ಉತ್ತರ ದಿನಜ್ಪುರ್: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಇಸ್ಲಾಂಪುರದಲ್ಲಿ ನಡೆದಿದೆ.
ಸಿಲಿಗುರಿಯಿಂದ ಬಿಜೆಪಿ ನಾಯಕ ಮತ್ತು ಇಸ್ಲಾಂಪುರ ಮಾಜಿ ಕೌನ್ಸಿಲರ್ ಅಯಾನ್ ಚಂದ್ರ ಸೇರಿದಂತೆ ರಾಹುಲ್ ಘೋಷ್ ಮತ್ತು ಜಾಯ್ ಗೋಪಾಲ್ ಇಸ್ಲಾಂಪುರ್ಗೆ ಕಾರಿನಲ್ಲಿ ಹಿಂದಿರುಗಿತ್ತಿದ್ದರು. ಇಸ್ಲಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಂಟ್ಬಾಗನ್ನ ರಾಷ್ಟ್ರೀಯ ಹೆದ್ದಾರಿ 31ರ ಬಳಿ ನಿಂತಿದ್ದ ಟ್ರಕ್ಗೆ ಇವರು ಪ್ರಯಾಣಿಸುತ್ತಿದ್ದ ಕಾರ್ ಗುದ್ದಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಇಸ್ಲಾಂಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದು, ಆಸ್ಪತ್ರೆಯತ್ತ ದೌಡಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.