ನವದೆಹಲಿ: ಕೊರೊನಾ ಸೋಂಕಿತರಿಗೆ ಲಸಿಕೆ ನೀಡಿಕೆ ಸಂಬಂಧ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸೋಂಕಿತರು ಗುಣಮುಖರಾದ 3 ತಿಂಗಳ ನಂತರ ಅವರಿಗೆ ಬೋಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದ್ದಾರೆ.
-
The Additional Secretary & Mission Director NHM writes a letter to states and UT's that if a beneficiary tests positive then all vaccination including precaution dose to be deferred by 3 months after recovery. pic.twitter.com/bQvW9scGpn
— ANI (@ANI) January 22, 2022 " class="align-text-top noRightClick twitterSection" data="
">The Additional Secretary & Mission Director NHM writes a letter to states and UT's that if a beneficiary tests positive then all vaccination including precaution dose to be deferred by 3 months after recovery. pic.twitter.com/bQvW9scGpn
— ANI (@ANI) January 22, 2022The Additional Secretary & Mission Director NHM writes a letter to states and UT's that if a beneficiary tests positive then all vaccination including precaution dose to be deferred by 3 months after recovery. pic.twitter.com/bQvW9scGpn
— ANI (@ANI) January 22, 2022
ಈ ಸಂಬಂಧ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಸೋಂಕು ಕಂಡುಬಂದ ನಂತರ ಮೂರು ತಿಂಗಳ ವರೆಗೆ ಲಸಿಕೆ ನೀಡುವುದಿಲ್ಲ. ಈ ಸಲಹೆಯು ವೈಜ್ಞಾನಿಕ ಪುರಾವೆ ಹಾಗೂ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಆರಂಭಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಕೋವಿಡ್ ಸೋಂಕಿತ ಅರ್ಹ ವ್ಯಕ್ತಿಗಳಿಗೆ ಬೂಸ್ಟರ್ ಡೋಸೇಜ್ ಬಗ್ಗೆ ಮಾರ್ಗದರ್ಶನಕ್ಕಾಗಿ ವಿವಿಧ ವಲಯಗಳಿಂದ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ವಿಕಾಸ್ ಶೀಲ್ ಹೇಳಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ