ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಮತದಾರ ತನ್ನ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತೆ ಕಾಣುತ್ತಿದೆ. 68 ವಿಧಾನಸಭಾ ಕ್ಷೇತ್ರಗಳ ಪೈಕಿ ಆರಂಭಿಕ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. 34 ಸ್ಥಾನಗಳಲ್ಲಿ ಕೈ ಪಕ್ಷ ಮುಂದಿದ್ದರೆ, ಬಿಜೆಪಿ 33 ಸ್ಥಾನಗಳಲ್ಲಿ ಮುನ್ನುಗ್ಗುತ್ತಿದೆ. ಆಪ್ ಪ್ರಭಾವ ಇಲ್ಲಿ ಇಲ್ಲವಾಗಿದೆ.
ಹಿಮಾಚಲಪ್ರದೇಶದಲ್ಲಿ 1985 ರಿಂದಲೂ ಇಲ್ಲಿನ ಜನರು ಯಾವುದೇ ಪಕ್ಷಕ್ಕೆ ಎರಡನೇ ಬಾರಿಗೆ ಅಧಿಕಾರ ನೀಡಿಲ್ಲ. ಈ ಬಾರಿ ಬಿಜೆಪಿ ಈ ದಾಖಲೆ ಮುರಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರ ತನ್ನ ಕರಾಮತ್ತು ಮುಂದುವರಿಸಿದ್ದು, ಕಾಂಗ್ರೆಸ್ ಪರ ವಾಲಿರುವ ಸಾಧ್ಯತೆ ಇದೆ.
ಇನ್ನು ದೆಹಲಿ, ಪಂಜಾಬ್ನಲ್ಲಿ ಅಧಿಕಾರಕ್ಕೇರಿ ಗುಜರಾತ್ನಲ್ಲಿ ಸದ್ದು ಮಾಡಿರುವ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಹಿಮಾಚಲಪ್ರದೇಶದಲ್ಲಿ ಸೊನ್ನೆ ಸುತ್ತಿದೆ. ಪಕ್ಷ ಇಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಸ್ವತಂತ್ರ ಅಭ್ಯರ್ಥಿಯೊಬ್ಬರು ಮುನ್ನಡೆಯಲ್ಲಿದ್ದಾರೆ.
ಹಿಮಾಚಲಪ್ರದೇಶ ವಿಧಾನಸಭೆಗೆ 68 ಸ್ಥಾನಗಳಿಗೆ ನವೆಂಬರ್ 12ರಂದು ಮತದಾನ ನಡೆದಿದ್ದು, ಶೇ.75ರಷ್ಟು ಮತ ಚಲಾವಣೆಯಾಗಿದೆ. ಇಲ್ಲಿ ಒಟ್ಟಾರೆ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಓದಿ: ಗುಜರಾತ್ ಚುನಾವಣೆಯಲ್ಲಿ ಹೇಗಿದೆ ಜಾತಿ ಸಮೀಕರಣ? ಇಲ್ಲಿದೆ ಒಂದಿಷ್ಟು ಮಾಹಿತಿ!