ETV Bharat / bharat

ತೆಲಂಗಾಣ ಚುನಾವಣೆ: ಸಿಎಂ ಕೆಸಿಆರ್ ವಿರುದ್ಧ ಇಬ್ಬರು ಕಣಕ್ಕೆ; ಮೂವರು ಸಂಸದರು ಸೇರಿ 52 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - telangana bjp mla candidates first list

ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಮೂವರು ಸಂಸದರಿಗೆ ಟಿಕೆಟ್​ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
author img

By PTI

Published : Oct 22, 2023, 4:05 PM IST

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ರಾಷ್ಟ್ರ ಸಮಿತಿ (ಬಿಆರ್​ಎಸ್​) ವಿರುದ್ಧ ಹೋರಾಡಲು ಬಿಜೆಪಿ ತನ್ನ ಹುರಿಯಾಳುಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿತು. ಇದರಲ್ಲಿ ಮೂವರು ಹಾಲಿ ಸಂಸದರು, 12 ಮಹಿಳೆಯರು ಸೇರಿದಂತೆ 52 ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ.

  • The Central Election Committee of the Bharatiya Janata Party has decided the following names for the ensuing General Elections to the Legislative Assembly of Telangana. pic.twitter.com/dnadYpuiYa

    — BJP (@BJP4India) October 22, 2023 " class="align-text-top noRightClick twitterSection" data=" ">

ಸಿಎಂ ವಿರುದ್ಧ ಇಬ್ಬರ ಸ್ಪರ್ಧೆ: ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಕ್ಕರ್​ ನೀಡಲು ಸಿಎಂ ಕೆಸಿಆರ್​ ಸ್ಪರ್ಧಿಸಲಿರುವ ಗಜ್ವೆಲ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಟಾಲ ರಾಜೇಂದರ್ ಅವರನ್ನು ಅಖಾಡಕ್ಕೆ ಇಳಿಸಲಾಗಿದ್ದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ಕೆ.ವೆಂಕಟ ರಮಣ ರೆಡ್ಡಿ ಅವರು ಸ್ಪರ್ಧೆ ಮಾಡಲಿದ್ದಾರೆ. ಕೆಸಿಆರ್​ ಗಜ್ವೆಲ್ ಮತ್ತು ಕಾಮರೆಡ್ಡಿ ಎರಡೂ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಮೂವರು ಸಂಸದರಿಗೂ ಮಣೆ ಹಾಕಲಾಗಿದೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಹಾಲಿ ಸಂಸದ ಬಂಡಿ ಸಂಜಯ್ ಕುಮಾರ್ (ಕರೀಂನಗರ ಕ್ಷೇತ್ರ) ಸೋಯಂ ಬಾಪು ರಾವ್ ಮತ್ತು ಧರ್ಮಪುರಿ ಅರವಿಂದ್ ಅವರು ಕ್ರಮವಾಗಿ ಬೋತ್ ಮತ್ತು ಕೊರಟ್ಲಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಅಮಾನತು ಹಿಂಪಡೆದು ಟಿಕೆಟ್​: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತಾಗಿದ್ದ ಹಾಲಿ ಶಾಸಕ ಟಿ.ರಾಜಾ ಸಿಂಗ್ ಅವರಿಗೆ ಪ್ರಸ್ತುತ ಕ್ಷೇತ್ರವಾದ ಗೋಶಾಮಹಲ್​ ಟಿಕೆಟ್​ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಅವರ ಮೇಲಿದ್ದ ಅಮಾನತನ್ನು ಹಿಂಪಡೆಯಲಾಗಿತ್ತು.

ಈ ಬಗ್ಗೆ ಅವರು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, 'ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ಗೋಶಾಮಹಲ್ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೆಟಿಆರ್​ vs ರುದ್ರಮಾ: ಸಿರ್ಸಿಲ್ಲಾದ ಅಭ್ಯರ್ಥಿಯಾಗಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ, ಸಿಎಂ ಕೆಸಿಆರ್ ಪುತ್ರ ಕೆ.ಟಿ.ರಾಮರಾವ್ ವಿರುದ್ಧ ರಾಣಿ ರುದ್ರಮಾ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. 52 ಅಭ್ಯರ್ಥಿಗಳ ಪಟ್ಟಿಯಲ್ಲಿ 12 ಮಹಿಳಾ ಸ್ಪರ್ಧಿಗಳಿಗೆ ಟಿಕೆಟ್ ನೀಡಲಾಗಿದೆ.

ವಿಧಾನಸಭಾ ಚುನಾವಣೆಗೆ ಮೂವರು ಸಂಸದರನ್ನು ಕಣಕ್ಕಿಳಿಸುವ ಪಕ್ಷದ ಕಾರ್ಯತಂತ್ರದ ಕುರಿತು ಬಿಜೆಪಿಯ ಹಿರಿಯ ನಾಯಕ ಎನ್.ರಾಮಚಂದ್ರ ರಾವ್ ಮಾತನಾಡಿ, ಪಕ್ಷವು ಅಭ್ಯರ್ಥಿಗಳ ಸಾಮರ್ಥ್ಯದ ಆಧಾರದ ಮೇಲೆ ಟಿಕೆಟ್ ನೀಡಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಇದರಿಂದ ವಿಧಾನಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ. ಹೊಸ ಮುಖಗಳನ್ನು ಕಣಕ್ಕಿಳಿಸಿ ಪರೀಕ್ಷಿಸುವ ಕಾಲ ಇದಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರ, ಇಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.