ETV Bharat / bharat

ಕೋರಮಂಡಲ್​ ರೈಲಿಗೆ 'ಕರಾಳ ಶುಕ್ರವಾರ': 14 ವರ್ಷಗಳ ಹಿಂದೆ ಹಳಿತಪ್ಪಿ ನಡೆದಿತ್ತು ದುರಂತ! - ಕೋರಮಂಡಲ್​ ಎಕ್ಸ್​​ಪ್ರೆಸ್​ ರೈಲು ಅಪಘಾತ

ಕೋರಮಂಡಲ್​ ರೈಲಿಗೂ ಶುಕ್ರವಾರಕ್ಕೂ ಅಷ್ಟಕ್ಕಷ್ಟೇ. 2009 ರಲ್ಲಿ ಶುಕ್ರವಾರದಂದೇ ದುರಂತಕ್ಕೀಡಾಗಿತ್ತು. ನಿನ್ನೆಯ ಶುಕ್ರವಾರವೂ ಹಳಿತಪ್ಪಿ ನೂರಾರು ಜನರ ಸಾವಿಗೆ ಕಾರಣವಾಗಿದೆ.

ಕೋರಮಂಡಲ್​ಗೆ ರೈಲಿಗೆ ಕರಾಳ ಶುಕ್ರವಾರ
ಕೋರಮಂಡಲ್​ಗೆ ರೈಲಿಗೆ ಕರಾಳ ಶುಕ್ರವಾರ
author img

By

Published : Jun 3, 2023, 11:35 AM IST

Updated : Jun 3, 2023, 12:45 PM IST

ಬಾಲಸೋರ್​( ಒಡಿಶಾ): ಅಂದು 2009 ರ ಫೆಬ್ರವರಿ 13(ಶುಕ್ರವಾರ). ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ಹಳಿತಪ್ಪಿ ದುರಂತಕ್ಕೀಡಾಗಿತ್ತು. ಘಟನೆಯಲ್ಲಿ 16 ಪ್ರಯಾಣಿಕರು ಸಾವನ್ನಪ್ಪಿ, 161 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ನಿನ್ನೆ(ಜೂನ್​ 2) ಕೂಡ ಕೋರಮಂಡಲ್​​ ಎಕ್ಸ್​ಪ್ರೆಸ್​ ಒಡಿಶಾದ ಬನಹಗಾ ರೈಲು ನಿಲ್ದಾಣದಲ್ಲಿ ಮತ್ತೆ ಹಳಿತಪ್ಪಿ ಅಪಘಾತಕ್ಕೀಡಾಗಿದೆ. 14 ವರ್ಷಗಳ ನಂತರ ಇದೇ ರೈಲು ಒಂದೇ ದಿನ ಅಂದರೆ ಶುಕ್ರವಾರದಂದೇ ಅಪಘಾತಕ್ಕೀಡಾಗಿರುವುದು ವಿಪರ್ಯಾಸ.

2009 ರಲ್ಲಿ ಏನಾಗಿತ್ತು?: ಬರೋಬ್ಬರಿ 14 ವರ್ಷಗಳ ಹಿಂದೆ ವೇಗವಾಗಿ ಸಾಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಜಾಜ್‌ಪುರ ರಸ್ತೆ ರೈಲು ನಿಲ್ದಾಣವನ್ನು ದಾಟುವಾಗ ಹಳಿ ಬದಲಿಸುವ ವೇಳೆ ಹಳಿತಪ್ಪಿತ್ತು. ಇದರಿಂದ 13 ಬೋಗಿಗಳೂ ಅಪಘಾಕ್ಕೀಡಾಗಿದ್ದವು. 11 ಸ್ಲೀಪರ್ ಕ್ಲಾಸ್ ಮತ್ತು ಎರಡು ಜನರಲ್ ಬೋಗಿಗಳು ಪರಸ್ಪರ ಗುದ್ದಿಕೊಂಡಿದ್ದವು. ರೈಲಿನ ಇಂಜಿನ್ ಮತ್ತೊಂದು ಟ್ರ್ಯಾಕ್‌ಗೆ ಹೋದಾಗ, ಬೋಗಿಗಳೆಲ್ಲವೂ ಹಳಿತಪ್ಪಿ ರೈಲಿನಿಂದ ಡಿಲಿಂಕ್ ಆಗಿದ್ದವು. ಕೆಲ ಬೋಗಿಗಳು ಒಂದರ ಮೇಲೆ ಒಂದು ಬಿದ್ದು ಅನಾಹುತ ಸೃಷ್ಟಿಯಾಗಿತ್ತು.

ಇದೀಗ ಜೂನ್​ 2ರ ಶುಕ್ರವಾರದಂದೇ ಕೋರಮಂಡಲ್​ ಎಕ್ಸ್​​ಪ್ರೆಸ್​ ರೈಲು ಮತ್ತೆ ಅಪಘಾತಕ್ಕೀಡಾಗಿದೆ. ಅಂದಿನಿಂತೆಯೇ ಹಳಿ ತಪ್ಪಿದೆ. 12 ವರ್ಷಗಳಲ್ಲೇ ಅತಿ ದೊಡ್ಡ ರೈಲ್ವೆ ದುರಂತ ಇದಾಗಿದೆ. ಕೋರಮಂಡಲ್​, ಹೌರಾ ಮತ್ತು ಗೂಡ್ಸ್​ ರೈಲುಗಳ ನಡುವಿನ ಡಿಕ್ಕಿಯಿಂದಾಗಿ 238 ಜನರು ದುರ್ಮರಣಕ್ಕೀಡಾಗಿದ್ದಾರೆ.

ತಮಿಳುನಾಡು ಸರ್ಕಾರದಿಂದ 5 ಲಕ್ಷ ರೂ. ಪರಿಹಾರ: ರೈಲು ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಶನಿವಾರ ಬಾಲಸೋರ್ ರೈಲು ಅಪಘಾತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. ಸ್ಟಾಲಿನ್ ಅವರು ಚೆನ್ನೈನಲ್ಲಿರುವ ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್‌ಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.

ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡುವುದಾಗಿ ತಿಳಿಸಿದರು. ಈ ವೇಳೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಅಪಘಾತದ ಬಗ್ಗೆ ಕೇಳಿದ ನಂತರ ನಾನು ನವೀನ್ ಪಟ್ನಾಯಕ್ ಅವರೊಂದಿಗೆ ಮಾತನಾಡಿದ್ದೇನೆ. ತಮಿಳುನಾಡು ಸರ್ಕಾರದ ಪರವಾಗಿ ಸಾಧ್ಯವಿರುವ ಎಲ್ಲ ನೆರವನ್ನು ನೀಡುವ ಭರವಸೆ ನೀಡಿದ್ದೇನೆ ಎಂದರು.

ಸಚಿವರಾದ ಉದಯನಿಧಿ ಸ್ಟಾಲಿನ್, ಶಿವಶಂಕರ್ ಮತ್ತು ಕೆಲ ಅಧಿಕಾರಿಗಳು ಒಡಿಶಾಗೆ ತೆರಳಿದ್ದಾರೆ. ನಿನ್ನೆಯಿಂದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ರೈಲು ಅಪಘಾತದಲ್ಲಿ ತೊಂದರೆಗೀಡಾದ ಜನರಿಗೆ ಮತ್ತು ಅವರ ಕುಟುಂಬಸ್ಥರಿಗಾಗಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯ ಇರುವವರಿಗೆ ನೆರವು ನೀಡುತ್ತಿದೆ. ಅಪಘಾತದಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ತಮಿಳರ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳಿಲ್ಲ. ನಮ್ಮ ಅಧಿಕಾರಿಗಳು ಒಡಿಶಾ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಹೇಳಿದರು.

ಒಡಿಶಾಗೆ ತೆರಳಿದ ಸಚಿವರು: ತಮಿಳುನಾಡು ಸಚಿವರಾದ ಸಿ, ಶಿವಶಂಕರ್ ಮತ್ತು ಅನ್ಬಿಲ್ ಮಹೇಶ್ ಒಡಿಶಾದ ಬಾಲಸೋರ್‌ಗೆ ಒಡಿಶಾ ರೈಲು ಅಪಘಾತದ ವಿವರಗಳನ್ನು ಕೇಳಲು ತೆರಳಿದ್ದಾರೆ. ಇಂದು ಮುಂಜಾನೆ ಅವರು ಚೆನ್ನೈ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.

ಓದಿ: ಬಾಲಸೋರ್​ ರೈಲು ಅಪಘಾತ: ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ

Last Updated : Jun 3, 2023, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.