ETV Bharat / bharat

ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಉಸ್ತುವಾರಿ ನೇಮಿಸಿದ ಬಿಜೆಪಿ: ಪ್ರಹ್ಲಾದ್ ಜೋಶಿಗೆ ಉತ್ತರಾಖಂಡ ಹೊಣೆ - ಪಂಜಾಬ್ ವಿಧಾನಸಭಾ ಚುನಾವಣೆ

ಮುಂದಿನ ವರ್ಷ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷವು ಉಸ್ತುವಾರಿ ಮತ್ತು ಸಹ-ಉಸ್ತುವಾರಿಗಳನ್ನು ನೇಮಿಸಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ಪಂಜಾಬ್ ಹೊರತುಪಡಿಸಿ, ಉಳಿದೆಲ್ಲಾ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2022 ರ ವಿಧಾನಸಭಾ ಚುನಾವಣೆಯನ್ನು 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತಿದೆ.

ಪ್ರಹ್ಲಾದ್ ಜೋಶಿಗೆ ಉತ್ತರಾಖಂಡ ಹೊಣೆ
ಪ್ರಹ್ಲಾದ್ ಜೋಶಿಗೆ ಉತ್ತರಾಖಂಡ ಹೊಣೆ
author img

By

Published : Sep 8, 2021, 3:55 PM IST

Updated : Sep 8, 2021, 5:36 PM IST

ನವದೆಹಲಿ: ಮುಂದಿನ ವರ್ಷದ ಮೊದಲಾರ್ಧದಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಎಲ್ಲಾ ರಾಜ್ಯಗಳಿಗೆ ಪಕ್ಷದ ಉಸ್ತುವಾರಿಗಳನ್ನು ಇಂದು ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶಕ್ಕೆ ಪ್ರಧಾನ್:

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಶೋಭಾ ಕರಂದ್ಲಾಜೆ ಮತ್ತು ಅನ್ನಪೂರ್ಣ ದೇವಿ, ರಾಜ್ಯಸಭಾ ಸಂಸದರಾದ ಸರೋಜ್ ಪಾಂಡೆ ಮತ್ತು ವಿವೇಕ್ ಠಾಕೂರ್ ಮತ್ತು ಹರಿಯಾಣದ ಮಾಜಿ ಸಚಿವ ಕ್ಯಾಪ್ಟನ್ ಅಭಿಮನ್ಯು ಅವರನ್ನು ಉತ್ತರ ಪ್ರದೇಶದ ಸಹ-ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶಕ್ಕೆ ಬಿಜೆಪಿ ಪ್ರಾದೇಶಿಕ ಉಸ್ತುವಾರಿಗಳನ್ನು ಕೂಡ ನೇಮಿಸಿದೆ. ಪಶ್ಚಿಮ ಉತ್ತರ ಪ್ರದೇಶಕ್ಕೆ ಲೋಕಸಭಾ ಸಂಸದ ಸಂಜಯ್ ಭಾಟಿಯಾ, ಬ್ರಿಜ್​ನ ಉಸ್ತುವಾರಿಯಾಗಿ ಬಿಹಾರದ ಶಾಸಕ ಸಂಜೀವ್ ಚೌರಾಸಿಯಾ, ಅವಧ್ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೈ.ಸತ್ಯ ಕುಮಾರ್, ಕಾನ್ಪುರದ ಉಸ್ತುವಾರಿಯಾಗಿ ಪಕ್ಷದ ಜಂಟಿ ಖಜಾಂಚಿ ಸುಧೀರ್ ಗುಪ್ತಾ, ಗೋರಖಪುರಕ್ಕೆ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ ಮೆನನ್, ಕಾಶಿಗೆ ಪಕ್ಷದ ರಾಜ್ಯ ವ್ಯವಹಾರಗಳ ಸಹ-ಉಸ್ತುವಾರಿ ಸುನಿಲ್ ಓಜಾ ಅವರ ಹೆಗಲಿಗೆ ಉಸ್ತುವಾರಿ ಜವಾಬ್ದಾರಿ ಬಿದ್ದಿದೆ.

ಪಂಜಾಬ್‌ಗೆ​ ಗಜೇಂದ್ರ ಸಿಂಗ್ ಶೇಖಾವತ್:

ಪಂಜಾಬ್ ವಿಧಾನಸಭಾ ಚುನಾವಣೆಗೆ, ಬಿಜೆಪಿ ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಪಕ್ಷದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಚಿವ ಮೀನಾಕ್ಷಿ ಲೇಖಿ ಮತ್ತು ಲೋಕಸಭಾ ಸಂಸದ ವಿನೋದ್ ಚಾವ್ಡಾ ಅವರನ್ನು ರಾಜ್ಯಕ್ಕೆ ಸಹ-ಉಸ್ತುವಾರಿಯಾಗಿದ್ದಾರೆ.

ಮಣಿಪುರದ ಉಸ್ತುವಾರಿ ಭೂಪೇಂದ್ರ ಯಾದವ್ ಹೆಗಲಿಗೆ:

ಕೇಂದ್ರ ಕಾರ್ಮಿಕ, ಉದ್ಯೋಗ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರು ಮಣಿಪುರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಉಸ್ತುವಾರಿ ವಹಿಸಲಿದ್ದಾರೆ. ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಮತ್ತು ಅಸ್ಸೋಂ ಸಚಿವ ಅಶೋಕ್ ಸಿಂಘಾಲ್ ಅವರನ್ನು ಸಹ-ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಗೋವಾ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ನೇಮಕ:

ಗೋವಾ ವಿಧಾನಸಭಾ ಚುನಾವಣೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಪಕ್ಷದ ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಮತ್ತು ರಾಜ್ಯ ಸಚಿವ ದರ್ಶನಾ ಜರ್ದೋಷ್ ಸಹ ಉಸ್ತುವಾರಿಗಳಾಗಿದ್ದಾರೆ.

ಉತ್ತರಾಖಂಡದ ಹೊಣೆ ಪ್ರಹ್ಲಾದ್ ಜೋಶಿಗೆ:

ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಲೋಕಸಭಾ ಸಂಸದ ಲಾಕೆಟ್ ಚಟರ್ಜಿ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಸರ್ದಾರ್ ಆರ್.ಪಿ ಸಿಂಗ್ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿರುವ ಪಂಜಾಬ್ ಹೊರತುಪಡಿಸಿ, ಉಳಿದ ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2022ರ ವಿಧಾನಸಭಾ ಚುನಾವಣೆಯನ್ನು 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ: ಉತ್ತರಾಖಂಡ ಗವರ್ನರ್‌ ಬೇಬಿ ರಾಣಿ ಮೌರ್ಯ ರಾಜೀನಾಮೆ

Last Updated : Sep 8, 2021, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.