ನವದೆಹಲಿ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ಅವರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಅಧಿಕಾರಿ ಪ್ರಧಾನಿ ಜೊತೆ ಮಾತುಕತೆ ನಡೆಸಿ ಕುತೂಹಲ ಕೆರಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಸುವೇಂದು ಅಧಿಕಾರಿ ಇದೇ ಮೊದಲ ಬಾರಿಗೆ ಬಿಜೆಪಿಯ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿಯವರನ್ನು ನಂದಿಗ್ರಾಮದಲ್ಲಿ ಅಧಿಕಾರಿ ಸೋಲಿಸಿದ್ದರು.
ಅಧಿಕಾರಿಯ ತಮ್ಮನ್ನು ಭೇಟಿಯಾದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದಾರೆ.
-
Met the Leader of the Opposition in the West Bengal Assembly, Shri Suvendu Adhikari. @SuvenduWB pic.twitter.com/HJXsOKxk1h
— Narendra Modi (@narendramodi) June 9, 2021 " class="align-text-top noRightClick twitterSection" data="
">Met the Leader of the Opposition in the West Bengal Assembly, Shri Suvendu Adhikari. @SuvenduWB pic.twitter.com/HJXsOKxk1h
— Narendra Modi (@narendramodi) June 9, 2021Met the Leader of the Opposition in the West Bengal Assembly, Shri Suvendu Adhikari. @SuvenduWB pic.twitter.com/HJXsOKxk1h
— Narendra Modi (@narendramodi) June 9, 2021
ಸುವೇಂದು ಅಧಿಕಾರಿಕೂಡ ಪ್ರಧಾನಿಯನ್ನು ಭೇಟಿಯಾದ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ. ಅವರ ಅಮೂಲ್ಯವಾದ ಸಮಯವನ್ನು ನನ್ನ ಜೊತೆ ವಿನಿಯೋಗಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಬಂಗಾಳದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುಮಾರು 45 ನಿಮಿಷ ವಿಸ್ತಾರವಾಗಿ ಮಾತನಾಡಿದ್ದೇನೆ. ಬಂಗಾಳದ ಅಭಿವೃದ್ದಿಗಾಗಿ ಅವರ ಸಹಕಾರ ಮತ್ತು ನಿರ್ದೇಶನಗಳನ್ನು ಕೋರಿದ್ದೇನೆ ಎಂದು ತಿಳಿಸಿದ್ದಾರೆ.
-
Blessed to meet the Honourable PM Shri @narendramodi Ji. I thank him for his precious time spared for me.
— Suvendu Adhikari • শুভেন্দু অধিকারী (@SuvenduWB) June 9, 2021 " class="align-text-top noRightClick twitterSection" data="
Detailed discussion took place for almost 45 minutes regarding Bengal and several other political issues. Sought his support and guidance for the development of West Bengal. pic.twitter.com/uLvGgo5XV9
">Blessed to meet the Honourable PM Shri @narendramodi Ji. I thank him for his precious time spared for me.
— Suvendu Adhikari • শুভেন্দু অধিকারী (@SuvenduWB) June 9, 2021
Detailed discussion took place for almost 45 minutes regarding Bengal and several other political issues. Sought his support and guidance for the development of West Bengal. pic.twitter.com/uLvGgo5XV9Blessed to meet the Honourable PM Shri @narendramodi Ji. I thank him for his precious time spared for me.
— Suvendu Adhikari • শুভেন্দু অধিকারী (@SuvenduWB) June 9, 2021
Detailed discussion took place for almost 45 minutes regarding Bengal and several other political issues. Sought his support and guidance for the development of West Bengal. pic.twitter.com/uLvGgo5XV9
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗಿನ ಭೇಟಿಯ ಬಗ್ಗೆಯೂ ಅಧಿಕಾರಿ ಟ್ವೀಟ್ ಮಾಡಿದ್ದು, ತೋಮರ್ ಅವರನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ಬಂಗಾಳದಲ್ಲಿ ಮನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಈ ಬಗ್ಗೆ ಗಮನಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಎಫ್ಐಆರ್ ಬೆನ್ನಲ್ಲೇ ದೆಹಲಿ ಭೇಟಿ
ಸರ್ಕಾರದ ಪರಿಹಾರ ಸಾಮಗ್ರಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಂಟೈ ಮುನ್ಸಿಪಲ್ ಆಡಳಿತ ಮಂಡಳಿಯ ಸದಸ್ಯ ರತ್ನದೀಪ ಮನ್ನಾ ಎಂಬವರು ಜೂನ್ 1 ರಂದು ಸುವೇಂದು ಅಧಿಕಾರಿ ಅವರ ಸಹೋದರ ಸೌಮೇಂದು ಅಧಿಕಾರಿ ವಿರುದ್ಧ ಕಂಟೈ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸುವೇಂದು-ಸೌಮೇಂದು ಮತ್ತು ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬಿಜೆಪಿಯ ಸುವೇಂದು ಅಧಿಕಾರಿ ಸಹೋದರರ ವಿರುದ್ಧ ಎಫ್ಐಆರ್, ಆಪ್ತನ ಬಂಧನ