ಲಕ್ನೋ (ಉತ್ತರ ಪ್ರದೇಶ): ಮದುವೆ ಅನ್ನೋದು ಅಪರೂಪದ, ಜೀವನದಲ್ಲಿ ಒಮ್ಮೆ ಮಾತ್ರ ಅನುಭವಿಸುವ ಸಂದರ್ಭ. ಇಂಥ ಸ್ಮರಣೀಯ ಘಳಿಗೆಯಲ್ಲಿ ಇಲ್ಲೊಬ್ಬ ವಧು ತಮ್ಮ ಸಂಬಂಧಿಕರೊಬ್ಬರು ನೀಡಿದ ರಿವಾಲ್ವರ್‌ನಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯ ನಂತರ ಆಕೆ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಹತ್ರಾಸ್ ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಧು-ವರರು ಪರಸ್ಪರ ಮದುವೆಯ ಹೂಮಾಲೆ ವಿನಿಮಯ ಮಾಡಿಕೊಂಡು, ಬಂಧು ಮಿತ್ರರ ಆಶೀರ್ವಾದ ಪಡೆದುಕೊಂಡಿದ್ದಾರೆ. ಆ ನಂತರ ವಧು ವರನ ಜೊತೆಗೆ ವೇದಿಕೆಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
-
Celebration Video from #Hathras, #UttarPradesh.
— Chaudhary Parvez (@ChaudharyParvez) April 9, 2023 " class="align-text-top noRightClick twitterSection" data="
Bride firing gun in own wedding.#India #GunControlNow pic.twitter.com/7UFMj2THOF
">Celebration Video from #Hathras, #UttarPradesh.
— Chaudhary Parvez (@ChaudharyParvez) April 9, 2023
Bride firing gun in own wedding.#India #GunControlNow pic.twitter.com/7UFMj2THOFCelebration Video from #Hathras, #UttarPradesh.
— Chaudhary Parvez (@ChaudharyParvez) April 9, 2023
Bride firing gun in own wedding.#India #GunControlNow pic.twitter.com/7UFMj2THOF
ಇದನ್ನೂ ಓದಿ : ಪೆಗಾಸಸ್ ಬಳಿಕ ಕಾಗ್ನೈಟ್ ಸ್ಪೈವೇರ್ ಖರೀದಿಗೆ ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್ ಗಂಭೀರ ಆರೋಪ
ಸ್ವಲ್ಪ ಸಮಯದ ನಂತರ ಕಪ್ಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಬಂದು ಲೋಡ್ ಮಾಡಿದ ರಿವಾಲ್ವರ್ ಅನ್ನು ವಧುವಿನ ಕೈಗೆ ನೀಡುತ್ತಾರೆ. ವಧು ಐದು ಸೆಕೆಂಡುಗಳಲ್ಲಿ ನಾಲ್ಕು ಸುತ್ತು ಗುಂಡು ಹಾರಿಸುತ್ತಾರೆ. ಗುಂಡು ಹಾರಿಸಿದ ನಂತರ ಹಿಂಭಾಗದಲ್ಲಿ ನಗುತ್ತಿದ್ದ ವ್ಯಕ್ತಿಗೆ ಬಂದೂಕನ್ನು ವಧು ಹಸ್ತಾಂತರಿಸುತ್ತಾಳೆ.
ಇದನ್ನೂ ಓದಿ : ಪ್ರೀತಿ, ಗುಟ್ಟಾಗಿ ಮದುವೆ, ನಿಂದನೆ ಆರೋಪ.. ನವ ವಿವಾಹಿತ ಆತ್ಮಹತ್ಯೆಗೆ ಶರಣು!
ಘಟನೆಯ ತನಿಖೆ: ಘಟನೆಯ ಬಗ್ಗೆ ಮಾತನಾಡಿದ ಹತ್ರಾಸ್ ಎಎಸ್ಪಿ ಅಶೋಕ್ ಕುಮಾರ್ ಸಿಂಗ್, ವಿಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ವಧುವಿನ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು. ವಧುವಿಗೆ ಬಂದೂಕು ಹಸ್ತಾಂತರಿಸಿದ ವ್ಯಕ್ತಿಯನ್ನು ಗುರುತಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : BMW ಕಾರ್‌ಗಾಗಿ ಬೇಡಿಕೆಯಿಟ್ಟು ಪತ್ನಿಯನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಪತಿ ಪರಾರಿ!
ಕ್ರಿಮಿನಲ್ ಅಪರಾಧ: ಉತ್ತರ ಭಾರತದ ರಾಜ್ಯಗಳಲ್ಲಿ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸಂಭ್ರಮಕ್ಕೆಂದು ಗುಂಡು ಹಾರಿಸುವುದಿದೆ. ಇದರಿಂದಾಗಿ ಕೆಲವೊಮ್ಮೆ ಅನೇಕ ಸಾವುನೋವುಗಳು ಸಂಭವಿಸಿವೆ. ಡಿಸೆಂಬರ್ 2019 ರಲ್ಲಿ ಕೇಂದ್ರವು ಶಸ್ತ್ರಾಸ್ತ್ರ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಸಂಭ್ರಮಾಚರಣೆಯ ವೇಳೆ ಗುಂಡು ಹಾರಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲಾಗಿದ್ದು, 2 ವರ್ಷಗಳ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಇದನ್ನೂ ಓದಿ : ಖಡ್ಗ ಝಳಪಿಸಿ ಬಿಜೆಪಿ ಶಾಸಕನಿಂದ ನೃತ್ಯ- ವಿಡಿಯೋ