top noRightClick twitterSection" data=" ">

ಕೇಂದ್ರದಿಂದ 2, ರಾಜ್ಯ ಸರ್ಕಾರದಿಂದ 4 ಲಕ್ಷ ರೂ ಪರಿಹಾರ ಘೋಷಣೆ: ಪ್ರಧಾನಿ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರೆ, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ನೆರವು ಪ್ರಕಟಿಸಿದೆ.

ಮೋರ್ಬಿಯಲ್ಲಿ ಎನ್​ಡಿಆರ್​ಎಫ್​: ‘ಗಾಂಧಿನಗರ ಹಾಗೂ ವಡೋದರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಮೂರು ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ಮೊರ್ಬಿಗೆ ಕಳುಹಿಸಲಾಗಿದೆ. ಮತ್ತೊಂದು ತಂಡವು ರಾಜ್‌ಕೋಟ್‌ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಲಿದೆ’ ಎಂದು ಎನ್‌ಡಿಆರ್‌ಎಫ್‌ನ ಮಹಾ ನಿರ್ದೇಶಕ (ಡಿಜಿ) ಅತುಲ್‌ ಕರ್ವಾಲ್‌ ಹೇಳಿದ್ದಾರೆ.

  • Gujarat | Early morning visuals from the accident site in #Morbi where more than 100 people have lost their lives after a cable bridge collapsed.

    Gujarat Home Minister Harsh Sanghavi is also present at the spot. pic.twitter.com/TxtzWySFGT

ಸ್ಥಳದಲ್ಲೇ ಬೀಡುಬಿಟ್ಟ ಗುಜರಾತ್​ ಗೃಹ ಸಚಿವ: ಸ್ಥಳದಲ್ಲಿ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಕೂಡ ಹಾಜರಿದ್ದು ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಜನರು ಸೇತುವೆ ಮೇಲೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ 30 ಮಕ್ಕಳ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

  • Gujarat | Early morning visuals from Morbi Civil Hospital where the patients injured in the Morbi cable bridge collapse are admitted.

    More than 100 people died after the cable bridge collapsed yesterday evening. pic.twitter.com/S9zv3s8HIP

ಇನ್ನೊಂದು ಮೂಲಗಳ ಪ್ರಕಾರ ಅಕ್ಟೋಬರ್ 30ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ.

ನವೀಕರಣದ ಸೇತುವೆ ಗುಣಮಟ್ಟದ ಪರಿಶೀಲನೆ ಮಾಡಿರಲಿಲ್ಲ: ಇನ್ನು ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮಾಹಿತಿಯ ಪ್ರಕಾರ ದುರಂತ ಸಂಭವಿಸಿದ ತೂಗು ಸೇತುವೆ ಮೇಲೆ ಅಬ್ಬಬ್ಬಾ ಅಂದ್ರೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದ್ರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಂದ್ರೆ ಸುಮಾರು 500 ಜನರು ಸೇತುವೆ ಮೇಲೆ ನಿಂತಿದ್ದಕ್ಕೆ ಸೇತುವೆ ಕುಸಿದುಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನು ಓದಿ: ತೂಗು ಸೇತುವೆ ಕುಸಿದು 60ಕ್ಕೂ ಹೆಚ್ಚು ಜನ ಸಾವು: ರಾಷ್ಟ್ರಪತಿ ಮುರ್ಮು, ಮೋದಿ, ಶಾ ಸಂತಾಪ

Last Updated : Oct 31, 2022, 7:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.