ನವದೆಹಲಿ/ಗಾಜಿಯಾಬಾದ್: ಪೂರ್ವ ದೆಹಲಿಯ ನೆರೆಯ ಜಿಲ್ಲೆ ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿರುವ 140 ಕೈದಿಗಳಲ್ಲಿ ಎಚ್‌ಐವಿ ದೃಢಪಟ್ಟಿದೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಒಟ್ಟು 5,500 ಕೈದಿಗಳ ಪೈಕಿ 140 ಮಂದಿ ಎಚ್‌ಐವಿ ಪಾಸಿಟಿವ್ ಎಂದು ಕಂಡು ಬಂದಿದೆ. ಎಚ್‌ಐವಿ ಸೋಂಕಿತ ಕೈದಿಗಳಲ್ಲದೇ, 35 ಕೈದಿಗಳಲ್ಲಿ ಟಿಬಿ ಇರುವುದು ಸಾಬೀತಾಗಿದೆ. ಹೀಗಾಗಿ ಎಲ್ಲರಿಗೂ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಚ್‌ಐವಿಯಿಂದ ಬಳಲುತ್ತಿರುವ ರೋಗಿಯ ರೋಗ ನಿರೋಧಕ ಶಕ್ತಿ ನಾಶವಾಗುತ್ತದೆ ಮತ್ತು ಕ್ರಮೇಣ ಅದು ವ್ಯಕ್ತಿಯ ಸಾವಿಗೆ ಹತ್ತಿರವಾಗಲು ಕಾರಣವಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಆರೋಗ್ಯ ಇಲಾಖೆಯಿಂದ ತನಿಖೆ: ಈ ನಡುವೆ ಜೈಲಿನಲ್ಲಿ ಇರುವ ಕೈದಿಗಳಿಗೆ ಏಡ್ಸ್ ಹಬ್ಬಿದ್ದಾದರೂ ಹೇಗೆ ಎಂಬ ಪ್ರಶ್ನೆಯೂ ಎದ್ದಿದೆ. ಆರೋಗ್ಯ ಇಲಾಖೆ ಖೈದಿಗಳು ಹೇಗೆ ಎಚ್‌ಐವಿ ಸೋಂಕಿಗೆ ಒಳಗಾದರು ಎಂಬುದರ ಕುರಿತು ತನಿಖೆ ನಡೆಸುತ್ತಿದೆ.
ಇವು ಎಚ್‌ಐವಿ ಲಕ್ಷಣಗಳು
ವೃಷಣದಲ್ಲಿ ನೋವು - ಗುದನಾಳ ಮತ್ತು ಸ್ಕ್ರೋಟಮ್ ನಡುವೆ ನೋವು ಕಂಡು ಬರುವುದು
* ಪ್ರಾಸ್ಟೇಟ್ ಗ್ರಂಥಿಯಲ್ಲಿ ಊತ
* ಶಿಶ್ನ ಪ್ರದೇಶದಲ್ಲಿ ಊತ
* ಶಿಶ್ನದ ಮೇಲೆ ಗಾಯವಾಗುವುದು
* ಹೈಪೊಗೊನಾಡಿಸಮ್‌ನ ಲಕ್ಷಣಗಳು ಗೋಚರಿಸುವುದು
ಟಿಬಿ ರೋಗಲಕ್ಷಣಗಳಿವು
* ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಇರುವುದು
* ವಿಶೇಷವಾಗಿ ಸಂಜೆ ಜ್ವರ ಕಾಣಿಸಿಕೊಳ್ಳುವುದು
* ಎದೆಯಲ್ಲಿ ನೋವು
* ತೂಕ ಇಳಿಕೆ
* ಹಸಿವಾಗದಿರುವುದು
* ಲೋಳೆಯೊಂದಿಗೆ ರಕ್ತಸ್ರಾವ
ಇದನ್ನು ಓದಿ; ದೆಹಲಿ, ಪಂಜಾಬ್ ಬಳಿಕ ಹಿಮಾಚಲದಲ್ಲೂ ಕಂಪಿಸಿದ ಭೂಮಿ: 4.1 ತೀವ್ರತೆ ದಾಖಲು