ಚೆನ್ನೈ: ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಒಂದೇ ಹಂತದಲ್ಲಿ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಘೋಷಣೆಯಾಗಲಿದೆ.
ತಮಿಳುನಾಡಿನಲ್ಲಿ ಈಗಾಗಲೇ ಎಐಎಡಿಎಂಕೆ-ಭಾರತೀಯ ಜನತಾ ಪಾರ್ಟಿ ಮೈತ್ರಿ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಎರಡು ಪಕ್ಷಗಳ ನಡುವೆ ಕ್ಷೇತ್ರಗಳ ಹೊಂದಾಣಿಕೆಯಾಗಿದೆ. 20 ಕ್ಷೇತ್ರಗಳನ್ನು ಭಾರತೀಯ ಜನತಾ ಪಾರ್ಟಿಗೆ ಬಿಟ್ಟುಕೊಡಲು ಎಐಎಡಿಎಂಕೆ ಒಪ್ಪಿಕೊಂಡಿದ್ದು, ಇದರ ಜತೆಗೆ ಕನ್ಯಾಕುಮಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ.
ಇದನ್ನೂ ಓದಿ: ತಮಿಳುನಾಡು ವಿಧಾನ ಕದನ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಐಎಡಿಎಂಕೆ
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭಾಗಿಯಾಗಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಎಐಎಡಿಎಂಕೆ ಪಕ್ಷದಿಂದ ರಿಲೀಸ್ ಆಗಿದ್ದು, ಮುಖ್ಯಮಂತ್ರಿ ಪಳನಿಸ್ವಾಮಿ ಎಡಪ್ಪಾಡಿ ಕ್ಷೇತ್ರದಿಂದ ಹಾಗೂ ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಬೋಡಿನಾಯಕನೂರ್ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.